ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಹಳೆ ಬೇರು ಹೊಸ ಚಿಗುರು, ಮನ ಸೆಳೆಯುವ ಭಟ್ಟರ ‘ಪಂಚತಂತ್ರ’

ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಬಿಡಿ ಎನ್ನುವುದು ವಯಸ್ಸಾದವರ ಕಾಮನ್ ಡೈಲಾಗ್

ಬೆಂಗಳೂರು.ಮಾ.30: ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ ಬಹುನಿರೀಕ್ಷಿತ ‘ಪಂಚತಂತ್ರ’ ಸಿನಿಮಾ ಎಲ್ಲರ ಮನ ಸೆಳೆಯುತ್ತಿದೆ. ಹಳೆ ಬೇರು ಹೊಸ ಚಿಗುರು ಎಂಬ ಡಿ.ವಿ.ಜಿಯವರ ನುಡಿಯಂತೆ ಈ ಚಿತ್ರವು ಓಲ್ಡ್ ಜನರೇಷನ್ ಮತ್ತು ಯಂಗ್ ಜನರೇಷನ್ ನಡುವೆ ನಡೆಯುವ ಕಥಾನಕವನ್ನು ಒಳಗೊಂಡಿದೆ.

ಒಬ್ಬ ಡಾನ್ ಗೆ ಸೇರಿದ ಒಂದು ಜಾಗ ಇರುತ್ತದೆ. ಆ ಜಾಗದಲ್ಲಿ ಒಂದು ಕಡೆ ವಯಸ್ಸಾದವರ ಗುಂಪು ಮತ್ತೊಂದು ಕಡೆ ಹುಡುಗರ ಗ್ಯಾಂಗ್ ವಾಸ ಮಾಡುತ್ತಿರುತ್ತಾರೆ. ಆ ಜಾಗ ಈ ಇಬ್ಬರಲ್ಲಿ ಯಾರಿಗೆ ಸೇರಬೇಕು ಎನ್ನುವುದು ಕೋರ್ಟ್ ನಲ್ಲಿ ತೀರ್ಮಾನ ಆಗುವುದೇ ಇಲ್ಲ. ಕಾರ್ ರೇಸ್ ಮೂಲಕ ತಮ್ಮ ಜಾಗದ ಸಮಸ್ಯೆ ಬಗೆ ಹರಿಕೊಳ್ಳುವ ನಿರ್ಧಾರ ಆಗುತ್ತದೆ.

ಇಂಟರ್ ವಲ್ ಬಳಿಕ ಚಿತ್ರಕ್ಕೊಂದು ವೇಗ ಬರುತ್ತದೆ. ಆಗ ಯಂಗ್ ಮತ್ತು ಓಲ್ಡ್ ಜನರೇಷನ್ ನಡುವೆ ಕಾರ್ ರೇಸ್ ಶುರುವಾಗುತ್ತದೆ. ಹೀಗಾಗಿ ಈ ಸಿನಿಮಾ ಆಮೆ ಮತ್ತು ಮೊದಲ ರೇಸ್ ಕಥೆಯನ್ನು ನೆನಪಿಸುತ್ತಾ, ಜೀವನದ ಅನುಭವವನ್ನು ತಣ್ಣಗೆ ತೆರೆದಿಡುತ್ತದೆ. ಇಲ್ಲಿ ಎಂದಿನಂತೆ ಭಟ್ಟರು ಮನರಂಜನೆಗೆ ಮೋಸ ಮಾಡಿಲ್ಲ. ಕಾಮಿಡಿ ಹಾಗೂ ಡೈಲಾಗ್ ಗಳು ಸಿನಿಮಾದ ದೊಡ್ಡ ಪ್ಲಾಸ್ ಪಾಯಿಂಟ್ ಆಗಿವೆ.

 

ಇನ್ನು ಚಿತ್ರದಲ್ಲಿ ಬರುವ ಹಾಡುಗಳು ಮಜ ನೀಡುತ್ತವೆ. ಅದಕ್ಕೆ ತಕ್ಕಂತೆ ಛಾಯಾಗ್ರಹಣ, ಸಂಕಲನದ ಕೆಲಸಗಳು ಚಿತ್ರವನ್ನು ನೋಡುವಂತೆ ಮಾಡುತ್ತವೆ. ಈಗಿನ ಜನರೇಷನ್ ನ ಮಕ್ಕಳು ಹೇಗಿರುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ಭಟ್ಟರು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಸಂಭಾಷಣೆಯೂ ಇಷ್ಟವಾಗುತ್ತದೆ.

ಚಿತ್ರದಲ್ಲಿ ನಟಿಸಿರುವ ಕಲಾವಿದರ ಪೈಕಿ ರಂಗಾಯಣ ರಘು ನಟನೆ ಅತಿಯಾಗಿ ಕಾಡುತ್ತದೆ. ಇನ್ನು ವಿಹಾನ್ ಮತ್ತು ಸೋನಲ್ ಜೋಡಿ ಮುದ್ದು ಮುದ್ದಾಗಿದೆ. ಉಳಿದಂತೆ ಅಕ್ಷರಾ ಗೌಡ, ದೀಪಕ್ ಶೆಟ್ಟಿ, ಅಕ್ಷತಾ ಶೆಟ್ಟಿ, ಕರಿಸುಬ್ಬು, ಮಾಸ್ತಿ,
ಸೇರಿದಂತೆ ಉಳಿದವರೆಲ್ಲರ ಅಭಿನಯ ಮನ ಮುಟ್ಟುವಂತಿದೆ.

ವೀಕೆಂಡ್ ನಲ್ಲಿ ಮೋಜಿ, ಮಸ್ತಿ ಬೇಕೆಂದರೆ ಈ ‘ಪಂಚತಂತ್ರ’ದ ಆಟವನ್ನು ನೋಡಿ ಎಂಜಾಯ್ ಮಾಡಬಹುದು. ಕೊಟ್ಟ ಕಾಸಿಗೆ ಈ ಸಿನಿಮಾ ಡಬಲ್ ಮನರಂಜನೆ ನೀಡುತ್ತದೆ. ಹಾಗೆಯೇ ಬದುಕಿನ ಕುರಿತಂತೆ ಸಂದೇಶವೂ ನೀಡುತ್ತದೆ.

ತಾಮ್ರದ ಪಾತ್ರೆಯಲ್ಲಿದೆ ಆರೋಗ್ಯದ ಗುಟ್ಟು

#panchatantra, #movie, #review, #balkaninews #yogarajbhat, #kannadasuddigalu, #vihan, #sonal

Tags