ಸುದ್ದಿಗಳು

ನಮೋ ವೆಂಕಟೇಶಾ, ನಮೋ ಶ್ರೀನಿವಾಸಾ.. : ಮೋಡಿ ಮಾಡಿದ ‘ಒಂಭತ್ತನೇ ಅದ್ಬುತ’ ಸಾಂಗ್

ಆಸ್ಕರ್ ಗುರುತಿಗೆ ಮತ, ಮಂಡ್ಯಕ್ಕೆ ಹಿತ

ಬೆಂಗಳೂರು.ಏ.16: ಸಂತೋಷ್ ಕುಮಾರ್ ಬೆಟಗೇರಿ ನಟಿಸಿ, ನಿರ್ಮಾಣ ಹಾಗೂ ನಿರ್ದೇಶನ ಮಾಡಿರುವ ‘ಒಂಭತ್ತನೇ ಅದ್ಬುತ’ ಚಿತ್ರವು ಈಗಾಗಲೇ ತನ್ನ ವಿಭಿನ್ನ ಪೋಸ್ಟರ್ ಮತ್ತು ಟ್ರೈಲರ್ ಮೂಲಕ ಎಲ್ಲರ ಗಮನ ಸೆಳೆದಿದ್ದು, ಮುಂದಿನ ತಿಂಗಳ ಮೊದಲ ವಾರ ತೆರೆಗೆ ಬರುತ್ತಿದೆ.

ಇನ್ನು ಚಿತ್ರದ ‘ನಮೋ ವೆಂಕಟೇಶಾ, ನಮೋ ಶ್ರೀನಿವಾಸಾ’ ಎಂಬ ಸಾಲಿನ ಹಾಡು ರಿಲೀಸ್ ಆಗಿ ಮೋಡಿ ಮಾಡುತ್ತಿದೆ. ಈ ಹಾಡನ್ನು ವೇಣುಗೋಪಾಲ್ ಕೃಷ್ಣ ರಚಿಸಿದ್ದು, ಜೆಸ್ಸಿ ಗಿಪ್ಟ್ ಹಾಡಿದ್ದಾರೆ. ಚಿತ್ರಕ್ಕೆ ಸುನೀಲ್ ಕೋಶಿ ಸಂಗೀತ ನೀಡಿದ್ದು, ಝೇಂಕಾರ್ ಮ್ಯೂಸಿಕ್ ನವರು ಈ ಹಾಡನ್ನು ತಮ್ಮ ಯುಟ್ಯೂಬ್ ಚಾನಲ್ ಮೂಲಕ ಬಿಡುಗಡೆ ಮಾಡಲಾಗಿದೆ.

ಇನ್ನು ಟ್ರೈಲರ್ ನಲ್ಲಿ ‘ತಿಥಿ’ ಖ್ಯಾತಿಯ ಸೆಂಚೂರಿ ಗೌಡರನ್ನು ನಮೋ ಎಂದು ಕರೆಯುತ್ತಾರೆ. ಇಲ್ಲಿ ಅವರ ಹಾವಳಿನೇ ಹೆಚ್ಚಾಗಿರುತ್ತದೆ. ಎಲ್ಲರೂ ಅವರ ಸಾವನ್ನು ಬಯಸುವವರೇ, ಹೀಗಿರುವಾಗ ಒಂದು ದಿನ ಅವರ ಸಾವಾಗುತ್ತದೆ. ಆಗ ಎಲ್ಲಾ ಚಿತ್ರಗಳಲ್ಲಿರುವಂತೆ , ನಾಯಕನ ಎಂಟ್ರಿಯಾಗುತ್ತದೆ. ಹೀಗೆ ಕಚಗುಳಿ ಕೊಡುವ ಟ್ರೈಲರ್ ನಲ್ಲಿಯೇ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಮೂಡಿಸುತ್ತಾರೆ ನಿರ್ದೇಶಕರು.

