ಸುದ್ದಿಗಳು

ಪ್ಯಾರ್ ಗೆ ಬೆಡಗಿಯ ‘ಬಟರ್ ಫ್ಲೈ’ ಸಿನಿಮಾ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ

ಬೆಂಗಳೂರು, ಫೆ.16:

ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾವೇ ‘ಬಟರ್ ಫ್ಲೈ’. ಈಗಾಗಲೇ ಈ ಸಿನಿಮಾ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದ್ದು, ಬಿಡುಗಡೆಗೆ ರೆಡಿಯಾಗುತ್ತಿದೆ. ಈಗಾಗಲೇ ಬೇರೆ ಬೇರೆ ಪ್ರದೇಶಗಳು ಹಾಗೂ ಹೊರ ದೇಶಗಳಲ್ಲಿಯೂ ಈ ಸಿನಿಮಾ ಚಿತ್ರೀಕರಣ ಮಾಡಲಾಗಿದ್ದು, ಇದೀಗ ಈ ಸಿನಿಮಾದ ಹಾಡಿನ ಮೇಕಿಂಗ್ ವಿಡಿಯೋವೊಂದು ಬಿಡುಗಡೆಯಾಗಿದೆ‌.

ಪಾರುಲ್ ಅಭಿನಯದ ಸಿನಿಮಾ

ಹೌದು, ಕಂಗನಾ ರಣಾವತ್ ಅಭಿನಯದ ‘ಕ್ವೀನ್’ ಹಿಂದಿ ಚಿತ್ರದ ರಿಮೇಕ್​ ಸಿನಿಮಾವೇ ಈ ‘ಬಟರ್ ಫ್ಲೈ’. ಈಗಾಗಲೇ ಈ ಸಿನಿಮಾದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೂ ಇಷ್ಟವಾಗಿತ್ತು. ಇನ್ನು ಮೆಲ್ಲ ಕೈ ಹಿಡಿದು ನಡೆಸು ಹಾಡು ಯುಟ್ಯೂಬ್ ನಲ್ಲಿ ಸದ್ದು ಮಾಡಿತ್ತು. ಕನ್ನಡ ಮತ್ತು ತಮಿಳಿನಲ್ಲಿ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್.  ಇದೀಗ ಈ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು ಮತ್ತೆ ಸುದ್ದಿಯಾಗಿದೆ.

ಹೇಗಿದೆ ಗೊತ್ತೆ ಮೇಕಿಂಗ್ ವಿಡಿಯೋ

ಹೌದು, ನಟಿ ಪಾರುಲ್ ಅಭಿನಯದ ಈ ಸಿನಿಮಾ ಸದ್ಯ ಬಿಡುಗಡೆಗೆ ಅಣಿಯಾಗಿದೆ. ಈ ಸಿನಿಮಾದ ಹಾಡುಗಳು ಕೂಡ ಸೊಗಸಾಗಿ ಮೂಡಿ ಬಂದಿದೆ. ಇನ್ನು ಈ ಸಿನಿಮಾದ ಮೆಲ್ಲ ಕೈ ಹಿಡಿದು ನಡೆಸು ಹಾಡು ಕೂಡ ಅದ್ಬುತವಾಗಿ ಮೂಡಿ ಬಂದಿತ್ತು. ಇದೀಗ ಈ ಹಾಡಿನ ಮೇಕಿಂಗ್ ಕೂಡ ಬಿಡುಗಡೆಯಾಗಿದೆ. ಪಾರುಲ್  ನಟನೆ ಹಾಗೂ ಕೆಲವೊಂದು ಶೂಟಿಂಗ್ ದೃಶ್ಯಾವಳಿಗಳನ್ನು ಇದರಲ್ಲಿಲ ತೋರಿಸಲಾಗಿದೆ. ಇನ್ನು ಈ ಸಿನಿಮಾ ಚೆನ್ನಾಗಿದ್ದು ವಿಭಿನ್ನ ಕಥೆಯನ್ನು ಹೊಂದಿದೆ ಅನ್ನೋದು ಚಿತ್ರತಂಡದ ಮಾತು. ಇದೀಗ ಈ ಸಿನಿಮಾ ಬಹು ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ.

ನೋಡ್ರಪ್ಪೊ ನೋಡಿ ಕಿರಿಕ್ ಬೆಡಗಿಯ ಮೊದಲ ಮ್ಯಾಗಜಿನ್ ಫೋಟೋಶೂಟ್

#ramesharavind #mellakaihididukannadasong #kannadamovies #parulyadav #ramesharavindandparulyadav #balkaninews #butterflykannadamovie #makingvideos

Tags

Related Articles