ಸುದ್ದಿಗಳು

ಈ ಸಿನಿಮಾದಲ್ಲಿ ‘ಆರೆಂಜ್’ ಹಣ್ಣು ಪ್ರಮುಖ ಪಾತ್ರ ವಹಿಸಿದೆ

ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ: ನಾಯಕ, ನಾಯಕಿ ಮತ್ತು ನಿರ್ದೇಶಕ

ಬೆಂಗಳೂರು, ಡಿ.2: ಇದೇ ಶುಕ್ರವಾರ (ಡಿ. 7) ರಾಜ್ಯಾದ್ಯಂತ ತೆರೆ ಕಾಣಲು ಸಿದ್ದತೆ ನಡೆಸಿರುವ ‘ಆರೆಂಜ್’ ಚಿತ್ರದ ಬಗ್ಗೆ ನಾಯಕ ಗಣೇಶ್, ನಾಯಕಿ ಪ್ರಿಯಾ ಆನಂದ್, ನಿರ್ದೇಶಕ ಪ್ರಶಾಂತ್ ರಾಜ್ ಮಾತನಾಡಿದ್ದಾರೆ.

ಚಿತ್ರದ ಬಗ್ಗೆ

ಈ ಹಿಂದೆ ನಿರ್ದೇಶಕ ಪ್ರಶಾಂತ್ ರಾಜ್ ಹಾಗೂ ನಟ ಗಣೇಶ್ ಜೋಡಿಯಲ್ಲಿ ಮೂಡಿ ಬಂದಿದ್ದ ‘ಜೂಮ್’ ಚಿತ್ರವು ಸೂಪರ್ ಹಿಟ್ ಆಗಿತ್ತು. ಈಗ ಇದೇ ಜೋಡಿ ಮತ್ತೆ ಒಂದಾಗಿ ‘ಆರೆಂಜ್’ ಸಿನಿಮಾ ಮಾಡಿದೆ. ಹೀಗಾಗಿ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಮೂಡಿವೆ. ಇನ್ನು ಚಿತ್ರದ ಹಾಡುಗಳು ಮತ್ತು ಟ್ರೈಲರ್ ಸಹ ಯಶಸ್ಸಾಗಿವೆ.

‘ಆರೆಂಜ್’ ಹಣ್ಣಿನ ಬಗ್ಗೆ

ಚಿತ್ರಕ್ಕೆ ‘ಆರೆಂಜ್’ ಎಂದು ಹೆಸರಿಡಲು ಪ್ರಮುಖ ಕಾರಣವಿದೆ. ಇಲ್ಲಿ ‘ಆರೆಂಜ್’ ಹಣ್ಣು ಬಹು ಮುಖ್ಯ ಪಾತ್ರವಹಿಸುತ್ತದೆ. ‘ಆರೆಂಜ್’ ಕಾರಣದಿಂದಲೇ ಇಬ್ಬರು ವ್ಯಕ್ತಿಗಳು ಇಲ್ಲಿ ಭೇಟಿಯಾಗುತ್ತಾರೆ, ಸ್ನೇಹವಾಗುತ್ತದೆ, ಮುಂದೆ ಅದೇ ಪ್ರೀತಿಯಾಗುತ್ತದೆ. ಹಾಗೆಯೇ ಇಲ್ಲೊಂದು ಕ್ಯೂಟ್ ಲವ್ ಸ್ಟೋರಿ ಸಹ ಇದೆ.

‘ರಾಜಕುಮಾರಿ’ ಪ್ರಿಯಾ ಆನಂದ್
ಪುನೀತ್ ರಾಜ್ ಕುಮಾರ್ ಅವರ ‘ರಾಜಕುಮಾರ’ ಚಿತ್ರದಲ್ಲಿ ನಟಿಸಿದ್ದ ಪ್ರಿಯಾ ಆನಂದ್ ಗೆ ಇದು ಎರಡನೇ ಸಿನಿಮಾ. ಚಿತ್ರದಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅದು ಅಪ್ಪಟ ಮನೆ ಮಗಳು ಪಾತ್ರವಾಗಿದ್ದರೂ, ಅದಕ್ಕೆ ಗ್ಲಾಮ್ ಟಚ್ ನೀಡಿದ್ದಾರಂತೆ ನಿರ್ದೇಶಕರು.

‘ರಾಜಕುಮಾರ ಶತ ದಿನ ಪ್ರದರ್ಶನ ಕಂಡ ಸಿನಿಮಾ. ‘ಆರಂಜ್’ ಕೂಡ ಅದೇ ಹಾದಿಯಲ್ಲಿಯೇ ಸಾಗಲಿದೆ ಎಂಬ ನಂಬಿಕೆಯಿದೆ. ಕನ್ನಡದ ಸಿನಿಮಾಗಳು ಅಂದರೆ ನನಗೆ ತುಂಬಾ ಇಷ್ಟ. ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ಕಥೆಗಳಿರುತ್ತವೆ. ಹಾಗಾಗಿಯೇ ಇಲ್ಲಿನ ಚಿತ್ರಗಳನ್ನು ಒಪ್ಪಿಕೊಳ್ಳುತ್ತಲೇ ಇರುತ್ತೇನೆ’ ಎನ್ನುತ್ತಾರೆ ಪ್ರಿಯಾ.

ಪಾತ್ರಗಳ ಬಗ್ಗೆ

ಚಿತ್ರದಲ್ಲಿ ಗಣೇಶ್ ‘ಕಳ್ಳ ಸಂತೋಷ್’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಿಯಾ ಆನಂದ್ ‘ರಾಧಾ’ ಪಾತ್ರದಲ್ಲಿ, ಸಾಧುಕೋಕಿಲಾ ಕುಸ್ತಿಪಟು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಇನ್ನು ಚಿತ್ರದಲ್ಲಿ ವಿಲನ್ ಇದ್ದರೂ ಸಹ ಆ ಪಾತ್ರವನ್ನು ಮನರಂಜನಾತ್ಮಕವಾಗಿ ತೋರಿಸಲಾಗಿದೆ.

Tags