ಸುದ್ದಿಗಳು

‘ಪೈಲ್ವಾನ್’ ಸಿನಿಮಾ: ಬಯಲಾಯ್ತು ಸುನೀಲ್ ಶೆಟ್ಟಿ ಪಾತ್ರ

ಸರ್ಕಾರ್ ಪಾತ್ರವನ್ನು ನಿರ್ವಹಿಸುತ್ತಿರುವ ಬಾಲಿವುಡ್ ಸುನೀಲ್ ಶೆಟ್ಟಿ

ಬೆಂಗಳೂರು.ಮೇ.23: ‘ನಮ್ಮ ‘ಪೈಲ್ವಾನ್’ ಚಿತ್ರದಲ್ಲಿ ಸುನೀಲ್ ಶೆಟ್ಟಿ ಅಣ್ಣಾ . ಸರ್ಕಾರ್ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರನ್ನು ಒಳಗೊಂಡ ಪೋಸ್ಟರ್ ಬಿಡುಗಡೆಯಾಗಲಿದೆ’ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿ, ಸಾಕಷ್ಟು ಕೂತೂಹಲ ಮೂಡಿಸಿದ್ದರು.

ಇದೀಗ ಅದರಂತೆ, ಸರ್ಕಾರ್ ಪಾತ್ರವನ್ನು ತೋರಿಸುವ ಪೋಸ್ಟರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಲ್ಲಿ ಸುನೀಲ್ ಶೆಟ್ಟ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಬಿಳಿಪಂಚೆ ಹಾಗೂ ಬಿಳಿ ಅಂಗಿ ತೊಟ್ಟು ರಫ್ ಅಂಡ್ ಟಫ್ ಲುಕ್ ನಲ್ಲಿ ದರ್ಶನ ಕೊಟ್ಟಿದ್ದಾರೆ. ಈ ಪೋಸ್ಟರ್ ಅನ್ನು ಸುದೀಪ್ ಟ್ವೀಟ್ ಮಾಡಿದ್ದು, ಅಭಿಮಾನಿಗಳನ್ನು ರಂಜಿಸುತ್ತಿದೆ.

ಅಂದ ಹಾಗೆ ‘ಪೈಲ್ವಾನ್’ ಚಿತ್ರವು ಸಾಕಷ್ಟು ಕುತೂಹಲಗಳನ್ನು ಮೂಡಿಸಿದ್ದು, ಬರುವ ವರಮಹಾಲಕ್ಷ್ಮಿ ಹಬ್ಬದಂದು ತೆರೆಗೆ ಬರುತ್ತಿದೆ. ಈ ಹಿಂದೆ ‘ಗಜ ಕೇಸರಿ’ ಹಾಗೂ ‘ಹೆಬ್ಬುಲಿ’ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಕೃಷ್ಣ ಎಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರೊಂದಿಗೆ ನಿರ್ಮಾಣವನ್ನೂ ಮಾಡಿದ್ದಾರೆ.

‘ಪೈಲ್ವಾನ್’… ಹೆಸರೇ ಹೇಳುವಂತೆ, ಇಲ್ಲಿ ಸುದೀಪ್ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರವು ಏಕಕಾಲಕ್ಕೆ ಬರೋಬ್ಬರಿ 9 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್, ಆಕಾಂಕ್ಷಾ ಸಿಂಗ್, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸುಲಭ ಪರಿಹಾರ ಬಾದಾಮಿ ಎಣ್ಣೆ

#pailwana, #sunilshetty, #poster, #balkaninews #filmnews, #kannadasuddigalu

Tags