ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಸೋತು ಗೆದ್ದು, ಬದುಕಿನ ಪಾಠವನ್ನು ತಿಳಿಸುವ ‘ಪಡ್ಡೆಹುಲಿ’

ಎಲ್ಲಾ ವಿಧದ ರಸಗಳನ್ನು ಒಳಗೊಂಡಿರುವ ಸಿನಿಮಾ

ಚಿತ್ರ : ಪಡ್ಡೆಹುಲಿ

ಕಲಾವಿದರು: ಶ್ರೇಯಸ್, ನಿಶ್ವಿಕಾ ನಾಯ್ಡು, ರವಿಚಂದ್ರನ್. ಸುಧಾರಾಣಿ, ಧರ್ಮಣ್ಣ, ಚಿಕ್ಕಣ್ಣ, ರಕ್ಷಿತ್ ಶೆಟ್ಟಿ, ಪುನೀತ್ ರಾಜ್ ಕುಮಾರ್, ಯೋಗರಾಜ್ ಭಟ್ ಮುಂತಾದವರು

ಬಿಡುಗಡೆ: ಏಪ್ರಿಲ್ 19, 2019

 

ಬೆಂಗಳೂರು.ಏ.20: ಕನ್ನಡದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾದ ಕೆ. ಮಂಜು ಸುಪುತ್ರ ಶ್ರೇಯಸ್ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿಯಾಗಿಯೇ ಖಾತೆ ತೆರೆದಿದ್ದಾರೆ. ಹೆಸರಿಗೆ ತಕ್ಕಂತೆ ಇದೊಂದು ಯೂಥ್ ಓರಿಯೆಂಟೆಡ್ ಸಿನಿಮಾವಾಗಿದ್ದು, ಚಿತ್ರದಲ್ಲಿ ಎಲ್ಲಾ ವಿಧದ ರಸಗಳನ್ನು ಕಾಣಬಹುದು.

ಈ ಚಿತ್ರವು ನೆಲದ ಸೊಗಡಿನ ಯುವ ಸಮುದಾಯದ ಕಥೆಯೊಂದಿಗೆ, ಎಲ್ಲವನ್ನೂ ದಾಟಿಕೊಂಡು ಗುರಿಯತ್ತ ಮುನ್ನುಗ್ಗುವ ಛಲಕ್ಕೆ ಕಸುವು ತುಂಬುವಂತೆ ಮತ್ತು ಕೇವಲ ಯುವ ಸಮೂಹ ಮಾತ್ರವಲ್ಲದೇ ಒಂದಿಡೀ ಫ್ಯಾಮಿಲಿ ಒಟ್ಟಾಗಿ ನೋಡಿ ಎಂಜಾಯ್ ಮಾಡುವ ರೀತಿಯಲ್ಲಿ ಮೂಡಿ ಬಂದಿದೆ. ಎಲ್ಲಾ ವರ್ಗದ ಜನರನ್ನೂ ಸೆಳೆಯುವ ಈ ಚಿತ್ರದ ಪ್ರತಿಯೊಂದು ಹಾಡುಗಳು ಪ್ರೇಕ್ಷಕರ ಮನಸ್ಸಿಗೆ ನೇರವಾಗಿ ಲಗ್ಗೆಯಿಟ್ಟಿವೆ.

ಒಬ್ಬ ಯುವಕ ‘ಸಂಗೀತ’ದಲ್ಲಿ ಸಾಧನೆ ಮಾಡಿ ಸರ್ವಸ್ವವಾದ ಸಂಗೀತಳನ್ನು (ನಾಯಕಿ ನಿಶ್ವಿಕಾ) ಪಡೆಯಬೇಕೆಂಬ ಹುಚ್ಚಹಂಬಲದೊಂದಿಗೆ ಬೆಂಗಳೂರಿಗೆ ಬಂದು ಎಲ್ಲಾ ಕಷ್ಟಗಳ ಮಧ್ಯೆ ಹೇಗೆ ಸಾಧನೆ ಮಾಡುತ್ತಾನೆ, ಅವನ ಪಯಣಕ್ಕೆ ಎದುರಾಗುವ ಅಡ್ಡಿ ಆತಂಕ ಅನುಮಾನ, ಅವಮಾನ, ಸನ್ಮಾನ.. ಹೀಗೆ ಇವುಗಳನ್ನು ಒಳಗೊಂಡ ಚಿತ್ರವೇ ಪಡ್ಡೆಹುಲಿ.

