ಸುದ್ದಿಗಳು

ಸಂಕ್ರಾಂತಿಗೆ ‘ಪೈಲ್ವಾನ್’ ಟೀಸರ್ !!

ಬೆಂಗಳೂರು,ಜ.7: ಕಿಚ್ಚ ಸುದೀಪ್, ‘ಹೆಬ್ಬುಲಿ’ ಕೃಷ್ಣ ಜೋಡಿಯ ಮತ್ತೊಂದು ಹೈ ಬಜೆಟ್ ಸಿನಿಮಾ ‘ಪೈಲ್ವಾನ್’. ಈಗಾಗಲೇ ತನ್ನ ವಿಭಿನ್ನ ಪೋಸ್ಟರ್ ಗಳ ಮೂಲಕ ಸದ್ದು ಮಾಡುತ್ತಿರುವ  ಈ ಸಿನಿಮಾ 10 ಭಾಷೆಯಲ್ಲಿ ಮೂಡಿ ಬರಲಿದೆ.

ಸಂಕ್ರಾಂತಿಗೆ ಬಿಡುಗಡೆ

ಇನ್ನು ಈ ಚಿತ್ರ ಟೀಸರ್ ಇದೇ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ.. ಜ.15 ರಂದು 4.45ಕ್ಕೆ ಕನ್ನಡ ಭಾಷೆಯಲ್ಲಿ ‘ಪೈಲ್ವಾನ್’ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.‘ಪೈಲ್ವಾನ್’ ಚಿತ್ರ ತಂಡಕ್ಕೆ ಶುಭಾಶಯಗಳು ಎಂದು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ..

10 ಭಾಷೆಯಲ್ಲಿ

ಯಶ್ ಅಭಿನಯದ ‘ಕೆಜಿಎಫ್’ ಚಿತ್ರ 5 ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಅದರೊಂದಿಗೆ ‘ಪೈಲ್ವಾನ್’ ಚಿತ್ರವೂ ಸಹ 10 ಭಾಷೆಯಲ್ಲಿ ಬರುತ್ತಿದೆ. ಹೀಗಾಗಿ ಈ ಚಿತ್ರವು ನಿರ್ದೇಶಕ ಕೃಷ್ಣ ಮತ್ತು ಕಿಚ್ಚ ಸುದೀಪ್ ಸಿನಿಮಾ ವೃತ್ತಿ ಬದುಕಿನ ಮಹೋನ್ನತ ಚಿತ್ರವಾಗುವ ಸೂಚನೆ ಕೊಟ್ಟಿದೆ.

Tags

Related Articles