ಸುದ್ದಿಗಳು

‘ಪೈಲ್ವಾನ್’ ಚಿತ್ರದ ಅಧಿಕೃತ ಟೈಟಲ್ ಕಾರ್ಡ್ ರಿಲೀಸ್!!!

ಕಿಚ್ಚನಿಗೆ ಆಕಾಂಕ್ಷ ನಾಯಕಿ

ಬೆಂಗಳೂರು,ಜ.3: ಕಿಚ್ಚ ಸುದೀಪ್, ‘ಹೆಬ್ಬುಲಿ’ ಕೃಷ್ಣ ಜೋಡಿಯ ಮತ್ತೊಂದು ಹೈ ಬಜೆಟ್ ಸಿನಿಮಾ ‘ಪೈಲ್ವಾನ್’. ಈಗಾಗಲೇ ತನ್ನ ವಿಭಿನ್ನ ಪೋಸ್ಟರ್ ಗಳ ಮೂಲಕ ಸದ್ದು ಮಾಡುತ್ತಿರುವ  ಈ ಸಿನಿಮಾ 9 ಭಾಷೆಯಲ್ಲಿ ಮೂಡಿ ಬರಲಿದೆ.. ಈಗ ಚಿತ್ರತಂಡದಿಂದ ಅಧಿಕೃತವಾಗಿ ಟೈಟಲ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ..

9 ಭಾಷೆಯಲ್ಲಿ ಸಿನಿಮಾ

ಈ ಹಿಂದೆ ‘ಹೆಬ್ಬುಲಿ’ಯಂತಹ ದೊಡ್ಡ ಹಿಟ್ ಕೊಟ್ಟು, ಸೌತ್ ಸಿನಿ ದುನಿಯಾ ಗಮನ ಸೆಳೆದಿರುವ ನಿರ್ದೇಶಕ ಕೃಷ್ಣ ಈ ಬಾರಿ ‘ಪೈಲ್ವಾನ್’ ಮೂಲಕ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಈ ಚಿತ್ರವು ‘ಆರ್ ಆರ್ ಆರ್’ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿದ್ದು, ಸ್ವಪ್ನಾ ಕೃಷ್ಣ ಇದಕ್ಕೆ ಬಂಡವಾಳ ಹೂಡಲಿದ್ದಾರೆ.. ಅಂದ ಹಾಗೆ ಈ ಚಿತ್ರವು  9 ಭಾಷೆಯಲ್ಲಿ ಸಿನಿಮಾ ಮಾಡಿ ಬರಲು ತಯಾರಿ ನಡೆಸುತ್ತಿದೆ.

No photo description available.

ಯಶ್ ಅಭಿನಯದ ‘ಕೆಜಿಎಫ್’ ಚಿತ್ರ 5 ಭಾಷೆಗಳಲ್ಲಿ ತೆರೆ ಕಂಡರೆ ,‘ಪೈಲ್ವಾನ್’ ಚಿತ್ರ ಸಹ 9 ಭಾಷೆಯಲ್ಲಿ ಬರುತ್ತಿದೆ. ಹೀಗಾಗಿ ಈ ಚಿತ್ರವು ನಿರ್ದೇಶಕ ಕೃಷ್ಣ ಮತ್ತು ಕಿಚ್ಚ ಸುದೀಪ್ ಸಿನಿಮಾ ವೃತ್ತಿ ಬದುಕಿನ ಒಂದು ತಿರುವು ಪಡೆಯಲಿರುವ ಚಿತ್ರವಾಗಿದೆ…

ತಾರಾಗಣ

ಹಾಲಿವುಡ್‌ನ ಸ್ಟಂಟ್ ಕೋರಿಯೋಗ್ರಾಫರ್ ಲೆರ್ನೆಲ್ ಸ್ಟೋವಾಲ್ ವಿಭಿನ್ನ ಸ್ಟಂಟ್ ನಿರ್ದೇಶನ ಮಾಡ್ತಿದ್ದಾರೆ. ಇನ್ನು ಕಿಚ್ಚನಿಗೆ ಆಕಾಂಕ್ಷ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ. ಸುನೀಲ್ ಶೆಟ್ಟಿ, ಕಭೀರ್ ಸಿಂಗ್, ಸುಶಾಂತ್ ಹಾಗೂ ಇತತರರು ಉಳಿದ ತಾರಾಗಣದಲ್ಲಿ ನಟಿಸುತ್ತಿದ್ದು. ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟಾಗುವಂತೆ ಮಾಡಿದ್ದಾರೆ

 

Tags

Related Articles