ಸುದ್ದಿಗಳು

ಗಜೇಂದ್ರ ಟ್ರಾನ್ಸಪೋರ್ಟ್ ಓನರ್ ಆದ ಆದ ದರ್ಶನ್ ತೂಗುದೀಪ

‘ಒಡೆಯ’ನಲ್ಲಿ ‘ಗಜೇಂದ್ರ’ನ ಹವಾ

ಬೆಂಗಳೂರು.ಫೆ.20

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಹಾಗೂ ನವ್ಯಾ ನಾಯರ್ ನಟಿಸಿದ್ದ ‘ಗಜ’ ಚಿತ್ರದ ನಂತರ ದರ್ಶನ್ ‘ಗಜ’ ಎಂಬ ಹೆಸರು ಬ್ರ್ಯಾಂಡ್ ಆಗಿ ಸೃಷ್ಟಿಯಾಗಿತ್ತು. ದರ್ಶನ್ ಕೂಡ ‘ಗಜ’ ಅಂತಲೇ ಫೇಮಸ್ ಆಗಿಬಿಟ್ಟರು. ಈಗಲೂ ‘ಗಜ’ ಹೆಸರಿಗೆ ಅನ್ವರ್ಥನಾಮ ದರ್ಶನ್. ಅಂದ್ಹಾಗೆ ‘ಬಾಕ್ಸ್ ಆಫೀಸ್ ಸುಲ್ತಾನ’ ಮತ್ತೊಮ್ಮೆ ಗಜನಾಗಲು ಮುಂದಾಗಿದ್ದಾರೆ.

ಗಜೇಂದ್ರ ಟ್ರಾನ್ಸಪೋರ್ಟ್

ಎಂ.ಡಿ ಶ್ರೀಧರ್ ನಿರ್ದೇಶನ ಮಾಡುತ್ತಿರುವ ‘ಒಡೆಯ’ ಚಿತ್ರದಲ್ಲಿ ಗಜೇಂದ್ರ ಬ್ರದರ್ಸ್ ಟ್ರೇಡರ್ಸ್ ಆ್ಯಂಡ್ ಟ್ರಾನ್ಸಪೋರ್ಟ್ ಮಾಲೀಕನಾಗಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಈ ‘ಗಜೇಂದ್ರ ಟ್ರಾನ್ಸಪೋರ್ಟ್’ ನ ಬೋರ್ಡ್ ಅನ್ನು ಚಿತ್ರದ ಕಲಾವಿದರು ಹಿಡಿದುಕೊಂಡಿರುವ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

ಚಿತ್ರದ ಬಗ್ಗೆ

ಅಂದ ಹಾಗೆ ಇದು ತಮಿಳಿನ ‘ವೀರಂ’ ಚಿತ್ರದ ರಿಮೇಕ್ ಆಗಿದ್ದು, ಚಿತ್ರದಲ್ಲಿ ಐದು ಮಂದಿ ಸಹೋದರರ ಪ್ರೀತಿಯ ಅಣ್ಣನ ಕಥೆ ಇದಾಗಿದೆ. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ, ತಮಿಳಿನಲ್ಲಿ ಅಜಿತ್ ಮಾಡಿದ್ದ ಪಾತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಸಹೋದರರ ಪಾತ್ರದಲ್ಲಿ ನಿರಂಜನ್, ಪಂಕಜ್, ಯಶಸ್ ಸೂರ್ಯ ನಟಿಸುತ್ತಿದ್ದಾರೆ.

ಮದಗಜ

ಅಂದ ಹಾಗೆ ದರ್ಶನ್ ನಟಿಸುತ್ತಿರುವ 55 ನೇ ಚಿತ್ರಕ್ಕೆ ‘ಮದಗಜ’ ಎಂಬ ಹೆಸರಿಡಲಾಗಿತ್ತು. ಆದರೆ ಗೆಳೆಯ ಶ್ರೀಮುರುಳಿಗೆ ಈ ಟೈಟಲ್ ಅನ್ನು ದರ್ಶನ್ ಬಿಟ್ಟುಕೊಟ್ಟರು. ಇನ್ನು ಮತ್ತೆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವ ಅಭಿಮಾನಿಗಳು ಡಿ ಬಾಸ್ ಮತ್ತೆ ಗಜ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಒಬ್ಬ ಪ್ರಖ್ಯಾತ ನಾಯಕ ನಟಿ, ನನ್ನನ್ನು ತಂದೆಯಂತೆ ಕಂಡಳು: ಶಂಕರ್ ಅಶ್ವತ್

#odeya, #balkaninews #filmnews, #kannadasuddigalu #d51, #pankaj

Tags

Related Articles