ಸುದ್ದಿಗಳು

‘ಒಡೆಯ’ ದರ್ಶನ್ ಹಾಗೂ ಅವರ ತಮ್ಮಂದಿರು

‘ಯಜಮಾನ’ ಚಿತ್ರದ ನಂತರ ‘ಒಡೆಯ’ ಚಿತ್ರೀಕರಣದಲ್ಲಿ ಭಾಗಿಯಾಗಿರುವ ದಚ್ಚು

ಬೆಂಗಳೂರು,ಡಿ.13: ಕೆಲವು ತಿಂಗಳುಗಳ ಹಿಂದೆಯಷ್ಟೇ ದರ್ಶನ್ ರಿಗೆ ಅಪಘಾತವಾಗಿತ್ತು. ಆನಂತರ ಆ ನೋವಿನಲ್ಲಿಯೂ ಅವರು ಸಿನಿಮಾರಂಗದ ಕೆಲವು ಕಾರ್ಯಕ್ರಮಗಳಿಗೆ ಹಾಜರಾಗಿದ್ದರು. ಹಾಗೆಯೇ ‘ಯಜಮಾನ’ ಚಿತ್ರದ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದರು. ಈಗ ‘ಒಡೆಯ’ ಚಿತ್ರದ ಚಿತ್ರೀಕರಣ ಶುರುವಾಗಿದೆ.

ಸಹೋದರರ ಕಥೆ

ಅಂದ ಹಾಗೆ ಈ ಚಿತ್ರ ತಮಿಳಿನ ‘ವೀರಂ’ ರಿಮೇಕ್ ಆಗಿದ್ದು, ಚಿತ್ರವು ನಾಲ್ವರು ತಮ್ಮಂದಿರ ಕತೆಯನ್ನು ಒಳಗೊಂಡಿದೆ. ತಮಿಳಿನಲ್ಲಿ ಅಜಿತ್, ವಿದ್ಯಾರ್ಥ್, ಬಾಲಾ, ಮುನೀಶ್ ಹಾಗೂ ಸುಹೆಲ್ ಚಂದೋಕ್ ನಟಿಸಿದ್ದರು. ಕನ್ನಡದಲ್ಲಿ ದರ್ಶನ್ ರಿಗೆ ತಮ್ಮಂದಿರರಾಗಿ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಪುತ್ರ ಪಂಕಜ್, ಯಶಸ್ ಸೂರ್ಯ, ನಿರಂಜನ್ ಹಾಗೂ ಸಮರ್ಥ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರದ ಬಗ್ಗೆ

ಈ ಚಿತ್ರದಲ್ಲಿ ದರ್ಶನ್ ಹೇಗೆ ಕಾಣುತ್ತಾರೆ ಎಂಬ ಕುತೂಹಲವಿತ್ತು. ಹೀಗಾಗಿ ಅವರು ಮತ್ತು ಅವರ ನಾಲ್ವರು ತಮ್ಮಂದಿರು ಹೇಗೆ ಕಾಣುತ್ತಾರೆ ಎಂಬ ಕುತೂಹಲಕ್ಕೆ ಸ್ವತಃ ದರ್ಶನ್ ಅವರೇ ಸೆಲ್ಫೀ ತೆಗೆದುಕೊಂಡು ಟ್ವೀಟ್ ಮಾಡಿದ್ದಾರೆ.

ದರ್ಶನ್ ಮತ್ತು ಎಂ.ಡಿ ಶ್ರೀಧರ್ ಜೋಡಿ

‘ಬುಲ್ ಬುಲ್’, ಮತ್ತು ‘ಪೊರ್ಕಿ’ ಚಿತ್ರಗಳ ನಂತರ ನಿರ್ದೇಶಕ ಎಂ ಡಿ ಶ್ರೀಧರ್ ಮತ್ತೆ ದರ್ಶನ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದರಿಂದ ಚಿತ್ರದ ಬಗ್ಗೆ ಒಂದು ಮಟ್ಟದ ನಿರೀಕ್ಷೆಯಿದೆ. ಈ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದು, ಎಂ.ಡಿ ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಕೊಡಗಿನ ಕುವರಿ ರಾಘವಿ ತಿಮ್ಮಯ್ಯ ಅಭಿನಯಿಸುತ್ತಿದ್ದಾರೆ.

Tags