ನಾಯಕ ಶ್ರೇಯಸ್ ರಿಗೆ ಇದು ಮೊದಲ ಚಿತ್ರವಾದರೂ ಜಬರ್ಧಸ್ತ್ ಆ್ಯಕ್ಟಿಂಗ್ ಮಾಡಿದ್ದು, ಚಿತ್ರದ ಸ್ಟಾರ್ ಕಾಸ್ಟ್ ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ನಾಯಕನ ತಂದೆಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸುಧಾರಾಣಿ ತಾಯಿಯಾಗಿ ಮಿಂಚಿದರೆ, ನಾಯಕಿಯಾಗಿ ನಿಶ್ವಿಕಾ ನಾಯ್ಡು, ಸೀನಿಯರ್ ಸ್ಟೂಡೆಂಟ್ ಕರ್ಣನಾಗಿ ರಕ್ಷಿತ್ ಶೆಟ್ಟಿ, ಪಿ.ಆರ್.ಕೆ ಆಡಿಯೋ ಸಂಸ್ಥೆಯ ಮಾಲೀಕನಾಗಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಪಾತ್ರಗಳು ಚಿತ್ರದ ಬಗ್ಗೆ , ಎಚ್.ಓ.ಡಿಯಾಗಿ ಚಿಕ್ಕಣ್ಣ, ಗೆಳೆಯರಾಗಿ ಧರ್ಮಣ್ಣ, ಅಮಿತ್ ಹೀಗೆ ಎಲ್ಲಾ ಪಾತ್ರಗಳೂ ಗಮನ ಸೆಳೆಯುತ್ತವೆ.

ಪ್ರತಿಯೊಬ್ಬರ ಜೀವನದಲ್ಲೂ ಸೋಲು ಮತ್ತು ಗೆಲುವು ಇದ್ದೇ ಇರುತ್ತದೆ. ಸೋತು ತಕ್ಷಣ ಅದೇ ಅಂತಿಮವಾಗಲ್ಲ. ಆ ಸೋಲುಗಳನ್ನೇ ಮೆಟ್ಟಿಲು ಮಾಡಿಕೊಂಡು ಗೆಲುವಿನ ಗುರಿ ಮುಟ್ಟಬೇಕು. ಇದೇ ಸೂತ್ರ ಇಟ್ಟಕೊಂಡು ಜೀವನದ ಗುರಿಯನ್ನು ಸಾಧಿಸಲು ಹೊರಟ ‘ರಾಕ್ ಸ್ಟಾರ್ ಪಡ್ಡೆಹುಲಿಯ’ ಕಥೆಯಿದು.

Image may contain: 5 people, people sitting

ಚಿತ್ರದುರ್ಗದಲ್ಲಿ ಆರಂಭವಾಗುವ ಕಥೆ ಸೆಕೆಂಡ್ ಹಾಫ್ ನಲ್ಲಿ ಬೆಂಗಳೂರಿನಲ್ಲಿ ಸಾಗುತ್ತದೆ. ಮೊದರ್ಲಾಧ ಪೂರ್ತಿ ಕಾಲೇಜು ಹುಡುಗನ ಜಾಲಿಡೇಸ್, ಲವ್, ಫೈಟ್, ಕಾಮಿಡಿ, ಫ್ಯಾಮಿಲಿ,ತ್ಯಾಗ, ನೋವು, ಹತಾಷೆ, ಸಾಧನೆ.. ಹೀಗೆ ಕಥೆ ಸಾಗುತ್ತದೆ. ಈ ಪಯಣವು ಹಿತವಾಗಿದ್ದು, ಪ್ರೇಕ್ಷಕರನ್ನು ಸೆಳೆಯುತ್ತದೆ. ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ಎಂಜಾಯ್ ಮಾಡಬಹುದು. ಒಟ್ಟಾರೆ ಕೊಟ್ಟ ಕಾಸಿಗೆ ಮೋಸ ಮಾಡದೇ ಮನರಂಜಿಸುತ್ತಾನೆ ಈ ‘ಪಡ್ಡೆಹುಲಿ’.

ಕಿರಿಕ್ ಬೆಡಗಿಯ ಬಿಕನಿ ಪೋಟೊ ವೈರಲ್…!!

#paddehuli, #reviews, #balkaninews #filmnews, #kannadasuddigalu, #nishvikanaidu, #shreyash,

Tags