ಸುದ್ದಿಗಳು

‘ಒಂಟಿ’ಯಾಗಿದ್ದೀನಿ ಎಂದ ‘ರಾಣಿ ಹುಲಿ’ ಮೇಘನಾ ರಾಜ್

ಇದೇ ತಿಂಗಳ 11 ರಂದು ‘ಒಂಟಿ’ ಚಿತ್ರದ ಟ್ರೈಲರ್ ರಿಲೀಸ್

ಸಾಯಿರಾಂ ಕ್ರಿಯೇಷನ್ಸ್ ಲಾಂಛನದಲ್ಲಿ ಆರ್ಯ ಹಾಗೂ ಮೇಘನಾ ರಾಜ್ ನಟಿಸಿರುವ ‘ಒಂಟಿ’ ಚಿತ್ರವು ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಸಹ ಬಿಡುಗಡೆಗೆ ಅಣಿಯಾಗುತ್ತಿದ್ದು, ಇದೇ ತಿಂಗಳ 11 ರಂದು  ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

ಹೌದು, ‘ಒರಟ ಐ ಲವ್ ಯೂ’ ಚಿತ್ರದ ಖ್ಯಾತಿಯ ಶ್ರೀ ಆ್ಯಕ್ಷನ್ ಕಟ್ ಹೇಳಿರುವ ‘ಒಂಟಿ’ ಚಿತ್ರವು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಇನ್ನು ಚಿತ್ರಕ್ಕೆ ನಾಯಕನಟರಾಗಿ ನಟಿಸಿರುವ ಆರ್ಯ ಈ ಹಿಂದೆ ‘ಈ ಸಂಜೆ’ ಚಿತ್ರದಲ್ಲಿ ನಟಿಸಿದ್ದರು. ಇದು ಇವರ ದ್ವಿತಿಯ ಸಿನಿಮಾ.

ಇನ್ನು ಈ ಚಿತ್ರದ ಟ್ರೈಲರ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ರಾಣಿ ಹುಲಿ ಮೇಘನಾ ರಾಜ್. ವಿಶೇಷವೆಂದರೆ, ಇವರು ಕಳೆದ ವರ್ಷ ನಟ ಚಿರಂಜೀವಿ ಸರ್ಜಾರನ್ನು ವಿವಾಹವಾಗಿದ್ದರು.

ಹೌದು, ಮದುವೆಯಾದ ಬಳಿಕ ಮೇಘನಾ ರಾಜ್ ರವರು ‘ಕುರುಕ್ಷೇತ್ರ’, ‘ಬುದ್ದಿವಂತ-2’ ಹಾಗೂ ಹೆಸರಿಡದ ಸೃಜನ್ ಅಭಿನಯದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ‘ಒಂಟಿ’ ಚಿತ್ರವೂ ಸಹ ಬಿಡುಗಡೆಗೆ ಸಿದ್ದವಾಗಿದೆ.

ಇದೊಂದು ಪಕ್ಕಾ ಮಾಸ್ ಆ್ಯಂಡ್ ಕ್ಲಾಸ್ ಚಿತ್ರವಾಗಿದ್ದು ಕಾಲೇಜು ಹುಡುಗಿಯ ಪಾತ್ರದಲ್ಲಿ ಮೇಘನಾ ರಾಜ್ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ದೇವರಾಜ್ , ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್, ‘ಮಜಾ ಟಾಕೀಸ್’ ಪವನ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಇನ್ನು ಚಿತ್ರಕ್ಕೆ ಕೆ.ಕಲ್ಯಾಣ್ ಹಾಗೂ ಡಾ||ವಿ.ನಾಗೇಂದ್ರಪ್ರಸಾದ್ ಸಾಹಿತ್ಯ,  ಮನೋಜ್. ಎಸ್(ಶ್ರೀಲಂಕ) ಸಂಗೀತ , ಕೆ.ಶಶಿಧರ್ ಛಾಯಾಗ್ರಹಣ, ಕುಮಾರ್ ಕೋಟೆಕೊಪ್ಪ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ.

ಎರಡು ವರ್ಷದ ಪುಟಾಣಿಯ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಬಾಲಿವುಡ್ ಚಿತ್ರರಂಗ

#onti, #movie, #trailor, #realsed, #balkaninews #filmnews, #kannadasuddigalu, #meghanaraj, #aarya

Tags