ಸುದ್ದಿಗಳು

ಆರಡಿ ಹೈಟ್, ನಿಂತ್ರೆ ಫೈಟ್… ಎಂದು ಘರ್ಜಿಸುತ್ತಿರುವ “ಒಂಟಿ” ಹುಡುಗ ಆರ್ಯವರ್ಧನ್

ನಟಿ ಮೇಘನಾ ರಾಜ್ ಅವರ ‘ಒಂಟಿ’ ಸಿನಿಮಾ ಸೆಟ್ಟೇರಿ ವರ್ಷವೇ ಕಳೆದಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ತೆರೆಗೆ ಬಂದಿರಲಿಲ್ಲ. ಆದರೆ ಇದೀಗ ಸಿನಿಮಾವನ್ನು ತೆರೆಗೆ ತರಲು ರೆಡಿಯಾಗಿದೆ ಚಿತ್ರತಂಡ. ಈ ಬೆನ್ನಲ್ಲೇ ಸಿನಿಮಾದ ಟ್ರೇಲರ್ ಲಾಂಚ್ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚು ಮಾಡುವಂತಿದೆ.

Image result for onti kannada movie

ಮಾಸ್ ಆಗಿ ಬಂದ ನಟ

ಒಂಟಿ‌ ಸಿನಿಮಾ ಟ್ರೇಲರ್ ಕಂಪ್ಲೀಟ್ ಮಾಸ್ ಆಗಿ ಮೂಡಿ ಬಂದಿದೆ. ಎದುರಾಳಿಗಳನ್ನು ಹೊಡೆಯುವುದಕ್ಕೆ ನಾಯಕ ನಟ ಬರುವ ಸ್ಟೈಲ್ ಅದ್ಬುತವಾಗಿ ಮೂಡಿ ಬಂದಿದೆ. ಇನ್ನೂ ನಟಿ ಮೇಘನಾ ರಾಜ್ ಅವರ ನಟನೆ ಕೂಡ ಮನಸೂರೆಗೊಳ್ಳುವಂತಿದೆ. ನಾಯಕ ನಟನ ಹೆಸರಲ್ಲೇ ‘ಒಂಟಿ’ ಇದೆ. ಸದ್ಯ ವಿಲನ್ ಆಗಿ ಶರತ್ ಲೋಹಿತಾಶ್ವ ಕಾಣಿಸಿದ್ದಾರೆ.

Image result for onti kannada movie

ಕಾಲೇಜು ಹುಡುಗಿಯಾದ ನಟಿ ಮೇಘನಾ

ಸದ್ಯ ‘ಒಂಟಿ’ ಸಿನಿಮಾವನ್ನು ಶ್ರೀ ನಿರ್ದೇಶನ ಮಾಡಿದ್ದು, ಪ್ರಮುಖ ಪಾತ್ರದಲ್ಲಿ ದೇವರಾಜ್ ನಟಿಸಿದ್ದಾರೆ.. ಇದೊಂದು ಆ್ಯಕ್ಷನ್ ಸಿನಿಮಾವಾಗಿದ್ದು ಲವ್‌ ಸ್ಟೋರಿ ಕೂಡ ಇರಲಿದೆ. ಭೂಗತ ಲೋಕದ ಜಗತ್ತಿನ ಕಥೆ ಇದಾಗಿದ್ದು, ಬಹಳ ದಿನಗಳ ಬಳಿಕ ಕಾಲೇಜು ಹುಡುಗಿಯಾಗಿ ಮೇಘನಾ ರಾಜ್ ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.

 

 

ಕನ್ನಡಕ್ಕೆ ರಿಮೇಕ್ ಆಗಿರುವ ಪರಭಾಷಾ ಧಾರಾವಾಹಿಗಳು!!

#balkaninews #meghanarajmovies #meghanarajhits #ontikannadamovie #ontikannadamovieteaser

Tags