ಸುದ್ದಿಗಳು

ಮೈಸೂರಿನಲ್ಲಿ ಓಪನ್ ಸ್ಟ್ರೀಟ್ ಹಬ್ಬ ಪ್ರಾರಂಭ

ನಮ್ಮ ನಾಡಹಬ್ಬ, ಈ ಮೈಸೂರು ದಸರಾ ಹಬ್ಬ!

 

ಮೈಸೂರು, ಅ.13: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರಿನ ಕೃಷ್ಣರಾಜ ಬುಲ್ವರ್ಡ್ ರಸ್ತೆಯಲ್ಲಿ  ಓಪನ್ ಸ್ಟ್ರೀಟ್ ಹಬ್ಬ ಆರಂಭವಾಗಿದ್ದು, ಜನಸಾಗರವೇ ನೆರೆದು ಬಂದಿವೆ. ಸಚಿವ ಸಾ.ರಾ. ಮಹೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಎಲ್ಲಾ ವಯಸ್ಸಿನ ಜನರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಕೃಷ್ಣರಾಜ ಬುಲ್ವರ್ಡ್ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಹಬ್ಬ ಕಣ್ಮನ ಸೆಳೆಯುತ್ತಿದೆ.ವಿವಿಧ ಕಲಾತಂಡ ಜತೆಗೆ ನಾಗರಿಕರು ಸೇರಿ ನೃತ್ಯ ಮಾಡಿ ಸಂತಸ ವ್ಯಕ್ತಪಡಿಸಿದರು. ಓಪನ್ ಸ್ಟ್ರೀಟ್ ಫೆಸ್ಟಿವಲ್ ಉದ್ಘಾಟನೆ ಬಿಜೆಪಿ ನಾಯಕರು ಕಾದು ಸುಸ್ತಾದ ಘಟನೆಯೂ ನಡೆಯಿತು. ಓಪನ್ ಸ್ಸ್ಟ್ರೀಟ್ ಹಬ್ಬದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಪಾಲಿಕೆ ಆಯುಕ್ತ ಜಗದೀಶ್ ಭಾಗಿಯಾಗಿದ್ದರು. ಶಾಸಕ ಎಸ್‍ ಎ ರಾಮದಾಸ್ ಹಾಗೂ ನಾಗೇಂದ್ರ ಕಾರ್ಯಕ್ರಮದಿಂದ ಹೊರ ನಡೆದರು. 10 ಗಂಟೆಗೆ ಆರಂಭಗೊಳ್ಳಬೇಕಿದ್ದ ಕಾರ್ಯಕ್ರಮ 11 ಗಂಟೆಯಾದರೂ ಪ್ರಾರಂಭವಾಗಿರಲಿಲ್ಲ.ಜ್ಯೂನಿಯರ್ ವಿಷ್ಣುವರ್ಧನ್ ನೋಡಿ ಬೆರಗಾದ ಜನತೆ: ಸಾಹಸಸಿಂಹ ವಿಷ್ಣುವರ್ಧನ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ, ಹಾಗೆಯೇ ಇಲ್ಲೊಬ್ಬ ಜ್ಯೂನಿಯರ್ ವಿಷ್ಣುವರ್ಧನ್ ಬಂದು ಜನರು ಬಾಯ್ಮೇಲೆ ಬೆರಳಿಡುವಂತೆ ಮಾಡಿದರು. ‘ಆಪ್ತಮಿತ್ರ’ ದಲ್ಲಿ ವಿಷ್ಣುವರ್ಧನ್ ತೊಟ್ಟಿದ್ದ ಉಡುಗೆ ಶೈಲಿಯ ಬಟ್ಟೆಯನ್ನು ತೊಟ್ಟು ಬಂದಿದ್ದರು. ಜನರು ತದೇಕಚಿತ್ತದಿಂದ ಅವರನ್ನೇ ವೀಕ್ಷಿಸುತ್ತಿದ್ದರು.ಓಪನ್ ಸ್ಟ್ರೀಟ್ ಪೆಸ್ಟಿವಲ್ ನಲ್ಲಿ ಮಡಿಕೆ ಇನ್ನಿತರೆ ಮಣ್ಣಿನಿಂದ ಮಾಡುವ ವಸ್ತುಗಳ ಕುರಿತು ತರಬೇತಿ ನೀಡಲಾಯಿತು.  ಯುವ ಸಮುದಾಯವು ಆಸಕ್ತಿಯಿಂದ ಮಡಿಕೆ ಮಾಡುವ ವಿಧಾನವನ್ನು ಕಲಿತುಕೊಂಡರು. ಕಲಾವಿದರ ಜತೆಗೆ ಯುವತಿಯರ ಸೆಲ್ಫೀ, ಓಪನ್ ಸ್ಟ್ರೀಟ್ ಫೆಸ್ಟಿವಲ್ ಗೆ ಆಗಮಿಸಿದ ಅನೇಕ ಕಲಾವಿದರ ಜತೆಗೆ ಯುವಕ, ಯುವತಿಯರು ಸೆಲ್ಫೀ ತೆಗೆದುಕೊಂಡರು. ಕಲಾತಂಡಗಳಿಂದ ನೃತ್ಯ ಕಾರ್ಯಕ್ರಮವೂ ನಡೆಯಿತು.

 

Tags