ಸುದ್ದಿಗಳು

‘ಪಡ್ಡೆಹುಲಿ’ ಗೆ ದರ್ಶನ್ ಸಾಥ್, ಬಿಡುಗಡೆಯಾಯ್ತು ಟ್ರೇಲರ್

ಬೆಂಗಳೂರು, ಫೆ.26:

ಸದಾ ಹೊಸಬರಿಗೆ ಸಾಥ್ ನೀಡುತ್ತಾ ಬರುತ್ತಿರುವ ನಟ ದರ್ಶನ್ ಇದೀಗ ‘ಪಡ್ಡೆಹುಲಿ’ ಗ್ಯಾಂಗ್‌ ಗೆ ಸಾಥ್ ನೀಡಿದ್ದಾರೆ.  ಇಂದು ಸಂಜೆ ದರ್ಶನ್ ಈ ಸಿನಿಮಾ ಟ್ರೇಲರ್ ಲಾಂಚ್ ಮಾಡುವ ಮೂಲಕ ಮತ್ತೆ ಹೊಸಬರಿಗೆ ಸಾಥ್ ನೀಡಿದ್ದಾರೆ.

ಗುರು ದೇಶಪಾಂಡೆ ನಿರ್ದೇಶನದ ಸಿನಿಮಾ

ಹೌದು, ತೇಜಸ್ವಿನಿ ಎಂಟರ್ ಪ್ರೈಸಸ್ ಅಡಿಯಲ್ಲಿ ತಯಾರಾಗಿರುವ ‘ಪಡ್ಡೆ ಹುಲಿ’ ಸಿನಿಮಾಗೆ ಎಂ ರಮೇಶ್ ಬಂಡವಾಳ ಹೂಡಿದ್ದು, ಗುರು ದೇಶ್ ಪಾಂಡೆ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ನಾಯಕ ನಟನಾಗಿ ಕೆ.ಮಂಜು ಪುತ್ರ ಶ್ರೇಯಸ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಪಿಆರ್‌ಕೆ ಸಂಸ್ಥೆಯಡಿಯಲ್ಲಿ ಈ ಟ್ರೇಲರ್ ಲಾಂಚ್ ಆಗಿದೆ.

ಟ್ರೇಲರ್‌ ನಲ್ಲಿ ನಿರೀಕ್ಷೆ ಹುಟ್ಟಿಸಿದ ಶ್ರೇಯಸ್

ಇನ್ನು ಬಿಡುಗಡೆಯಾದ ಟ್ರೇಲರ್ ನಿಜಕ್ಕೂ ಅದ್ಭುತವಾಗಿ ಮೂಡಿ ಬಂದಿದೆ. ಕಾಲೇಜಿನ ದಿನಗಳಲ್ಲಿನ ನೆನಪುಗಳೂ, ಅಪ್ಪ ಅಮ್ಮನ ಮಾತಿನಂಥೆ ಸಾಧನೆ ಮಾಡುವ ದಿನಗಳು, ಹುಡುಗಿಗಾಗಿ ಮೀಸಲಿಟ್ಟ ಕ್ಷಣಗಳು ಹೀಗೆ ಎಲ್ಲವನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಎಂಟ್ರಿ ಕೂಡ ಇದೆ. ಜಬರ್ದಸ್ತ್ ಎಂಟ್ರಿ ಕೊಡುವ ಶ್ರೇಯಸ್ ನಟನೆ ಕೂಡ ಸುಂದರವಾಗಿ ಮೂಡಿ ಬಂದಿದೆ. ಬಹಳ ದಿನಗಳ ನಂತರ ರವಿಚಂದ್ರನ್ ಮತ್ತು ಸುಧಾರಾಣಿ ತೆರೆಯ ಮೇಲೆ ಕಾಣಿಸಿಕೊಂಡಿರುವುದು ಖುಷಿಯ ಸಂಗತಿಯೇ ಸರಿ.

ಸಿನಿಮಾ ನಿರೀಕ್ಷೆ ಹೆಚ್ಚಿಸಿದ ಟ್ರೇಲರ್

ಈಗಾಗಲೇ ಹಾಡುಗಳ ಮೂಲಕ ಸಕ್ಕತ್ ಸದ್ದು ಮಾಡಿದ್ದ ಈ ಸಿನಿಮಾ ಇದೀಗ ಟ್ರೇಲರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ ಈ ಸಿನಿಮಾದ ಒಂದೊಂದು ಹಾಡುಗಳು ಕೂಡ ಅದ್ಧೂರಿಯಾಗಿ ಮೂಡಿ ಬಂದಿದ್ದವು. ಹಾಡಿನಲ್ಲಿಯೇ ಹಳೆಯ ದಿನಗಳು ನೆನಪಿಸುವಂತಿದ್ದವು. ವಿಷ್ಣು ಜಿ ಅವತಾರದಲ್ಲಿ ಕಂಡ ಶ್ರೇಯಸ್ ನೋಡಿದ ಅಭಿಮಾನಿಗಳು ಕೂಡ ಸಿನಿಮಾ ಇನ್ನೇಗಿರುತ್ತೆ ಅಂತಾ ಮಾತನಾಡಿಕೊಳ್ಳುತ್ತಿದ್ದರು. ಇದೀಗ ಈ ಸಿನಿಮಾದ ಟ್ರೇಲರ್ ಕೂಡ ಅಷ್ಟೆ ವಿಭಿನ್ನವಾಗಿ ಮೂಡಿ ಬಂದಿದೆ.

ಘಳ ಘಳ ಹೊಳೆಯುವ ತ್ವಚೆಗೆ ಅಲೋವೆರಾ!!

#prkaudio #paddehulitrailer #shreyasanddarshan #kmanju #balkaninews

Tags