ಸುದ್ದಿಗಳು

‘ಪಡ್ಡೆಹುಲಿ’ ತಂಡದಿಂದ ಪವರ್ ಸ್ಟಾರ್ ಗೆ ವಿಭಿನ್ನ ಗಿಫ್ಟ್

ಇಂದು 44ನೇ ವಸಂತಕ್ಕೆ ಕಾಲಿಟ್ಟ ನಟ ಪುನೀತ್ ರಾಜ್ ಕುಮಾರ್

ಬೆಂಗಳೂರು.ಮಾ.17: ಇಂದು ನಟ ಪುನೀತ್ ರಾಜ್ ಕುಮಾರ್ 44ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬದ ನಿಮಿತ್ತ ಅಭಿಮಾನಿಗಳು ಅಪ್ಪು ಮನೆ ಮುಂದೆ ಜಮಾಯಿಸಿ, ಶುಭ ಕೋರಿದರು. ಹಾಗೆಯೇ ಸಿನಿಮಾರಂಗದವರು ಸಹ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ‘ಪಡ್ಡೆಹುಲಿ’ ಚಿತ್ರತಂಡದವರು ಸಹ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

 

ಇಂದು ‘ಪಡ್ಡೆಹುಲಿ’ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಚಿತ್ರತಂಡದವರು ಪುನೀತ್ ರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೌದು, ಕಲಾ ಜ್ಞಾನಿಗೆ ಸರಸ್ವತಿ ಭಂಡಾರದ ಕಿರು ಕಾಣಿಕೆ ನೀಡುವ ಮೂಲಕ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಹಾಗೆಯೇ ಪುನೀತ್ ಇಂದು ಸರಳವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

ಇನ್ನು ‘ಪಡ್ಡೆಹುಲಿ’ ಚಿತ್ರವು ಈಗಾಗಲೇ ತನ್ನ ವಿಭಿನ್ನ ಪೋಸ್ಟರ್, ಟೀಸರ್, ಟ್ರೈಲರ್ ಮತ್ತು ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದ್ದು, ಸದ್ಯದಲ್ಲಿಯೇ ತೆರೆಯ ಮೇಲೆ ಬರಲಿದೆ. ಈ ಚಿತ್ರದ ಮೂಲಕ ಕೆ. ಮಂಜು ಅವರ ಸುಪುತ್ರ ಶ್ರೇಯಸ್ ನಾಯಕನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಉಳಿದಂತೆ ರಕ್ಷಿತ್ ಶೆಟ್ಟಿ ಗೆಸ್ಟ್ ಅಪಿರಿಯೆನ್ಸ್ ಮಾಡಿದ್ದು, ನಿಶ್ವಿಕಾ ನಾಯ್ಡು ನಾಯಕಿಯಾಗಿದ್ದಾರೆ.

ಆಧುನಿಕ ಜಗತ್ತಿನ ನೈಜ ಘಟನಾವಳಿಗಳ ಆವರಣ

#paddehuli, #birthdaywished, #balkaninews #kannadasuddigalu, #filmnews, #shreyash, #gurudeshapande

Tags