ಸುದ್ದಿಗಳು

ಇಂದು ನಡೆಯಿತು ಪಾರುಲ್ ಯಾದವ್ ಕಲ್ಯಾಣ

‘ಬಟರ್ ಪ್ಲೈ’ ಚಿತ್ರದ ಮೊದಲ ಹಾಡು ರಿಲೀಸ್

ಬೆಂಗಳೂರು.ಜ.16

: ಇಂದು ನಟಿ ಪಾರುಲ್ ಯಾದವ್ ಮದುವೆ ನಡೆದಿದೆ. ಹಾಗಂತಾ ನಿಜ ಜೀವನದಲ್ಲಲ್ಲಾ, ಸಿನಿಮಾದಲ್ಲಿ.. ಹೌದು, ಇಂದು ‘ಬಟರ್ ಪ್ಲೈ’ ಚಿತ್ರದ ಮೊದಲ ಹಾಡು ಮದುವೆ ಸಾಂಗ್ ಈಗಷ್ಟೇ ರಿಲೀಸ್ ಆಗಿದೆ.

ನಾಳೆ ನಮ್ಮ ಮನೆಯಲ್ಲೊಂದು..

‘ಬಟರ್ ಫ್ಲೈ’ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಪಾರುಲ್ ಯಾದವ್ ನಾಯಕಿಯಾಗಿದ್ದು, ಇಂದು ಈ ಚಿತ್ರದ ಒಂದು ಹಾಡು ಬಿಡುಗಡೆಯಾಗಿದೆ. ಚಿತ್ರದಲ್ಲಿ ಪಾರೂಲ್ ಮದುವೆ ಆಗಲಿದ್ದು, ಆ ಸಂದರ್ಭಕ್ಕೆ ಬರುವ ಹಾಡು ಇದಾಗಿದೆ.

ಚಿತ್ರದಲ್ಲಿ ಪಾರೂಲ್ ಪಾತ್ರದ ಹೆಸರು ಪಾರ್ವತಿಯಾಗಿದೆ. ಗೋಕರ್ಣದ ಹುಡುಗಿ ಪಾರ್ವತಿಯನ್ನು ವಿಜಯ್ ಮದುವೆ ಆಗಲಿದ್ದಾರೆ. ಹೀಗಾಗಿ ‘ನಾಳೆ ನಮ್ಮ ಮನೆಯಲ್ಲೊಂದು.’ ಎಂಬ ಸಾಲಿನ ಈ ಹಾಡನ್ನು ವಿಕಟಕವಿ ಯೋಗರಾಜ್ ಭಟ್ ಬರೆದಿದ್ದಾರೆ. ಹಾಡಿಗೆ ಅಮಿತ್ ತ್ರಿವೇದಿ ಸಂಗೀತ ನೀಡಿದ್ದು, ಜೆಸ್ಸಿ ಗಿಫ್ಟ್ ಹಾಗೂ ಅನನ್ಯಾ ಭಟ್ ಧ್ವನಿ ನೀಡಿದ್ದಾರೆ.

ಚಿತ್ರದ ಬಗ್ಗೆ

‘ಬಟರ್ ಪ್ಲೈ’ ಚಿತ್ರವು ಹಿಂದಿಯ ಕ್ವೀನ್ ಚಿತ್ರದ ರಿಮೇಕ್ ಆಗಿದ್ದು, ಆ ಸಿನಿಮಾಗೆ ಮ್ಯೂಸಿಕ್ ಮಾಡಿದ್ದ ಅಮಿತ್ ತ್ರಿವೇದಿ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ವಿಶೇಷವೆಂದರೆ ಈ ಸಿನಿಮಾ ಕನ್ನಡ ಸೇರಿದಂತೆ ಒಟ್ಟು ನಾಲ್ಕು ಭಾಷೆಯಲ್ಲಿ ನಿರ್ಮಾಣವಾಗುತ್ತಿದ್ದು, ಇಂದು ಈ ಎಲ್ಲಾ ಭಾಷೆಗಳ ಹಾಡುಗಳು ರಿಲೀಸ್ ಆಗಿವೆ.

ಕನ್ನಡದಲ್ಲಿ ಪಾರುಲ್, ತೆಲುಗಿನಲ್ಲಿ ತಮನ್ನಾ ಭಾಟಿಯಾ, ತಮಿಳು ಭಾಷೆಯಲ್ಲಿ ಕಾಜಲ್ ಅಗರವಾಲ್, ಹಾಗೂ ಮಲಯಾಳಂ ಭಾಷೆಯಲ್ಲಿ ಮಂಜಿಮಾ ಕಾಣಿಸಿಕೊಂಡಿದ್ದು, ಕನ್ನಡ ಹಾಗೂ ತಮಿಳು ಭಾಷೆಯ ಸಿನಿಮಾಗೆ ನಟ-ನಿರ್ದೇಶಕ ರಮೇಶ್ ಅರವಿಂದ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

#parulyadav, #balkaninews #filmnews, #kannadasuddigalu, #ramesharavind

Tags