ಸುದ್ದಿಗಳು

ಸುಮ್ಮನೆ ಈ ಸಂಜೆಯಲಿ, ನೀ ಹಾಕುವ ನಾಲ್ಕು ಹೆಜ್ಜೆ ನನ್ನ ಜೊತೆಗೆ

ಮನ ಅರಳಿಸುವ ‘ಆರೆಂಜ್’ ಚಿತ್ರದ ಪ್ರಣಯ ಗೀತೆ

ಬೆಂಗಳೂರು, ನ.7: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರಿಯಾ ಆನಂದ್ ಅಭಿನಯಿಸುತ್ತಿರುವ ‘ಆರೆಂಜ್’ ಚಿತ್ರದ ಪ್ರಣಯಗೀತೆಯೊಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಎಲ್ಲರ ಮನಸ್ಸನ್ನು ಅರಳಿಸುತ್ತಿದೆ.

ಯಾರೋ ಯಾರೋ ನೀನು….

‘ಸುಮ್ಮನೆ ಈ ಸಂಜೆಯಲಿ, ನೀ ಹಾಕುವ ನಾಲ್ಕು ಹೆಜ್ಜೆ ನನ್ನ ಜೊತೆಗೆ… ‘ ಎಂದು ಪಲ್ಲವಿ ಶುರುವಾಗುವ ಈ ಹಾಡಿಗೆ ಎಸ್ ಎಸ್ ಥಮನ್ ಸಂಗೀತ ನೀಡಿದ್ದು, ಕವಿರಾಜ್ ಸಾಹಿತ್ಯಕ್ಕೆ, ಚಿನ್ಮಯಿ ಶ್ರೀಪಾದ ಧ್ವನಿಯಾಗಿದ್ದಾರೆ.

ಸುಮ್ಮನೆ ಈ ಸಂಜೆಯಲಿ, ನೀ ಹಾಕುವ ನಾಲ್ಕು ಹೆಜ್ಜೆ ನನ್ನ ಜೊತೆಗೆ

ಬಾ ಗೆಳೆಯ , ಕೇಳುವೆಯಾ ಹೇಳೋಕೆ ಬಾಕಿ ಉಂಟು ನೂರು ಕಥೆ…

ಅರಿವಿಲ್ಲಾ ಅರಿವಿಲ್ಲಾ, ನಂಗೇನೂ ಅರಿವಿಲ್ಲ

ಮುಗಿಯಲ್ಲಾ ಮುಗಿಯಲ್ಲಾ ನಿನ್ನ ಧ್ಯಾನ ಮುಗಿಯಲ್ಲ

ಯಾರೋ ಯಾರೋ ನಂಗೆ ನೀನು ಯಾರೋ… ಹೇಳೋ ನೀನು…

ಎಂಬ ಪಲ್ಲವಿಯ ಸಾಲುಗಳು ಇಷ್ಟವಾಗುತ್ತವೆ. ಈ ಹಾಡನ್ನು ಪಲ್ಲವಿ ಆಡಿಯೋ ಸಂಸ್ಥೆಯವರು ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಗೊಳಿಸಿದ್ದಾರೆ.

ಚಿತ್ರದ ಬಗ್ಗೆ

ಈ ಹಿಂದೆ ‘ಜೂಮ್’ ಚಿತ್ರದ ಮೂಲಕ ಮೋಡಿ ಮಾಡಿದ ನಟ ಗಣೇಶ್ ಹಾಗೂ ನಿರ್ದೇಶಕ ಪ್ರಶಾಂತ್ ರಾಜ್ ಮತ್ತೆ ಒಂದಾಗಿದೆ. ಈ ಮೂಲಕ ‘ಆರೆಂಜ್’ನ ಸವಿಯನ್ನು ಪ್ರೇಕ್ಷಕರಿಗೆ ನೀಡಲಿದೆ.

ಇನ್ನು ಈ ಚಿತ್ರದಲ್ಲಿ ಗಣೇಶ್ ಗೆ ಜೋಡಿಯಾಗಿ ‘ರಾಜಕುಮಾರಿ’ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ. ಈ ಚಿತ್ರವನ್ನು ನಿಮ್ಮ ಸಿನಿಮಾ ಬ್ಯಾನರ್ ಮೂಲಕ ನವೀನ್ ಎಂಬುವವರು ನಿರ್ಮಿಸಿದ್ದಾರೆ.

Tags