ಸುದ್ದಿಗಳು

‘ಪೈಲ್ವಾನ್’ ಲೇಡಿ ಫ್ಯಾನ್ ನಿಂದ ಚಾಕ್ ಆರ್ಟ್!!!

ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ರಿಲೀಸ್ ಗೆ ರೆಡಿ ಆಗಿದ್ದು ಸುದೀಪ್ ಕಟುಮಸ್ತಾದ ಬಾಡಿ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ, ಭಾಷೆಯಲ್ಲಿ ‘ಪೈಲ್ವಾನ್’ ಸೆಪ್ಟೆಂಬರ್ 12 ರಂದು ರಿಲೀಸ್ ಆಗಲಿದೆ.

ಪೈಲ್ವಾನ್ ಆಡಿಯೋ ಇದೇ ಆಗಸ್ಟ್ 9 ರಂದು ಚಿತ್ರದುರ್ಗದಲ್ಲಿ ರಿಲೀಸ್ ಆಗಲಿದೆ. ರಿಲೀಸ್ ಗೂ ಮುನ್ನವೇ ಪೈಲ್ವಾನ್ ಹವಾ ಸಿಕ್ಕಾಪಟ್ಟೆ ಜೋರಾಗಿದೆ. ಈಗ ಕಿಚ್ಚನ ಅಭಿಮಾನಿಯೊಬ್ಬರು ಪೈಲ್ವಾನನ ಚಾಕ್ ಆರ್ಟ್ ಮಾಡಿದ್ದಾರೆ.  ಹೌದು ಪಕ್ಕಾ ಕಿಚ್ಚನ ಅಭಿಮಾನಿಯಾಗಿರುವ ಇವರು ಸೂಪರ್ ಫಾಸ್ಟ್ ಆಗಿ ಚಾಕ್ ನಲ್ಲಿ ಪೈಲ್ವಾನನ ಚಿತ್ರ ಬಿಡಿಸಿದ್ದಾರೆ.

ವಿಶೇಷ ಏನಂದ್ರೆ ಈ ಆರ್ಟ್ ಮಾಡಿದ್ದು ಯುವತಿ. ಹೆಚ್ಚಾಗಿ ಗಂಡು ಮಕ್ಕಳೇ ಆರ್ಟ್ ಮಾಡುವುದನ್ನು ನೋಡಿದ್ದೇವೆ. ಅಂತಹದ್ದರಲ್ಲಿ ಯುವತಿಯೊಬ್ಬರು ಸಖತ್ ಆಗಿ ಚಾಕ್ ಆರ್ಟ್ ಮಾಡಿದ್ದು, ಈಗ ಈ ಚಾಕ್ ಆರ್ಟ್ ವಿಡಿಯೋ ವೈರಲ್ ಆಗಿದೆ

ಪೈಲ್ವಾನ್ ಚಿತ್ರದಲ್ಲಿ ಆಕಾಂಕ್ಷಾ ಸಿಂಗ್‌ ನಾಯಕಿಯಾಗಿ ನಟಿಸಿದ್ದು, ಸುನೀಲ್‌ ಶೆಟ್ಟಿ, ಸುಶಾಂತ್‌ ಸಿಂಗ್, ಕಬೀರ್‌ ದುಹಾನ್‌ ಸಿಂಗ್‌ ಸೇರಿದಂತೆ ಹೆಸರಾಂತ ತಾರಾಬಳಗವೇ ಸಿನಿಮಾದಲ್ಲಿದೆ.

ಹಾರೋಣಾ ಜಿಗಿ ಜಿಗಿದು.. ಬಾನಲ್ಲಿ.. ಎಂದು ಹಾಡಿ ಕುಣಿದ ಸ್ನೇಹಿತರು..!!

#pailwaan #pailwaanchlakart #kicchasudeep

Tags