ಸುದ್ದಿಗಳು

‘ಪಡ್ಡೆಹುಲಿ’ಯನ್ನು ಮೆಚ್ಚಿಕೊಂಡ ಸೆನ್ಸಾರ್ ಮಂಡಳಿ

ಯಾವುದೇ ಕಟ್ಸ್ ಹಾಗೂ ಮ್ಯೂಟ್ ಇಲ್ಲದೇ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

ಬೆಂಗಳೂರು.ಮಾ.14: ಯುವ ನಟ ಶ್ರೇಯಸ್ ನಟನೆಯ ‘ಪಡ್ಡೆಹುಲಿ’ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿವೆ. ಇನ್ನು ಈ ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಳಿಯವರು ಮೆಚ್ಚಿಕೊಂಡಿದ್ದು, ಚಿತ್ರಕ್ಕೆ ಯಾವುದೇ ಕಟ್ಸ್ ಹಾಗೂ ಮ್ಯೂಟ್ ಇಲ್ಲದೇ ಯು/ಎ ಪ್ರಮಾಣ ಪತ್ರ ನೀಡಿದ್ದಾರೆ.

ಚಿತ್ರದ ಬಗ್ಗೆ

ಹೌದು, ಇಷ್ಟು ದಿನಗಳ ಕಾಲ ಹಾಡುಗಳು ಮತ್ತು ಟ್ರೈಲರ್ ನಿಂದ ನೋಡುಗರಿಂದ ಗಮನ ಸೆಳೆಯುತ್ತಿದ್ದ ಈ ಸಿನಿಮಾ ಈಗ ಸೆನ್ಸಾರ್ ಮುಗಿಸಿದ್ದು, ಸದ್ಯದಲ್ಲಿಯೇ ತೆರೆಯ ಮೇಲೆ ಬರಲಿದೆ. ಚಿತ್ರದಲ್ಲಿ ಹೊಸ ರೀತಿಯ ಲವ್ ಸ್ಟೋರಿಯಿದ್ದು, ಅದಕ್ಕೆ ತಕ್ಕಂತೆ ಹಾಡುಗಳು ಸಹ ಚಿತ್ರದಲ್ಲಿವೆ.

ಕಥಾಹಂದರ

ವರ್ತಮಾನದ ಯುವಕ-ಯುವತಿಯರು ಇಷ್ಟಪಡುವಂತ ಸಿನಿಮಾವಿದು. ಅವರ ಕನಸುಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಕಥಾನಾಯಕ ಇಲ್ಲಿ ಮಧ್ಯಮ ವರ್ಗದ ಕುಟುಂಬದವನು, ಅವನ ತೊಳಲಾಟ ಮತ್ತು ಪ್ರೀತಿಯ ಭಾವನೆಗಳನ್ನು ಇಲ್ಲಿ ಕಾಣಬಹುದು. ನಿಶ್ಚಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ನಾಯಕ ಭಾವಗೀತೆಗಳನ್ನು ಹಾಡುವ ಗಾಯಕನಾಗಿರುತ್ತಾನೆ. ಅದಕ್ಕಾಗಿ ನಾಲ್ಕು ಭಾವಗೀತೆಗಳನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.

ಡಿ.ವಿ.ಜಿ ಅವರ ‘ಬದುಕು ಜಟಕಾ ಬಂಡಿ’, ಕೆ ಎಸ್ ನರಸಿಂಹಸ್ವಾಮಿ ಅವರ ‘ನಿನ್ನ ಪ್ರೇಮದ ಪರಿಯ’, ಜಿ ಪಿ ರಾಜರತ್ನಂ ಅವರ ‘ಹೆಂಡ ಹೆಂಡ್ತಿ ಕನ್ನಡ ಪದಗೊಳ್’ ಹಾಗೂ ಬಿ ಆರ್ ಲಕ್ಷ್ಮಣ ರಾವ್ ಅವರ ‘ಹೇಳಿ ಹೋಗು ಕಾರಣ’.. ಶ್ರೀ ಬಸವಣ್ಣರ ಕಳಬೇಡ…ಕೊಲಬೇಡ…ಹುಸಿಯ ನುಡಿಯಲೂ ಬೇಡ’, ಜಿ.ಪಿ. ರಾಜರತ್ನಂ ಅವರ ‘ಹೆಂಡ ಹೆಡ್ತಿ ಕಾಣದ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ… ಈ ಎಲ್ಲಾ ಹಾಡುಗಳನ್ನು ಮರು ಸಂಯೋಜನೆ ಮಾಡಿ ಹಾಡಿಸಲಾಗಿದೆ.

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಕಲಾವಿದರಿಗೆ ಸನ್ಮಾನ

#paddehuli, #sencar, #balkaninews #shreyash, #nishvikanaidu, #kannadasuddigalu

Tags

Related Articles