ಸುದ್ದಿಗಳು

‘ಒಂದು ಸಣ್ಣ ಬ್ರೇಕ್ ನ ನಂತರ’ ಚಿತ್ರತಂಡದ ದೀಪಾವಳಿ ಸಂಭ್ರಮ

ಹೊಸಬರ ಸಿನಿಮಾ

ಬೆಂಗಳೂರು, ನ.08: ‘ಒಂದು ಸಣ್ಣ ಬ್ರೇಕ್‌ ನ ನಂತರ’ ಚಿತ್ರದ ಹಾಡು ಹಾಗೂ ಟ್ರೇಲರ್ ಮೂಲಕ ಸೌಂಡ್ ಮಾಡುತ್ತಿರುವ  ಹೊಸಬರ ಚಿತ್ರ, ಇನ್ನೇನು ತೆರೆಗೆ ಬರಲು ರೆಡಿಯಾಗಿದೆ. ಇತ್ತೀಚೆಗೆ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ್ದು, ಸರ್ವಶ್ರೀ ಬ್ಯಾನರ್‌ ನಲ್ಲಿ ನಿರ್ಮಾಣವಾದ ಈ ಸಿನಿಮಾಗೆ ಅಭಿಲಾಷ್ ಗೌಡ ಕಥೆ ಬರೆದು ನಿರ್ದೇಶನ ಮಾಡಿದ್ದು, ಇಡೀ ಚಿತ್ರತಂಡ ದೀಪಾವಳಿ ಹಬ್ಬದ ದಿನ ಸುರು ಸುರು ಬತ್ತಿ, ಪಟಾಕಿ ಹೊಡೆದು, ದೀಪ ಬೆಳಗುವ ಮೂಲಕ ಅರ್ಥಪೂರ್ಣವಾಗಿ ದೀಪಾವಳಿ ಆಚರಣೆ ಮಾಡಿದ್ದಾರೆ.

ದೀಪ ಹಚ್ಚಿ ಅರ್ಥಪೂರ್ಣವಾಗಿ ದೀಪಾವಳಿ ಆಚರಣೆ

ಹಿತನ್ ಹಾಸನ್ ಸಂಗೀತ ನಿರ್ದೇಶನವನ್ನು ಮಾಡುವುದರ ಜೊತೆಗೆ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದ ನಿರ್ದೇಶಕ ಅಭಿಲಾಷ್ ಗೌಡ ಚಿತ್ರರಂಗಕ್ಕೆ ಬರುವ ಮುನ್ನ ಐದು ವರ್ಷ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರರಂಗಕ್ಕೆ ಬಂದು ಇಲ್ಲೊಂದು ಸಿನಿಮಾ ಮಾಡಿದ್ದಾರೆ. ದೀಪದಿಂದ ದೀಪ ಹಚ್ಚಿ ಕತ್ತಲಿನಿಂದ ಬೆಳಕು ಮಾಡಿ ಎನ್ನುವ ಸಂದೇಶ ಸಾರುತ್ತಾ ದೀಪವಳಿಯನ್ನು ಆಚರಣೆ ಮಾಡಿದೆ ಚಿತ್ರತಂಡ. ‘ಒಂದು ಸಣ್ಣ ಬ್ರೇಕ್‌ ನ ನಂತರ’ ಸಿನಿಮಾದಲ್ಲಿ ‘ಬಾರೋ ಬಡ್ಡೆತಾವ ಮಂಡ್ಯಾ ರ‍್ಯಾಪ್ ಮಾಡುವ’ ಸಾಂಗ್ ಎಲ್ಲರ ಗಮನ ಸೆಳೆದಿದೆ.. ಮಂಡ್ಯ ಶೈಲಿಯಲ್ಲಿರೋ ಈ ಸಾಂಗ್ ಸದ್ಯ ಎಲ್ಲರ ಬಾಯಲ್ಲಿ ಗುನುಗುಟ್ಟುತ್ತಿದೆ.. ಈ ಚಿತ್ರದಲ್ಲಿ ಚೇತನ್ ಕೂಡಾ ಒಂದು ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Tags