ಸುದ್ದಿಗಳು

‘ಒಂದಲ್ಲಾ ಎರಡಲ್ಲಾ’ ಚಿತ್ರಕ್ಕೆ ಸಿಕ್ತು ಮುಂಬೈ ವಿಮರ್ಶಕರಿಂದ ಪ್ರಶಸ್ತಿ

ಸ್ವಲ್ಪ ತಡವಾದರೂ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ

ಬೆಂಗಳೂರು.ಏ.22: ‘ರಾಮಾ ರಾಮಾ ರೇ’ ಚಿತ್ರದ ಬಳಿಕ ಸತ್ಯ ಪ್ರಕಾಶ್ ಆ್ಯಕ್ಷನ್ ಕಟ್ ಹೇಳಿದ್ದ ‘ಒಂದಲ್ಲಾ ಎರಡಲ್ಲಾ’ ಚಿತ್ರವು ನೋಡುಗರಿಂದ ಪ್ರಶಂಸೆ ಪಡೆದಿತ್ತು. ಇದೀಗ ಈ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿ ಸಿಕ್ಕಿದೆ.

ಹೌದು, ಮುಂಬೈನಲ್ಲಿ ನಡೆದ ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ‘ಒಂದಲ್ಲಾ ಎರಡಲ್ಲಾ’ ಚಿತ್ರ ಪಡೆದಿದೆ. ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್ ಪ್ರಶಸ್ತಿಯನ್ನು ಈವರೆಗೆ ಕಿರು ಚಿತ್ರಗಳಿಗೆ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಸಿನಿಮಾಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಮೊದಲ ಬಾರಿಯೇ ‘ಒಂದಲ್ಲಾ ಎರಡಲ್ಲಾ’ ಚಿತ್ರ ಪ್ರಶಸ್ತಿ ಗೆದ್ದಿದೆ.

Image result for ಒಂದಲ್ಲಾ ಎರಡಲ್ಲಾ’

ವಿಶೇಷವೆಂದರೆ, ಈ ಪ್ರಶಸ್ತಿಗಾಗಿ ಕನ್ನಡದ ‘ನಾತಿಚರಾಮಿ’, ‘ಅಮ್ಮಚ್ಚಿಯೆಂಬ ನೆನಪು’ ಹಾಗೂ ‘ಒಂದಲ್ಲಾ ಎರಡಲ್ಲಾ’ ಚಿತ್ರವು ಸ್ಪರ್ಧೆಯಲ್ಲಿದ್ದವು. ಕೊನೆಗೂ ಈ ಪ್ರಶಸ್ತಿ (CCFA” critic’s choice film award. Mumbai) ಒಂದಲ್ಲಾ ಎರಡಲ್ಲಾ ಚಿತ್ರದ ಪಾಲಾಗಿದೆ. ಈ ಬಗ್ಗೆ ಧನ್ಯವಾದಗಳನ್ನು ಚಿತ್ರತಂಡ ಅರ್ಪಿಸಿದೆ.

ಅಂದ ಹಾಗೆ ಈ ಪ್ರಶಸ್ತಿಗಾಗಿ ಈ ವರ್ಷ ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ, ಮಲೆಯಾಳಂ ಹೀಗೆ ಭಾರತದ ಪ್ರಮುಖ ಭಾಷೆಯ ಸಿನಿಮಾಗಳು ಭಾಗಿಯಾಗಿದ್ದವು. ಅವುಗಳಲ್ಲಿ ಕನ್ನಡದ ‘ಒಂದಲ್ಲಾ ಎರಡಲ್ಲಾ’ ಚಿತ್ರಕ್ಕೆ ಪ್ರಶಸ್ತಿ ಬಂದಿದೆ.

ಇನ್ನು ಮುಂಬೈನ ಪತ್ರಕರ್ತರು, ಸಿನಿಮಾ ವಿಮರ್ಶಕರು ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್ ಪ್ರಶಸ್ತಿಯನ್ನು ನೀಡುತ್ತಿದ್ದರೆ. ಈ ವರ್ಷದಿಂದ ಈ ಪ್ರಶಸ್ತಿ ಮೂಲಕ ಭಾರತದ ಬೆಸ್ಟ್ ಸಿನಿಮಾವನ್ನು ಆಯ್ಕೆ ಮಾಡಲಾಗುತ್ತಿದೆ.

ಸಮೀರ (ರೋಹಿತ್ ಪಾಂಡವಪುರ) ಪುಟ್ಟ ಬಾಲಕ. ಆತನಿಗೆ ಭಾನು (ಹಸು) ಕಂಡರೆ ಪ್ರಾಣ. ಸದಾ ಭಾನು ಜೊತೆಗೆ ಸಮೀರನ ಆಟ. ಒಂದಿನ ಭಾನು ಕಳೆದುಹೋಗ್ತಾಳೆ. ಭಾನುನ ಹುಡುಕಿಕೊಂಡು ಮುಗ್ಧ ಸಮೀರ ಪೇಟೆಗೆ ಬರುತ್ತಾನೆ. ಅಲ್ಲಿ ಸಮೀರ ಎದುರಿಸುವ ಸನ್ನಿವೇಶಗಳೇ ‘ಒಂದಲ್ಲಾ ಎರಡಲ್ಲಾ’ ಚಿತ್ರದ ಹೂರಣ.

ಚಿತ್ರದಲ್ಲಿ ರೋಹಿತ್ ಪಾಂಡವಪುರ, ನಾಗಭೂಷಣ್, ಸಾಯಿ ಕೃಷ್ಣ ಕುಡ್ಲ, ಆನಂದ್ ನೀನಾಸಂ, ರಂಜಾನ್ ಸಾಬ್ ಉಳ್ಳಾಗಡ್ಡಿ, ಪ್ರಭುದೇವ ಹೊಸದುರ್ಗ ಸೇರಿದಂತೆ ಅನೇಕರಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಸಂಜನಾ ಸಹೋದರ…!!!

#ondallayeradalla, #movie, #award, #balkaninews #kannadasuddigalu,

Tags