ಸುದ್ದಿಗಳು

‘ಒಂದು ಕಥೆ ಹೇಳ್ಲಾ’ ಸಿನಿಮಾ ನೋಡಿ ಹೆದರಿಬಿಟ್ಟ ಸಿಂಪಲ್ ಸುನಿ

ಯಶಸ್ವಿ ಎರಡನೇಯ ವಾರಕ್ಕೆ ಕಾಲಿಟ್ಟ ಸಿನಿಮಾ

ಬೆಂಗಳೂರು.ಮಾ.15: ಕೆಲವು ಸಿನಿಮಾ ಕಲಾವಿದರು ಮತ್ತು ನಿರ್ದೇಶಕರು ತಮ್ಮ ಸಿನಿಮಾವಲ್ಲದೇ ಇತರರ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸುತ್ತಾರೆ. ಅವರಂತೆಯೇ ನಿರ್ದೇಶಕ ಸಿಂಪಲ್ ಸುನಿ ಕೂಡಾ ಯಾವುದೇ ಚಿತ್ರ ಬಂದರೂ ಅದನ್ನು ನೋಡುವ ಅಭ್ಯಾಸ ಹೊಂದಿದ್ದಾರೆ. ಹಾಗೆಯೇ ಆ ಚಿತ್ರದ ಕುರಿತಂತೆ ತಮ್ಮ ಅನಿಸಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.

ಸದ್ಯ ಸುನಿಯವರು ಹೊಸಬರ ತಂಡದ ‘ಒಂದು ಕಥೆ ಹೇಳ್ಲಾ’ ಚಿತ್ರವನ್ನು ನೋಡಿ ಹೆದರಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದು, ಈ ಚಿತ್ರಕ್ಕೆ ನಾನು ನಿರೀಕ್ಷೆಯಿಡದೇ ಸುಮ್ಮನೇ ಹೋಗಿದ್ದೆ. ಚಿತ್ರದ ದೆವ್ವದ ಪಾತ್ರಗಳಿಗೆ ಹೆದರಿದೆ ಚಿತ್ರಕಥೆಯ ತಿರುವಿಗೆ ಆಶ್ಚರ್ಯನಾದೆ. ಕೊನೆಗೆ ಇಡೀ ತಂಡಕ್ಕೆ ಚಪ್ಪಾಳೆ ತಟ್ಟಿದೆ.. ಇದು ಎಲ್ಲೂ ಎತ್ತಿಲ್ಲದೆ .. ಕನ್ನಡದ ಸ್ವಂತ ಚಿತ್ರವಾಗಿದ್ದಲ್ಲಿ ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರ’ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಂದ ಹಾಗೆ ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದ್ದು, ಒಂದು ಚಿತ್ರದ ನಿರ್ದೇಶಕರು ಮತ್ತೊಂದು ಚಿತ್ರದ ನಿರ್ದೇಶಕರನ್ನು ಹೊಗಳಿ ಅವರ ಕೆಲಸಗಳನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನು ‘ಒಂದು ಕಥೆ ಹೇಳ್ಲಾ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇಂದು ಯಶಸ್ವಿ ಎರಡನೇಯ ವಾರಕ್ಕೆ ಕಾಲಿಟ್ಟಿದೆ.

ಚಿತ್ರದಲ್ಲಿ ಬಹುತೇಕ ಹೊಸಬರೇ ನಟಿಸಿದ್ದು, ಕಾರ್ತಿಕ್ ರಾಮ್, ಶಕ್ತಿ ಸೊಮಣ್ಣ, ತಾಂಡವ್ ರಾಮ್, ಪ್ರಿಯಾಂಕ, ಪ್ರತೀಕ್, ತಾರಾ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಗಿರೀಶ್ ಜಿ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರವು ದಕ್ಷಿಣ ಭಾರತದ ಮಟ್ಟ ಮೊದಲ ಹಾರರ್ ಆಂಥಾಲಜಿ ಎಂಬ ಖ್ಯಾತಿ ಪಡೆದಿದ್ದು, ಇಲ್ಲಿ ನಾಲ್ಕು ಉಪಕಥೆಗಳಿವೆ. ಅದರಲ್ಲೊಂದಷ್ಟು ಸತ್ಯ ಘಟನೆಗಳನ್ನು ಆಧರಿಸಿವೆ. ಆದರೆ ಇವೆಲ್ಲವೂ ಕ್ಲೈಮ್ಯಾಕ್ಸ್ ಹೊತ್ತಿಗೆ ಒಂದಕ್ಕೊಂದು ಕನೆಕ್ಟ್ ಆಗುತ್ತವೆ.

ಯಶಸ್ವಿ 50 ದಿನಗಳನ್ನು ಪೂರೈಸಿದ ‘ಸೀತಾರಾಮ ಕಲ್ಯಾಣ’

#ondukathehella, #filmnews, #balkaninews #simplesuni, #kannadasuddigalu

Tags