ಸುದ್ದಿಗಳು

ಏಪ್ರಿಲ್ ನಲ್ಲಿ ಬರಲು ರೆಡಿಯಾಗಿದ್ದಾನೆ ಪೈಲ್ವಾನ್!!

ಬೆಂಗಳೂರು,ಫೆ.20: ಸುದೀಪ್ ಅಭಿಮಾನಿಗಳಿಗಾಗಿ, ಈ ಬೇಸಿಗೆಯಲ್ಲಿ  ಹಬ್ಬದೂಟ ಸಿಗಲಿದೆ… ಹೆಬ್ಬುಲಿ ಚಿತ್ರದ ಮೂಲಕ ಸುದೀಪ್ ಹಾಗೂ ಛಾಯಾಗ್ರಾಹಕ ಕೃಷ್ಣ ಮೋಡಿ ಮಾಡಿತ್ತು.. ಇದೇ ಮೊದಲ ಬಾರಿಗೆ ಕೃಷ್ಣ ನಿರ್ದೇಶಕರಾಗಿ ಪೈಲ್ವಾನ್ ಚಿತ್ರದ ಮೂಲಕ ಕಾಲಿಡುತ್ತಿದ್ದಾರೆ ಕೃಷ್ಣ..  ಇನ್ನು ಪೈಲ್ವಾನ್ ಬಹುಶಃ ಏಪ್ರಿಲ್ ನಲ್ಲಿ ತೆರೆ ಮೇಲೆ ಬರಲು ರೆಡಿಯಾಗಿದೆ..

Related image

ಪೈಲ್ವಾನ್ಚಿತ್ರದ ಕೊನೇ ಹಾಡಿನ ಶೂಟಿಂಗ್
ಮೊದಲ ಕುಸ್ತಿಯ ಟೀಸರ್  ಮೂಲಕ ಪೈಲ್ವಾನ್ ಟೀಸರ್ ಹವಾ ಎಬ್ಬಿಸಿತ್ತು.. ಸಲ್ಮಾನ್ ಖಾನ್ ಮತ್ತು ಧನುಷ್ ಸೇರಿದಂತೆ ಭಾರತೀಯ ಚಲನಚಿತ್ರೋದ್ಯಮದ ಸದಸ್ಯರಿಂದ ಬಹಳಷ್ಟು ಪ್ರಶಂಸೆಗೆ ಒಳಗಾಗಿತ್ತು ಟೀಸರ್ …

ಪೈಲ್ವಾನ್​ ಚಿತ್ರದ ಕೊನೇ ಹಾಡಿನ ಶೂಟಿಂಗ್ ಸದ್ಯ ನಡೀತಿದ್ದು ಈ ಹಾಡು ಕಂಪ್ಲೀಟ್ ಆದ್ರೆ ಪೈಲ್ವಾನ್ ಚಿತ್ರದ ಶೂಟಿಂಗ್ ಮುಕ್ತಾಯವಾಗಿಲಿದೆ.. ಬ್ಬುಲಿ ಕೃಷ್ಣ ನಿರ್ದೇಶನದ ಪೈಲ್ವಾನ್‌ ಚಿತ್ರದ ಡ್ಯೂಯೆಟ್​ ಸಾಂಗ್ ಚಿತ್ರೀಕರಣವಾಗಿದೆ. ಕಿಚ್ಚನ ಜೊತೆ ಆಕಾಂಕ್ಷ ಸಿಂಗ್ ಡ್ಯೂಯೆಟ್‌ ಹಾಡಿದ್ದು, ಬಾಲಿವುಡ್​ನ ಫೇಮಸ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಸ್ಟೆಪ್​ ಹಾಕಿಸಿದ್ದಾರೆ  ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ, ಆಕಾಂಶ ಸಿಂಗ್, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ಕೂಡ ನಟಿಸಿದ್ದಾರೆ. ..

 

Tags