ಲೋಕಸಭಾ ಚುಣಾವಣೆ 2019.. ಬಹುಶಃ ಮಂಡ್ಯ ಕ್ಷೇತ್ರದಲ್ಲಾಗುತ್ತಿರುವ ಎಲೆಕ್ಷನ್ ಪ್ರಚಾರ ಮತ್ತು ಸುದ್ದಿಯಷ್ಟು ಬೇರೆ ಯಾವ ಕಡೆಯೂ ಆಗುತ್ತಿಲ್ಲ. ಈ ಕ್ಷೇತ್ರದ ಅಭ್ಯರ್ಥಿಗಳಾಗಿ ಸುಮಲತಾ ಅಂಬರೀಶ್ ಹಾಗೂ ನಿಖಿಲ್ ಕುಮಾರ್ ಸ್ಪರ್ಧಿಸುತ್ತಿದ್ದು, ಸದ್ಯ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಈ ನಡುವೆ ನೀವು ಓಟ್, ಅಕ್ಕಂಗಾದ್ರೂ ಹಾಕಿ, ತಮ್ಮಂಗಾದ್ರೂ ಹಾಕಿ, ಗೆಲ್ಲೊದು ನಾನೇಯ ಎಂದ ಸೆಂಚುರಿ ಗೌಡ್ರು..!!!

ವಿಶೇಷವೆಂದರೆ, ಸೆಂಚುರಿ ಗೌಡ್ರು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲೊದು ನಾನೇಯ ಎನ್ನುತ್ತಿದ್ದಾರೆ. ಅವರ ಹೇಳಿಕೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು, ಸಿಕ್ಕಾಪಟ್ಟೆ ಕುತೂಹಲ ಮೂಡಿಸುತ್ತಿದ್ದು, ಮೇ ತಿಂಗಳ ದಿನಾಂಕ 3 ರಂದು ಫಲಿತಾಂಶವೂ ಸಹ ಹೊರ ಬರಲಿದೆ.

ಅರೇ.. ಇದೇನಿದು.. ಸೆಂಚುರಿ ಗೌಡ್ರು ಯಾವ ಚುನಾವಣೆಗೆ ನಿಂತು ಕೊಂಡಿದ್ದಾರೆ ಎಂದು ಯೋಚಿಸುತ್ತಿದ್ದೀರಾ..? ಅವರು ಯಾವ ಚುನಾವಣೆಗೂ ನಿಂತಿಲ್ಲಾ, ಆದರೆ, ಯಾವ ಚುನಾವಣೆಗೂ ಕಡಿಮೆಯಿಲ್ಲದ್ದಂತೆ ರೇಸ್ ನಲ್ಲಿದ್ದಾರೆ. ಅವರು ನಟಿಸಿರುವ ‘ಒಂಭತ್ತನೇ ಅದ್ಭುತ’ ಚಿತ್ರವು ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸುತ್ತಿದೆ.

ಕುಟುಂಬದ ಸದಸ್ಯರು ಒಟ್ಟಾಗಿ ಕುಳಿತುಕೊಂಡು ನೋಡುವ ಸಿನಿಮಾ ಇದಾಗಿದ್ದು ಚಿತ್ರದಲ್ಲಿ ಹಾಸ್ಯದೊಂದಿಗೆ ಮನರಂಜನೆಯೂ ಇದೆ. ಚಿತ್ರಕ್ಕೆ ನಾಯಕಿಯಾಗಿ ನಯನಾ ಸಾಯಿ ನಟಿಸಿದ್ದು, ಉಳಿದಂತೆ ರಘು ಪಾಂಡೇಶ್, ಮೈಕಲ್ ಮಧು, ನರಸಿಂಹ ಜೋಶಿ ಸೇರಿದಂತೆ ಅನೇಕರಿದ್ದಾರೆ.

‘ಗುಲ್ಲಿ ಬಾಯ್’ ತೆಲುಗು ರಿಮೇಕ್ ನಲ್ಲಿ ವಿಜಯ್ ದೇವರಕೊಂಡ!!?!!

#ombattaneabdutha, #readytorealsed, #balkaninews #filwnews, #kannadasuddiaglu, #senchurigowdru

Tags