ಸುದ್ದಿಗಳು

ಹಿಟ್ ಆಯ್ತು ‘ಆರೆಂಜ್’ ಟ್ರೈಲರ್: ಗಣೇಶ್ ಫುಲ್ ಮಿಂಚಿಂಗ್

ಡಿ. 7 ರಂದು ರಾಜ್ಯಾದ್ಯಂತ ‘ಆರೆಂಜ್’ ಸಿನಿಮಾ ಬಿಡುಗಡೆ

ಬೆಂಗಳೂರು, ನ.30: ಪ್ರಶಾಂತ್ ರಾಜ್- ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯ ‘ಆರೆಂಜ್’ ಚಿತ್ರದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿ ಸದ್ದು ಮಾಡುತ್ತದೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿದ್ದ ಈ ಸಿನಿಮಾ ಇದೀಗ ಟ್ರೈಲರ್ ಮೂಲಕವೂ ಎಲ್ಲರ ಮನಸ್ಸನ್ನು ಸೆಳೆಯುತ್ತಿದೆ.

ಮಾಸ್ ಮಹಾರಾಜನಾದ ಗಣೇಶ್

ಈ ಹಿಂದೆ ‘ರಾಜಕುಮಾರ’ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಪ್ರಿಯಾ ಆನಂದ್ ಈ ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡ ಸಿನಿಪ್ರಿಯರೆದುರಿಗೆ ವಾಪಸ್ ಆಗಿದ್ದಾರೆ. ಇಲ್ಲಿ ಅಪ್ಪಟ ಮನೆಮಗಳಾಗಿ, ಗ್ಲ್ಯಾಮರ್ ಗೊಂಬೆಯಾಗಿ, ಗೋಲ್ಡನ್ ಸ್ಟಾರ್ ಸುಕುಮಾರಿಯಾಗಿ ಮಿಂಚಿದ್ದಾರೆ. ಚಿತ್ರದ ಶೀರ್ಷಿಕೆಗೂ ಅವರಿಗೂ ನಾಯಕ ಗಣೇಶ್ ಗೂ ವಿಶೇಷವಾದ ನಂಟಿದೆ. ನಾಯಕಿ ಕೊಡುವ ‘ಆರೆಂಜ್’ ನಿಂದ ಶುರುವಾದ ಸಿನಿಮಾ ಎಲ್ಲೆಲ್ಲೋ ಹೋಗಿ ಏನೇನೋ ಆಗುತ್ತದೆ. ಅದೇನು ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.ಶನಿವಾರವೇ ಬರಬೇಕಿದ್ದ ಟ್ರೈಲರ್

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರದ ಟ್ರೈಲರ್ ಕಳೆದ ಶನಿವಾರ ಬಿಡುಗಡೆಯಾಗಬೇಕಿತ್ತು. ಆದರೆ ಅವತ್ತು ಮಂಡ್ಯದ ಕನಗನಮರಡಿಯಲ್ಲಿ ಉಂಟಾದ ಬಸ್ ದುರಂತದಿಂದ ಟ್ರೈಲರ್ ಲಾಂಚ್ ನ ಮುಂದಕ್ಕೆ ಹಾಕಲಾಯಿತು. ಅದರೊಂದಿಗೆ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರೂ ಸಹ ನಿಧನರಾದರು. ಹೀಗಾಗಿ 3 ದಿನಗಳ ಶೋಕಾಚರಣೆಯ ನಂತರ ಇದೀಗ ಬಿಡುಗಡೆಯಾಗಿದೆ.

ನಿರೀಕ್ಷೆ ಮೂಡಿಸಿರುವ ಸಿನಿಮಾ

ಈಗಾಗಲೇ ನಿರ್ದೇಶಕ ಪ್ರಶಾಂತ್ ರಾಜ್ ಹಾಗೂ ಗಣೇಶ್ ಜೋಡಿಯಲ್ಲಿ ‘ಜೂಮ್’ ಸಿನಿಮಾ ಬಂದಿತ್ತು. ಹಾಗೆಯೇ ಸೂಪರ್ ಹಿಟ್ ಕೂಡಾ ಆಗಿತ್ತು, ಹೀಗಾಗಿ ‘ಆರೆಂಜ್’ ಚಿತ್ರದ ಮೇಲೂ ಸಾಕಷ್ಟು ಕುತೂಹಲಗಳಿವೆ. ಚಿತ್ರದಲ್ಲಿ ಗಣೇಶ್, ಪ್ರಿಯಾ ಆನಂದ್, ಸಾಧುಕೋಕಿಲ, ದೇವ್ ಗಿಲ್ ರಂಗಾಯಣ ರಘು, ಪದ್ಮಜಾರಾವ್ ಸೇರಿದಂತೆ ಮತ್ತಿತರರು ನಟಿಸಿದ್ದು, ಚಿತ್ರಕ್ಕೆ ಎಸ್ ಎಸ್ ಥಮನ್ ಸಂಗೀತ ನೀಡಿದ್ದಾರೆ.

Tags