ಸುದ್ದಿಗಳು

‘ಆರೇಂಜ್’ ಈ ವಾರ ತೆರೆಗೆ

'ರಾಜಕುಮಾರ' ಚಿತ್ರದ ಬಳಿಕ ಎಂಥ ಚಿತ್ರ ಒಪ್ಪಿಕೊಳ್ಳಲಿ ಎಂಬ ಗೊಂದಲ!

ಬೆಂಗಳೂರು,ಡಿ.5: ನಿರ್ದೇಶಕ ಪ್ರಶಾಂತ್ ರಾಜ್ ತಮ್ಮ ‘ಜೂಮ್’ ಚಿತ್ರದ ನಾಯಕನೊಂದಿಗೆ ಮರಳಿ ಬಂದಿರುವ ಚಿತ್ರ ಇದು. “ವಿಶೇಷ ಏನೆಂದರೆ  ‘ಜೂಮ್’ ಚಿತ್ರೀಕರಣದ ವೇಳೆಯೇ ಮಾಡಿದಂಥ ಯೋಜನೆ ಇದು”‌ ಎಂದರು ನಿರ್ದೇಶಕ ಪ್ರಶಾಂತ್ ರಾಜ್. ಅವರು ಚಿತ್ರ ಬಿಡುಗಡೆಗೆ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಮದುವೆ ವಾರ್ಷಿಕದ ದಿನ ಶೀರ್ಷಿಕೆ ಬಿಡುಗಡೆ

ಆದರೆ ಅಲ್ಲಿಂದಲೇ ಶುರುವಾಗಿದ್ದ ಯೋಜನೆಯಾದರೂ ಆರೆಂಜ್ ಈ ವರ್ಷಾಂತ್ಯಕ್ಕೆ ತೆರೆಗೆ ಬರುತ್ತಿರುವುದು ವಿಶೇಷ.ಗಣೇಶ್ ಅವರ ಮದುವೆ ವಾರ್ಷಿಕದ ದಿನ ಶೀರ್ಷಿಕೆ ಬಿಡುಗಡೆ ಮಾಡಿದೆವು. ಗಣೇಶ್ ಅವರು ನನ್ನ ಆಲ್ಟೈಮ್ ಫೇವರಿಟ್ ಆ್ಯಕ್ಟರ್. ಕತೆ ಬಗ್ಗೆ ಕೇಳುವ ಮೊದಲೇ ನಿನ್ನ ಕತೆ-ಚಿತ್ರಕತೆ ಚೆನ್ನಾಗಿರುತ್ತದೆ ಎಂಬ ಭರವಸೆ ನೀಡಿದ್ದರು. ಕನ್ನಡದಲ್ಲಿ ಒಂದು ಪರ್ಟಿಕ್ಯುಲರ್ ಫ್ಯಾಮಿಲಿ, ಲವ್ ಜಾನರ್ಗೆ ಇರುವಂಥ ಅಸೆಟ್ ಎಂದೇ ಗಣೇಶ್ ಅವರನ್ನು ಹೇಳಬಹುದು ಎಂದರು ಪ್ರಶಾಂತ್.

ರಾಜ್ ಕುಮಾರನ ನಾಯಕಿ

ನಿರ್ದೇಶಕರಿಗೆ ‘ರಾಜ್ ಕುಮಾರ’ ಚಿತ್ರ ನೋಡಿದಾಗ ಅದರಲ್ಲಿ ಪ್ರಿಯಾ ಆನಂದ್ ಅವರು ತುಂಬ ಇಷ್ಟವಾಗಿದ್ದರಂತೆ. ಪ್ರಿಯಾಗೆ ಆರಂಭದಲ್ಲಿ ಹೇಳಿದ ಕತೆಯೇ ಬೇರೆ ಆಗಿತ್ತು. ಯಾಕೆಂದರೆ ಆಗ ಕತೆ ಸಿದ್ಧ ಪಡಿಸಿರಲಿಲ್ಲ. ಇದೀಗ ಬದಲಾಗಿರುವ ಕತೆಯ ಪ್ರಕಾರ ಚಿತ್ರದಲ್ಲಿ ಹಳ್ಳಿ ಮತ್ತು ನಗರದ ಮಾದರಿಯ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಾಡುಗಳು ಹಿಟ್

