ಸುದ್ದಿಗಳು

ಸುದೀಪ್ ಜನ್ಮದಿನದಂದು ‘ಪೈಲ್ವಾನ್’ ತಂಡದಿಂದ ಅಭಿಮಾನಿಗಳಿಗೆ ಉಡುಗೊರೆ

ಸುದೀಪ್ ಅಭಿನಯಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಪೈಲ್ವಾನ್’

ಎಸ್ . ಕೃಷ್ಣ ನಿರ್ದೇಶನದ ಮೂರನೇ ಚಿತ್ರ ‘ಪೈಲ್ವಾನ್’ ಬಹಳ ಸದ್ದು ಮಾಡುತ್ತಿದ್ದು, ಬರುವ ಸಪ್ಟೆಂಬರ್ 2 ರಂದು ಅಭಿಮಾನಿಗಳಿಗೆ ಈ ಚಿತ್ರತಂಡವು ಉಡುಗೊರೆ ನೀಡಲಿದೆ ಚಿತ್ರತಂಡ.

ಬೆಂಗಳೂರು, ಆ. 27: ‘ಗಜಕೇಸರಿ’,’ಹೆಬ್ಬುಲಿ’ ಚಿತ್ರದ ನಂತರ ನಿರ್ದೇಶಕ ಎಸ್. ಕೃಷ್ಣ ನಿರ್ದೇಶನ ಮಾಡುತ್ತಿರುವ ಚಿತ್ರ ‘ಪೈಲ್ವಾನ್’. ಈ ಚಿತ್ರವು ಈಗಾಗಲೇ ತನ್ನ ವಿಭಿನ್ನ ಪೋಸ್ಟರ್ ಗಳ ಮೂಲಕ ಸಿನಿಪ್ರೇಮಿಗಳನ್ನು ಗಮನ ಸೆಳೆದಿದೆ. ಇನ್ನು ಸುದೀಪ್ ಅವರು ಬೇರೆಯದ್ದೇ ಲುಕ್ ಕಾಣಿಸಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳಿಗೆ ಉಡುಗೊರೆ

‘ಹೆಬ್ಬುಲಿ’ ಸಿನಿಮಾ ಯಶಸ್ಸಿನ ನಂತರ ನಿರ್ದೇಶಕ ಕೃಷ್ಣ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ಕೆಲಸ ಮಾಡುತ್ತಿರುವ ಎರಡನೇ ಸಿನಿಮಾ ಇದು. ಮೇಕಿಂಗ್ ಕ್ವಾಲಿಟಿ ಹಾಗೂ ಜನ ಸಾಮಾನ್ಯರಿಗೆ ಇಷ್ಟವಾಗುವಂತಹ ಕತೆಯನ್ನು ನೀಡುವಲ್ಲಿ ಕೃಷ್ಣ ಅವರು ಈಗಾಗಲೇ ಯಶಸ್ಸು ಕಂಡಿದ್ದಾರೆ. ಮುಂಬರುವ ‘ಪೈಲ್ವಾನ್’ ಚಿತ್ರದಲ್ಲಿಯೂ ಈ ಎಲ್ಲಾ ಅಂಶಗಳನ್ನು ತೆರೆ ಮೇಲೆ ನೋಡುವುದಕ್ಕೆ ಅಭಿಮಾನಿಗಳು ಕಾತುರರಾಗಿದ್ದಾರೆ.

ಇನ್ನು ಬರುವ ಸಪ್ಟೆಂಬರ್ 2 ರಂದು ಸುದೀಪ್ ಜನ್ಮದಿನವಿರುವುದರಿಂದ. ಅಂದು ಈ ಚಿತ್ರತಂಡವು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡುತ್ತಿದೆ. ಈ ಬಗ್ಗೆ ನಿರ್ದೇಶಕ ಕೃಷ್ಣರವರು, “ಈ ಬಾರಿಯ ‘ಕಿಚ್ಚೋತ್ಸವ’ ದ ಮೂಲಕ ಸುದೀಪ್ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಲಿದ್ದೇವೆ’ ಎಂದು ಟ್ವಿಟ್ ಮಾಡಿದ್ದಾರೆ.

ತಾರಾಬಳಗ

ಈ ಚಿತ್ರದಲ್ಲಿ ನಾಯಕ ಸುದೀಪ್ ಗೆ ನಾಯಕಿಯಾಗಿ ಮುಂಬೈನ ಆಕಾಂಕ್ಷ ಸಿಂಗ್ ಅಭಿನಯಿಸುತ್ತಿದ್ದು, ಬಾಲಿವುಡ್ ನ ಸುನೀಲ್ ಶೆಟ್ಟಿ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಹಾಗೂ ಕಬೀರ್ ದುಹಾನ್ ಸಿಂಗ್ ಕೂಡ ಸಿನಿಮಾದ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಹೆಬ್ಬುಲಿ ಕೃಷ್ಣ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಅವರೇ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಸುದೀಪ್ ಅವರ ‘ದಿ ವಿಲನ್’ ಚಿತ್ರವು ಬಿಡುಗಡೆಯ ಹಂತದಲ್ಲಿದೆ. ಅದರೊಂದಿಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’,’ಕೋಟಿಗೊಬ್ಬ-3’ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

Tags

Related Articles