ಸುದ್ದಿಗಳು

ಯೂ ಟ್ಯೂಬ್ ನಲ್ಲಿ ಸದ್ದು ಮಾಡ್ತಿದೆ ಮಾಡ್ರನ್ ಮ್ಯೂಸಿಕ್ ನ ಅಯ್ಯಪ್ಪನ ಹಾಡು…

ಈಗ ಎಲ್ಲೆಡೆ ಪುಕ್ಸಟ್ಟೆ ಲೈಫು ಹಾಡಿನದ್ದೇ ಹವಾ..!

ಈಗೀಗ ಗಾಂಧಿನಗರದಲ್ಲಿ ಡಿಫ್ರೆಂಟ್ ಟೈಟಲ್ ನ ಮೂಲಕ ಸಿನಿಪ್ರಿಯರ ಸೆಳೆಯೋ ಚಿತ್ರಗಳ ಟ್ರೆಂಡ್ ಶುರುವಾಗಿದೆ. ರಿಲೀಸ್ ಗೂ ಮೊದಲೇ ಹಾಡು,ಟ್ರೈಲರ್,ಟೀಸರ್ ಅಂತ ದೊಡ್ಡ ಮಟ್ಟದಲ್ಲಿ ಕ್ಯೂರಿಯಾಸಿಟಿನ ಬಿಲ್ಡ್ ಮಾಡಿರ್ತಾವೆ.ಅಂಥಹದ್ದೇ ಚಿತ್ರ


“ಪುಕ್ಸಟ್ಟೆ ಲೈಫು ಪುರ್ಸೊತ್ತೇ ಇಲ್ಲ” .ಎಸ್ ಸಂಚಾರಿ ವಿಜಯ್ ಅಭಿನಯದ “ಪುಕ್ಸಟ್ಟೆ ಲೈಫು ಪುರ್ಸೊತ್ತೇ ಇಲ್ಲ” ಸಿನಿಮಾ ಶೂಟಿಂಗ್ ಕಂಪ್ಲೀಟ್ ಗೊಳಿಸಿಕೊಂಡು ಬಹುತೇಕ ಬಿಡುಗಡೆಗೆ ಸಿದ್ಧವಾಗಿರೋ ಸಿನ್ಮಾ. ಈ ಸಿನಿಮಾಗಾಗಿನೇ ತಯಾರಾಗಿದ್ದ ಅಯ್ಯಪ್ಪ ಹಾಡು ಹಲವು ದಿನಗಳಿಂದ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿಸಿತ್ತು. ಈಗ  ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಹಾಡು ರಿಲೀಸ್ ಆಗಿದ್ದು, ಮಾಡರ್ನ್ ಫೀಲ್ನಲ್ಲಿ ರಾಗ ಸಂಯೋಜನೆಯಾಗಿರುವುದು ಸಿನಿಭಕ್ತರ ಹಾರ್ಟ್ ಗೆ ಲಗ್ಗೆ ಇಟ್ಟಿದೆ.


ವಾಸು ದೀಕ್ಷಿತ್ ಸಾಹಿತ್ಯ ಬರೆಯೋದ್ರ ಜೊತೆ ಸಂಗೀತ ನಿರ್ದೇಶನವನ್ನೂ ಮಾಡಿರೋ ಈ  ಅಯ್ಯಪ್ಪ ಅಯ್ಯಪ್ಪ ಹಾಡಗೆ ವಾಸು ದೀಕ್ಷಿತ್ ಜೊತೆ ಅದಿತಿ ಸಾಗರ್ ಧ್ವನಿಯಾಗಿದ್ದಾರೆ. ಜೋಲ್ ಸಕ್ಕರಿ ಅವರಿಂದ ಗಿಟಾರ್, ನಂದಕಿಶೋರ್ ದೇಸಾಯಿ ಅವರಿಂದ ಹಾರ್ಮೋನಿಯಂ, ಸಂದೀಪ್ ವಶಿಷ್ಠರಿಂದ ಸ್ಯಾಕ್ಸೋಫೋನ್ ಮತ್ತು ಪ್ರಣವ್ ಸ್ವರೂಪ್ ಅವರಿಂದ ವಯೋಲಿನ್ ಪಕ್ಕಾ ವಾದ್ಯ ಈ ಹಾಡಿನಲ್ಲಿ ಸೇರಿ ಅಯ್ಯಪ್ಪ ಅಯ್ಯಪ್ಪ ಹಾಡಿಗೆ ಇನ್ನಷ್ಟು ಜೀವಕಳೆ ತುಂಬಿದಂತಾಗಿ ಯೂ ಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದೆ.

ಇನ್ನು ದೊಡ್ಡ ನಗರದಲ್ಲಿ ಬದುಕು ಕಟ್ಟಿಕೊಳ್ಳುವ ಕನಸ ಹೊತ್ತು ಬರುವ ಜನರು ಇಲ್ಲಿಗೆ ಬಂದ ನಂತ್ರ ಅನುಭವಿಸೋ ನರಕಯಾತನೆಯನ್ನ ಹಾಸ್ಯಾತ್ಮಕವಾಗಿ ತರುವ ಪ್ರಯತ್ನಕ್ಕೆ ಅರವಿಂದ್ ಕುಪ್ಳಿಕರ್ ಅವರು ಆ್ಯಕ್ಷನ್ ಕಟ್  ಹೇಳಿದ್ದಾರೆ.  ಈ “ಪುಕ್ಸಟ್ಟೆ ಲೈಫು ಪುರ್ಸೊತ್ತೇ ಇಲ್ಲ” ಸಿನಿಮಾದಲ್ಲಿ ಸಂಚಾರಿ ವಿಜಯ್ ಮುಖ್ಯ ಪಾತ್ರದಲ್ಲಿದ್ದರೆ, ಇತರ ತಾರಾಗಣದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಸೇರಿದಂತೆ ಹಲವರು ಪ್ರಮುಖ ತಿರುವಿನ ಪಾತ್ರಗಳಲ್ಲಿ ನಟಿಸಿದ್ದಾರೆ.ಟೈಟಲ್ ಒಂಥರಾ ಕ್ಯಾಚಿಯಾಗಿದ್ದು, ಈಗಿನ ಲೈಫ್ ಸ್ಟೈಲ್ ಗೆ ಹೋಲಿಕೆಯಾಗುವಂತಿರೋದ್ರಿಂದ ಸಿನ್ಮಾ ದ ಕಂಟೆಂಟ್ ಹೇಗಿರತ್ತೆ ಅನ್ನೊ ಪ್ರಶ್ನೆಯೊಂದಿಗೆ ಚಿತ್ರ ರಿಲೀಸ್ ಆಗೋತನಕ ಅಯ್ಯಪ್ಪನ ಈ ಬ್ಯೂಟಿಫುಲ್ ಸಾಂಗ್ ಕೇಳಿ ಥ್ರಿಲ್ ಆಗಬೇಕಿದೆ.

#PuksatteLifu #KannadaCinema #KannadaFilm #KannadaIndusty #Sandalwood
Tags