ಸುದ್ದಿಗಳು

ಕೇವಲ 24 ಗಂಟೆಯಲ್ಲಿ ‘ಪೈಲ್ವಾನ್’ ಹೊಸ ದಾಖಲೆ!!

ಬೆಂಗಳೂರು,ಜ.16: ಸುದೀಪ್ ಸಿನಿಮಾಗಳು ಅಂದರೆ ಅಲ್ಲಿ ಏನಾದರೂ ವಿಶೇಷಗಳು ಇದ್ದೇ ಇರುತ್ತವೆ. ಅನೇಕ ಚಿತ್ರಗಳ ಮೂಲಕ ಗೆದ್ದಿರುವ ಅವರು ಇದೀಗ ಮತ್ತೊಂದು ಗೆಲುವಿನ ಸೂಚನೆ ನೀಡಿದ್ದಾರೆ.  ಸಂಕ್ರಾಂತಿಗೆ  ಕಿಚ್ಚ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದ್ದೂ ಆಗಿದೆ.. ನಿನ್ನೆಯಷ್ಟೇ ಸಂಕ್ರಾಂತಿಗೆ ಕಿಚ್ಚ ಪೈಲ್ವಾನ್ ಟಟೀಸರ್ ಬಿಡುಗಡೆ ಮಾಡಿದ್ದರು.. ಕುಸ್ತಿ ಪಟುವಾಗಿ ವಿಭಿನ್ನ ಲುಕ್ ನಲ್ಲಿ ಅಖಾಡದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದರು..

Image result for pailwaan teaser

2 ಮಿಲಿಯನ್ ವೀಕ್ಷಣೆ

ಕಿಚ್ಚ ಸುದೀಪ್, ‘ಹೆಬ್ಬುಲಿ’ ಕೃಷ್ಣ ಜೋಡಿಯ ಮತ್ತೊಂದು ಹೈ ಬಜೆಟ್ ಸಿನಿಮಾ ‘ಪೈಲ್ವಾನ್’. ಈಗಾಗಲೇ ತನ್ನ ವಿಭಿನ್ನ ಪೋಸ್ಟರ್ ಗಳ ಮೂಲಕ ಸದ್ದು ಮಾಡುತ್ತಿರುವ  ಈ ಸಿನಿಮಾ 10 ಭಾಷೆಯಲ್ಲಿ ಮೂಡಿ ಬರಲಿದೆ. ಇನ್ನು ಅನೇಕ ಸೆಲೆಬ್ರೆಟಿಗಳು ಕಿಚ್ಚನ ಪೈಲ್ವಾನ್ ಟೀಸರ್ ವೀಕ್ಇಸಿ ಶ್ಲಾಘಿಸಿದ್ದಾರೆ.. ಈಗ ಟೀಸರ್ ಕೇವಲ 1ದಿನದಲ್ಲಿ 2 ಮಿಲಿಯನ್ ವೀಕ್ಷಣೆ ದಾಟಿ ಮುನ್ನುಗ್ಗುತ್ತಿದೆ..

https://www.youtube.com/watch?v=POMumo3pS80

#balkaninews #kicchasudeep #pailwaan

Tags