ವೈರಲ್ ನ್ಯೂಸ್ಸುದ್ದಿಗಳು

ಬೆಲೆ ಏರಿಕೆ ಎಫೆಕ್ಟ್: ಚಿಲ್ಲರೆ ಬದಲಾಗಿ ಈರುಳ್ಳಿ ಸಹ ಕೊಡಬಹುದು..!!!

ಎಲ್ಲರಿಗೂ ತಿಳಿದಿರುವಂತೆ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಒಂದು ಕಡೆ ಈ ಬೆಳೆಯ ಬೆಲೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹಾಗೆಯೇ ಈರುಳ್ಳಿಯನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ.

ಯಾವುದೇ ಸೆಕ್ಯೂರಿಟಿ ಇಲ್ಲದೇ ಈರುಳ್ಳಿ ಎಂಬ ಬಂಗಾರವನ್ನು ಮಾರಲಾಗುತ್ತಿದೆ ಎಂದು ಒಂದು ಫೋಟೊ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೇ ಆಟೋ ರಿಕ್ಷಾದಲ್ಲಿ ಪಯಣ ಮಾಡಿದ ಪ್ರಯಾಣಿಕನೊಬ್ಬ ಆಟೋ ಚಾಲಕನಿಗೆ ಈರುಳ್ಳಿ ಕೊಡುತ್ತಾನೆ. ಚಿಲ್ಲರೆಗಾಗಿ  ಆ ಚಾಲಕ ಚಿಕ್ಕ ಈರುಳ್ಳಿ ನೀಡುತ್ತಾನೆ. ಹೀಗೆ ಅನೇಕ ರೀತಿಯ ಮೆಮ್ಸ್ ಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿವೆ.

ಇನ್ನು ಈರುಳ್ಳಿಯನ್ನು ಖರೀದಿಸಿದವರು ಶ್ರೀಮಂತರಂತೆ. ಕೆಲವರು ಮದುವೆ ಸಂಭ್ರಮದಲ್ಲಿ ಒಡವೆ ಬದಲಿಗೆ ಈರುಳ್ಳಿಯನ್ನೇ ಧರಿಸಿಕೊಂಡಿದ್ದಾರೆ. ಹೀಗೆ ಸಖತ್ ಮಜಾ ಕೊಡುವ ಮೀಮ್ಸ್ ಗಳು ನೋಡುಗರ ಗಮನ ಸೆಳೆಯುತ್ತಿವೆ.

ಬ್ಲ್ಯಾಕ್ ಹೆಡ್ಸ್ ಚಿಂತೆಯೇ? ಹಾಗಾದ್ರೆ ಇಲ್ಲಿದೆ ಮನೆ ಮದ್ದು

#Onion #OnionMemes #ViralNews

Tags