ಸುದ್ದಿಗಳು

‘ಪೈಲ್ವಾನ್’ ಚಿತ್ರದ ಕೆಲವು ಫೋಟೋ ನಿಮಗಾಗಿ … !

‘ದಿ ವಿಲನ್’ ನಂತರ ಸುದೀಪ್ ಮುಂದಿನ ಚಿತ್ರ

ಬೆಂಗಳೂರು,ನ,12: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸುದೀಪ್, ಈ ಚಿತ್ರದಲ್ಲಿ ಕುಸ್ತಿಪಟು ಮತ್ತು ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ದೇಹವನ್ನು ದಂಡಿಸಿದ್ದಾರೆ. ಸಾಕಷ್ಟು ತರಬೇತಿಯನ್ನು ಕೂಡ ಪಡೆದಿದ್ದಾರೆ.


ಕೃಷ್ಣ ನಿರ್ದೇಶನದ ಪೈಲ್ವಾನ್ …!

‘ಹೆಬ್ಬುಲಿ’ ಬಳಿಕ ಕೃಷ್ಣ ನಿರ್ದೇಶನಲ್ಲಿ ಸುದೀಪ್ ‘ಪೈಲ್ವಾನ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಪೈಲ್ವಾನ್ ಚಿತ್ರದ ಆರಂಭದಿಂದಲೂ ಚಿತ್ರದ ಬಗ್ಗೆ ಬಾರಿ ಕುತೂಹಲ ಮೂಡಿದೆ. ಕಬೀರ್ ದುಹಾನ್ ಸಿಂಗ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸುದೀಪ್ ಗೆ ಜೋಡಿಯಾಗಿ ಆಕ್ಷಾಂಕಾ ಸಿಂಗ್ ..!

ಚಿತ್ರಕ್ಕೆ ನಾಯಕಿಯಾಗಿ ಮುಂಬೈ ಬೆಡಗಿ ಆಕಾಂಕ್ಷಾ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಚಿತ್ರ ‘ಬದ್ರಿನಾಥ್ ಕಿ ದುಲನ್ಹಿಯಾ’ ಹಾಗೂ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನಲ್ಲಿ ಅವರು 2 ಚಿತ್ರಗಳಲ್ಲಿ ನಟಿಸಿದ್ದು, ಇದೇ ಮೊದಲ ಬಾರಿಗೆ ಸುದೀಪ್ ಅವರ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಸದ್ಯ ಸಿನಿಮಾ ಸೆಟ್ ನಲ್ಲಿಂದ ಕೆಲವು ಫೋಟೋಸ್ ಗಳು ನಿಮಗಾಗಿ.

Tags

Related Articles