ಸುದ್ದಿಗಳು

ಡಿ. 7 ಕ್ಕೆ ಗಣೇಶನ ‘ಆರೆಂಜ್: ಶಿವಣ್ಣನ ‘ಕವಚ’ ಚಿತ್ರಕ್ಕೆ ಸ್ಪರ್ಧೆ…!?!

ಒಂದೇ ದಿನ ಎರಡು ನಿರೀಕ್ಷಿತ ಚಿತ್ರಗಳು ಬಿಡುಗಡೆ

ಬೆಂಗಳೂರು, ನ.15: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರಿಯಾ ಆನಂದ್ ಅಭಿನಯದ ‘ಆರೆಂಜ್’ ಚಿತ್ರವು ಮುಂದಿನ ತಿಂಗಳು 7 ಕ್ಕೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಹ್ಯಾಟ್ರಿಕ್ ಹೀರೋ ಶಿವಣ್ಣನೊಂದಿಗೆ ಸ್ಪರ್ಧೆಯೂ ಸಹ ನಡೆಯುತ್ತಿದೆ.ಡಿ. 7 ಕ್ಕೆ ‘ಕವಚ’ ಬಿಡುಗಡೆ

ಹೌದು.. ಬರಲಿರುವ ಡಿಸೆಂಬರ್ ತಿಂಗಳ ವಾರ ದಿ. 7 ರಂದು ಶಿವಣ್ಣ ಅಭಿನಯದ ‘ಕವಚ’ ತೆರೆಗೆ ಬರುತ್ತಿದೆ. ಅದೇ ದಿನವೇ ‘ಆರೆಂಜ್’ ಬರುತ್ತಿರುವುದರಿಂದ ಬಾಕ್ಸ್ ಆಫೀಸ್ ನಲ್ಲಿ ಸಂಘರ್ಷ ಏರ್ಪಡಲಿದೆ.ಈಗಾಗಲೇ ಘೋಷಣೆ

ಇನ್ನು ‘ಕವಚ’ ಚಿತ್ರವು ಈಗಾಗಲೇ ತನ್ನ ಚಿತ್ರದ ಪೋಸ್ಟರ್, ಟೀಸರ್, ಟ್ರೈಲರ್ ಹಾಡುಗಳಿಂದ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಶಿವಣ್ಣ ಅಂದನಾಗಿ ಅಭಿನಯಿಸಿದ್ದಾರೆ. ಈ ಚಿತ್ರವು ಡಿ. 7ರಂದು ತೆರೆಗೆ ಬರಲಿದೆ ಎಂದು ಕಳೆದ ವಾರವೇ ಘೋಷಣೆಯಾಗಿತ್ತು. ಆದರೆ ಇಂದು ‘ಆರೆಂಜ್’ ಚಿತ್ರತಂಡದವರು ಅದೇ ದಿನ ತಮ್ಮ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಇನ್ನು ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿರುವ ‘ಆರೆಂಜ್ ‘ ಚಿತ್ರದ ತಂಡದವರು, ಈಗಲೇ ವಿತರಕರ ಹಾಗೂ ಚಿತ್ರಮಂದಿರಗಳನ್ನು ಅಂತಿಮಗೊಳಿಸುವತ್ತ ಗಮನ ನೀಡಿದ್ದಾರೆ. ಈ ಹಿಂದೆ ನಾಯಕ ಗಣೇಶ್ ಹಾಗೂ ನಿರ್ದೇಶಕ ಪ್ರಶಾಂತ್ ರಾಜ್ ಜೋಡಿಯಲ್ಲಿ ಮೂಡಿ ಬಂದಿದ್ದ ‘ಜೂಮ್’ ಯಶಸ್ವಿಯಾಗಿತ್ತು. ಹೀಗಾಗೀ ಈ ಚಿತ್ರದ ಮೇಲೆಯೂ ನಿರೀಕ್ಷೆಗಳಿವೆ.

ಚಿತ್ರದ ಬಗ್ಗೆ

ಈ ಆರೆಂಜ್ ಚಿತ್ರಕ್ಕೆ ನಾಯಕಿಯಾಗಿ ‘ರಾಜಕುಮಾರಿ’ ಪ್ರಿಯಾ ಆನಂದ್ ಅಭಿನಯಿಸಿದ್ದು, ದೇವ್ ಗಿಲ್, ಸಾಧು ಕೋಕಿಲಾ, ರಂಗಾಯಣ ರಘು, ಅವಿನಾಶ್, ಹರೀಶ್ ರಾಜ್, ಪದ್ಮಜಾ ರಾವ್, ಸತ್ಯಭಾಮಾ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಎಸ್. ತಮನ್ ಸಂಗೀತವಿದ್ದರೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.

Tags