ಸುದ್ದಿಗಳು

ಹೊಸಬರ ‘ಒಂಟಿ ಮನೆ ಮೆಟ್ಟಿಲು’ ಚಿತ್ರ

ಚಂದನವನಲ್ಲೊಂದು ಹಾರರ್ ಸಿನಿಮಾ

ಬೆಂಗಳೂರು, ಡಿ.10: ಕಳೆದೆರಡು ವರ್ಷಗಳಿಂದ ಚಂದನವನದಲ್ಲಿ ದೆವ್ವಗಳೇ ರಾರಾಜಿಸಿದ್ದವು. ಅಂದರೆ ಹಾರರ್ ಸಿನಿಮಾಗಳೇ ತೆರೆ ಕಂಡು ಸುದ್ದಿಯಾಗಿದ್ದವು. ಆದರೆ ಇದೀಗ ಬೆರಳೆಣಿಕೆಯಷ್ಟು ಮಾತ್ರ ಹಾರರ್‌ ಚಿತ್ರಗಳು ಬಿಡುಗಡೆಯಾಗಿವೆ. ಇದೀಗ ಮತ್ತೆ ಹಾರರ್ ಚಿತ್ರಗಳು ಶುರುವಾಗುತ್ತಿವೆ.

ಒಂಟಿ ಮನೆ ಮೆಟ್ಟಿಲು

ಹೆಸರೇ ಹೇಳುವಂತೆ ಇದೊಂದು ಹಾರರ್ ಚಿತ್ರವಾಗಿದ್ದು, ಬಹುತೇಕ ಹೊಸಬರೇ ಚಿತ್ರದಲ್ಲಿದ್ದಾರೆ. ಇನ್ನು ಇತ್ತಿಚೆಗಷ್ಟೇ ಚಿತ್ರದ ಮುಹೂರ್ತ ನಡೆದಿದ್ದು, ಚಿತ್ರೀಕರಣ ಶುರುವಾಗಿದೆ. ಈ ಚಿತ್ರವನ್ನು ಗಿರೀಶ್ ಹೆಬ್ಬೂರು  ನಿರ್ದೇಶನ ಮಾಡುತ್ತಿದ್ದು, ವೆಂಕಟ್‌ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ‘ದೇವ್ರಂಥ ಮನುಷ್ಯ’ ಪ್ರಥಮ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಹಾರರ್ ಜೊತೆಗೆ ಪ್ರೇಮಮಯ ಚಿತ್ರ

ಇದೊಂದು ಸಸ್ಪೆನ್ಸ್‌, ಹಾರರ್‌ ಚಿತ್ರವಾಗಿದ್ದು, ಚಿತ್ರದಲ್ಲಿ ಥ್ರಿಲ್ಲರ್ ಜೊತೆಗೆ ಪ್ರೇಮಮಯ ಕಥಾಹಂದರವೂ ಇದೆ. ಈ ಚಿತ್ರದಲ್ಲಿ ಅಥರ್ವ ಶೆಟ್ಟಿ, ಪ್ರಿಯಾಗೌಡ, ಮನೋರಂಜನ್‌, ಲಕ್ಷ್ಮೀ, ಪ್ರಕಾಶ್‌, ಅನೂಪ್‌, ಬಲ್ಲಾ, ಆನಂದ್‌ ಮಂಡ್ಯ, ರಾಘವ್‌  ಸೇರಿದಂತೆ ಮುಂತಾದವರ ಅಭಿನಯವಿದ್ದು, ಮಂಜು ಕವಿ ಸಂಗೀತ, ಚಂದ್ರು ನೃತ್ಯ ನಿರ್ದೇಶನ, ಜಾಗ್ವಾರ್‌ ಸಣ್ಣಪ್ಪ ಅವರ ಸಾಹಸವಿದೆ.

Tags