ಈಗಾಗಲೇ ನಾಲ್ಕು ಹಾಡುಗಳನ್ನು ಲಿರಿಕಲ್ ಆಡಿಯೋ ಮೂಲಕ ಬಿಡುಗಡೆ ಮಾಡಲಾಗಿದೆ. ಎಲ್ಲ ನಾಲ್ಕು ಹಾಡುಗಳು ಕೂಡ ಜನಪ್ರಿಯವಾಗಿವೆ.  ಚಿತ್ರಕ್ಕೆ ಸಂಗೀತ ಥಮನ್ ನೀಡಿದ್ದಾರೆ. ಸಂತೋಷ್  ಛಾಯಾಗ್ರಾಹಕ. ಎರಡು ದೃಶ್ಯಗಳಿಗೆ ಭರ್ಜರಿ ನಿರ್ದೇಶಕ ಚೇತನ್ ಸಂಭಾಷಣೆ ಬರೆದಿರುವುದು ವಿಶೇಷ. ‘ಆರೆಂಜ್’ ನಿಂದ ಅರಂಭಗೊಳ್ಳುವ ಕತೆಯಾದ ಕಾರಣ ‘ಆರೆಂಜ್’ ಎಂದು ಹೆಸರಿಡಲಾಗಿದೆ. ಇದು ಯಾವುದೇ ರಿಮೇಕ್ ಚಿತ್ರವಲ್ಲ.

ಚಿತ್ರದಲ್ಲಿ ಅವಿನಾಶ್ , ಸಾಧುಕೋಕಿಲ, ಹರೀಶ್ ರಾಯ್ ಮೊದಲಾದ ಕಲಾವಿದರಿದ್ದಾರೆ. ಬಿಡುಗಡೆಗೂ ಮುನ್ನವೇ ಚಿತ್ರ ಆನ್ಲೈನ್ ಮತ್ತು ಸೆಟಲೈಟ್ ಗಳಿಗೆ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿದೆ ಎಂಬ ಮಾಹಿತಿಗಳನ್ನು ತಂಡ ನೀಡಿತು.

ನಾಯಕಿ ಪ್ರಿಯಾ ಆನಂದ್ ಮಾತನಾಡಿ, ರಾಜಕುಮಾರ ಚಿತ್ರದ ಬಳಿಕ ಎಂಥ ಚಿತ್ರ ಒಪ್ಪಿಕೊಳ್ಳಲಿ ಎಂಬ ಗೊಂದಲದಲ್ಲಿದ್ದೆ. ಕತೆ ಕೇಳಿದಾಗಲೇ ಭರವಸೆ ಮೂಡಿಸಿರುವಂಥ ಚಿತ್ರ ಇದು ಎಂದರು.

ನಿರೀಕ್ಷೆಯಲ್ಲಿಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ಚಿತ್ರದ ಚಿತ್ರಕತೆ ತುಂಬ ಇಷ್ಟವಾಯಿತು. ಕತೆಯ ಬಗ್ಗೆ ಪ್ರೇಕ್ಷಕರಿಗೆ ತುಂಬ ಚೆನ್ನಾಗಿ ತಿಳಿದಿರುತ್ತದೆ. ಆದರೆ ಪಾತ್ರಧಾರಿಗಳಿಗೆ ತುಂಬ ಗೊಂದಲ ಇರುತ್ತದೆ. ಅದನ್ನು ಪ್ರೇಕ್ಷಕರು ಎಂಜಾಯ್ ಮಾಡುವಂತಿದೆ‌ ಎಂದರು.

 

Tags