ಸುದ್ದಿಗಳು

‘ಬಂದ ನೋಡು ಪೈಲ್ವಾನ್” ಥೀಮ್ ಸಾಂಗ್ ರಿಲೀಸ್ !!

ಪೈಲ್ವಾನ್’ ಕಿಚ್ಚ ಸುದೀಪ್ ಅಭಿನಯದ  ಬಹು ನಿರೀಕ್ಷಯ ಚಿತ್ರ.. ಈಗಾಗಲೇ ಈ ಚಿತ್ರದ ಹೈಪ್ ಕ್ರಿಯೇಟ್ ಆಗಿದ್ದುಅಷ್ಟಿಷ್ಟಲ್ಲ..  ಇಂದು ಈ ಚಿತ್ರ ಥೀಮ್ ಸಾಂಗ್ ರಿಲೀಸ್ ಆಗಿದ್ದು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ..

ಲಹರಿ ಮ್ಯೂಸಿಕ್ ನಲ್ಲಿ ಹಾಗೂ ಟಿ-ಸಿರೀಸ್ ನಲ್ಲಿ ಬಿಡುಗಡೆಯಾಗಿದ್ದು ಬಂದ ನೋಡು ಪೈಲ್ವಾನ್ ಎಂಬ ಹಾಡು ರೋಮಾಂಚನಗೊಳಿಸುವಂತಿದೆ.. ಕನ್ನಡದಲ್ಲಿ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಸಂಗೀತ ಅರ್ಜುನ್ ಜನ್ಯ ನೀಡಿದ್ದಾರೆ..

“ಬರಿ ಬರಿ ಬರಾಬರ್ರಿ… ಹೊಯ್.. ಬರಿ ಬರಿ ಬಾಬರ್ರಿ ಪೈಲ್ವಾನ್ .. ತೋಳು ನೋಡು ಉಕ್ಕು..ಒಂದೇ ಏಟು ಸಾಕು ದೇವ್ರೇ ನಿಂಗೆ ದಿಕ್ಕು” ಎಂಬ ಥೀಮ್ ಹಾಡು ಸಖತ್ ಆಗಿದೆ.. ಇನ್ನು ಕಿಚ್ಚನ ಲುಕ್ ಎಲ್ಲವೂ ಕ್ಲಾಸಿಯಾಗಿದೆ.. ಬಿಜಿಎಂ ಬಗ್ಗೆ ಎರಡು ಮಾತೇ ಇಲ್ಲ..

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲೂ ಪೈಲ್ವಾನ್ ಥೀಮ್ ಸಾಂಗ್ ರಿಲೀಸ್ ಆಗಿದ್ದು ಅಭಿಮಾನಿಗಳು ಕಿಚ್ಚನ ಹೊಸ ಕುಸ್ತಿ ಪಟ್ಟು ಲುಕ್ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ..

ಹೆಬ್ಬುಲಿ ಚಿತ್ರದ ಮೂಲಕ ಸುದೀಪ್ ಹಾಗೂ ಛಾಯಾಗ್ರಾಹಕ ಕೃಷ್ಣ ಮೋಡಿ ಮಾಡಿತ್ತು.. ಇದೇ ಮೊದಲ ಬಾರಿಗೆ ಕೃಷ್ಣ ನಿರ್ದೇಶಕರಾಗಿ ಪೈಲ್ವಾನ್ ಚಿತ್ರದ ಮೂಲಕ ಕಾಲಿಡುತ್ತಿದ್ದಾರೆ ಕೃಷ್ಣ.. ಕುಸ್ತಿಪಟು ಮತ್ತು ಬಾಕ್ಸರ್ ನ ಪಾತ್ರದಲ್ಲಿ ಸುದೀಪ್ ನಟಿಸಿದ್ದು, ಅಕಾಂಕ್ಷಾ ಸಿಂಗ್ ನಾಯಕಿ ಪಾತ್ರದಲ್ಲಿ ಮಿಂಚಿದ್ದಾಳೆ.. ಮತ್ತು ಸುನೀಲ್ ಶೆಟ್ಟಿ ಮತ್ತು ಸುಶಾಂತ್ ಸಿಂಗ್ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ…
ಯೂಟ್ಯೂಬ್ ನಲ್ಲಿ ನಂ.1 ಟ್ರೆಂಡಿಂಗ್ ಆದ ರಾಕುಲ್ ಬೋಲ್ಡ್ ಟೀಸರ್!

#pailwaan #pailwaanthemesong #kicchasudeep

Tags