ಸುದ್ದಿಗಳು

ಪಾಕಿಸ್ತಾನ ಕಲಾವಿದರಿಗೆ ಬಾಲಿವುಡ್ ನಲ್ಲಿ ನೋ ಎಂಟ್ರಿ?

ಮುಂಬೈ,ಫೆ.18:

ಪುಲ್ವಾಮ ದುರಂತ ಎಂದೂ ಮಾಸಲಾಗೋದಿಲ್ಲ. ಇದೀಗ ತಕ್ಕುದಾದ ಉತ್ತರ ನೀಡೋಕೆ ಭಾರತ ರೆಡಿಯಾಗಿದೆ.

ಪುಲ್ವಾಮ ದುರಂತದಲ್ಲಿ ದೇಶದ ಯೋಧರನ್ನು ಪಾಪಿ ಪಾಕಿಸ್ತಾನ ಬಲಿ ಪಡೆಯಿತು. ಈ ಕುಕೃತ್ಯಕ್ಕೆ ಅಮಾಯಕ ಭಾರತಾಂಬೆಯ ಮಕ್ಕಳು ಜೀವ ತೆತ್ತರು. ಇದೀಗ ಈ ಪಾಕಿಸ್ತಾನಕ್ಕೆ ಉತ್ತರ ನೀಡೋದಿಕ್ಕೆ ಭಾರತ ರೆಡಿಯಾಗಿದೆ. ಈ ಬೆನ್ನಲ್ಲೇ ಒಂದೊಂದು ರೀತಿಯಲ್ಲಿ ಉತ್ತರ ಕೊಟ್ಟೇ ಕೊಡ್ತೇವೆ ಎನ್ನುತ್ತಿದೆ ಭಾರತ.

ಇನ್ಮುಂದೆ ಪಾಕಿಸ್ತಾನದವರಿಗೆ ನೋ ಎಂಟ್ರಿ

ಹೌದು, ಸಿನಿಮಾ ರಂಗ ಅಂದಮೇಲೆ ಅಲ್ಲಿ ಕಲೆಗೆ ಬೆಲೆ ಇದ್ದೇ ಇರುತ್ತದೆ. ಅದರಲ್ಲೂ ನಮ್ಮ ಭಾರತ ಅಹಿಂಸೆ, ಶಾಂತಿಯುತಕ್ಕೆ ಹೆಸರು ಮಾಡಿದೆ. ಅಷ್ಟೆ ಅಲ್ಲ ಯಾರೇ ಬಂದ್ರು ಕೂಡ ಪ್ರೀತಿಯಿಂದ ಅಪ್ಪಿ ಕೆಲಸ ನೀಡ್ತೇವೆ. ಇದೀಗ ಸಿನಿಮಾ ರಂಗದಲ್ಲೂ ಕೂಡ ಬೇರೆ ಬೇರೆ ದೇಶದವರಿಗೂ ಕೂಡ ಆದ್ಯತೆ, ಅವಕಾಶ ಇತ್ತು. ಅದೇ ರೀತಿ ಪಾಕಿಸ್ತಾನಕ್ಕೂ ಕೂಡ ನಮ್ಮಲ್ಲಿ ಅವಕಾಶ ನೀಡಲಾಗಿತ್ತು. ಇದೀಗ ಈ ಪಾಪಿಸ್ತಾನ ಮಾಡಿದ ಪಾಪಕ್ಕೆ ತಕ್ಕುದಾದ ಉತ್ತರ ನೀಡೋಕೆ ಸಿನಿಮಾ ರಂಗ ತಯಾರಿ ನಡೆಸಿದೆ.

Image result for pakistani singers banned in india

ಯಾವುದೇ ಕಾರಣಕ್ಕೂ ಅವಕಾಶ ಇಲ್ಲ

ಹೌದು, ಇನ್ನುಮುಂದೆ ಪಾಕಿಸ್ತಾನದ ಕಲಾವಿದರಿಗೆ ಅವಕಾಶಗಳನ್ನು ನೀಡಬಾರದೆಂದು ತೀರ್ಮಾನ ಮಾಡಲಾಗಿದೆ. ಪಶ್ಚಿಮ ಇಂಡಿಯನ್ ಸಿನೆಮಾ ಒಕ್ಕೂಟ ಬಾಲಿವುಡ್​ ಅಂಗಳದಿಂದ ಪಾಕಿಸ್ತಾನ ನಟ-ನಟಿಯರಿಗೆ, ಗಾಯಕರೂ ಸೇರಿದಂತೆ ಎಲ್ಲ ರೀತಿಯ ಕಲಾವಿದರಿಗೆ ನಿಷೇಧ ಹೇರಿ ಸೂಚನೆಯನ್ನು ಹೊರಟಿಸಿದೆ. ಇದೀಗ ಖಾಸಗೀ ಚಾನೆಲ್ ಒಂದು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿದೆ.

ವಿಕಲಚೇತನರ ‘ಜಕಣಚಾರಿ ಅವನ ತಮ್ಮ ಶುಕ್ಲಾಚಾರಿ’

#balkaninews #sandalwood #bollywoodsingers #banned #pakistani

Tags

Related Articles