ಸುದ್ದಿಗಳು

ಮಂಗಳೂರಿನ ಪತ್ರಕರ್ತರೊಂದಿಗೆ ‘ಪಂಚತಂತ್ರ’ ಚಿತ್ರತಂಡ

ಸದ್ಯದಲ್ಲಿಯೇ ತೆರೆಗೆ ಬರಲಿರುವ ಬಹು ನಿರೀಕ್ಷಿತ ಸಿನಿಮಾ

ಮಂಗಳೂರು.ಫೆ.20 

ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ ‘ಪಂಚತಂತ್ರ’ ಚಿತ್ರವು ಈಗಾಗಲೇ ಎಲ್ಲರ ಗಮನ ಸೆಳೆದಿದ್ದು, ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಅನ್ನು ಮಂಗಳೂರಿನ ಬಿಗ್ ಸಿನಿಮಾಸ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಪತ್ರಿಕಾಗೋಷ್ಟಿ

ಸದ್ಯ ‘ಪಂಚತಂತ್ರ’ ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರತಂಡದವರು ಮಂಗಳೂರಿನಿಂದ ಶುರು ಮಾಡಿದ್ದಾರೆ. ಹೀಗಾಗಿ ಅಲ್ಲಿ ಪತ್ರಿಕಾಗೋಷ್ಟಿಯನ್ನು ಏರ್ಪಡಿಸಿ, ಮಾಧ್ಯಮದವರೊಂದಿಗೆ ಚಿತ್ರತಂಡದವರು ಮಾತನಾಡಿದ್ದಾರೆ.

ಇನ್ನು ಮೂಲತಃ ಕರಾವಳಿಯವರೇ ಆಗಿರುವ ನಿರ್ದೇಶಕ ಯೋಗರಾಜ್ ಭಟ್ ಈ ಚಿತ್ರದ ಮೂಲಕ ಹಲವು ಮಂದಿ ಕರಾವಳಿಯವರನ್ನು ಪರಿಚಯಿಸಿದ್ದಾರೆ. ಈ ಕಾರಣದಿಂದಲೇ ಮಂಗಳೂರಿನಲ್ಲಿ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಚಿತ್ರದ ಬಗ್ಗೆ

‘ಪಂಚತಂತ್ರ’ ಚಿತ್ರವು ಇಂದಿನ ಯುವ ಪೀಳಿಗೆ ಮತ್ತು ವಯಸ್ಸಾದವರ ನಡುವಿನ ಚಕಮಕಿಗಳ ಸುತ್ತ ಸುತ್ತುತ್ತದೆ. ಈಗಿನ ಶರವೇಗದ ಯುವಪೀಳಿಗೆಯ ಮನಸ್ಸಿನ ಆಸೆ ಮತ್ತು ಭಾವನೆಗಳನ್ನು ಹೇಳುವ ಜೊತೆಗೆ ಪ್ರೀತಿ, ಸಂಬಂಧಗಳು ಮತ್ತು ಚುರುಕು ಮುಟ್ಟಿಸುವ ಹಾಸ್ಯ ಪ್ರಸಂಗಗಳ ಜೊತೆಗೆ ಎರಡು ಗುಂಪುಗಳ ನಡುವಿನ ಭೂ ವಿವಾದ ಈ ಎಲ್ಲಾ ಅಂಶಗಳು ಚಿತ್ರದಲ್ಲಿ ಅಡಗಿದೆ ಎಂದು ಯೋಗರಾಜ್ ಭಟ್ ಹೇಳುತ್ತಾರೆ.

ಇನ್ನು ಕಾರ್ ರೇಸ್ ಚಿತ್ರದ ವಿಶೇಷತೆಯಾಗಿದ್ದು, ಪಂಚತಂತ್ರದ ಆಮೆ ಮತ್ತು ಮೊಲದ ಓಟವನ್ನು ನೆನಪಿಸುತ್ತದೆ. ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದಿರುವ ಕಾರ್ ರೇಸ್ ಚಿತ್ರದಲ್ಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇನ್ನು ಚಿತ್ರದಲ್ಲಿ ವಿಹಾನ್, ಸೋನಲ್ ಮೊಂಥೆರೋ, ಅಕ್ಷರಾ ಗೌಡ, ರಂಗಾಯಣ ರಘು, ದೀಪಕ್ ಸೇರಿದಂತೆ ಇತರರು ನಟಿಸಿದ್ದಾರೆ.

ಯೋಧರಿಗೆ 5 ಕೋಟಿ ನೆರವು ನೀಡಿದ ಅಕ್ಷಯ್ ಕುಮಾರ್

#panchatantra, #balkaninews #filmnews, #kannadasuddigalu, #yogarajbhat, #sonalmonthero,

Tags