ಸುದ್ದಿಗಳು

ಇಂದು ದೊಡ್ಮನೆಯ ನಂದಾದೀಪ ಪಾರ್ವತಮ್ಮ ರಾಜ್ ಕುಮಾರ್ ಹುಟ್ಟುಹಬ್ಬ …!

ಡಾ.ರಾಜ್ ಕುಮಾರ್ ಧರ್ಮಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಜನ್ಮದಿನ

ಬೆಂಗಳೂರು, ಡಿ.6: ಡಿಸೆಂಬರ್ 6, 1939ರಲ್ಲಿ ಮೈಸೂರಿನ ಸಾಲಿಗ್ರಾಮದಲ್ಲಿ ಜನಿಸಿದ ಪಾರ್ವತಮ್ಮ ಅವರು ಕನ್ನಡ ಚಲನಚಿತ್ರರಂಗದ ವರನಟ ಡಾ. ರಾಜ್ ಕುಮಾರ್ ಅವರ ಪತ್ನಿಯಾಗಿ, ಚಿತ್ರರಂಗದ ಶಕ್ತಿಯಾಗಿ ಬೆಳೆದವರು ಪಾರ್ವತಮ್ಮರಾಜ್ ಕುಮಾರ್. ಇಂದು ಅವರ 79 ನೇ ಹುಟ್ಟುಹಬ್ಬ.

ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡುರುವ ದೊಡ್ಮನೆ ನಂದಾದೀಪ …!

ಹೌದು, ಪಾರ್ವತಮ್ಮ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವಾರು ನಟ – ನಟಿಯರನ್ನು ಪರಿಚಯಿಸಿದ್ದಾರೆ. ಜೊತೆಗೆ ಪಾರ್ವತಮ್ಮ ಅವರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್, ಇಬ್ಬರು ಪುತ್ರಿಯರಾದ ಪೂರ್ಣಿಮಾ, ಲಕ್ಷ್ಮಿ, ಸೋದರರಾದ ಎಸ್ಎ ಚಿನ್ನೇಗೌಡ, ಗೋವಿಂದರಾಜ್ ಹಾಗೂ ಶ್ರೀನಿವಾಸ್ ಸೇರಿದಂತೆ ಮೊಮ್ಮಕ್ಕಳು, ಅಪಾರ ಅಭಿಮಾನಿಗಳ ಬಳಗವಿದೆ.ಪೂರ್ಣಿಮಾ ಎಂಟರ್ ಪ್ರೈಸರ್ …!

ಪೂರ್ಣಿಮಾ ಎಂಟರ್ ಪ್ರೈಸರ್ ಮೂಲಕ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಲ್ಲದೆ, ಸುಧಾರಾಣಿ, ಮಾಲಾಶ್ರೀ, ಪ್ರೇಮಾ, ರಕ್ಷಿತಾ, ರಮ್ಯಾ ಅವರನ್ನು ಚಿತ್ರರಂಗಕ್ಕೆ ಕರೆ ತಂದವರು ಪಾರ್ವತಮ್ಮನವರು. ಸುಮಾರು 80ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಿಸಿದ್ದರು. ಡಾ. ರಾಜ್ ಅಭಿನಯದ ‘ಹಾಲು ಜೇನು’, ‘ಕವಿರತ್ನ ಕಾಳಿದಾಸ’, ‘ಜೀವನ ಚೈತ್ರ’ , ಶಿವರಾಜ್ ಅಭಿನಯದ ‘ಆನಂದ್’, ‘ಓಂ’, ‘ಜನುಮದ ಜೋಡಿ’, ರಾಘವೇಂದ್ರ ರಾಜ್ ಕುಮಾರ್ ಅಭಿನಯದ ‘ನಂಜುಂಡಿ ಕಲ್ಯಾಣ’, ಪುನೀತ್ ಅಭಿನಯದ ‘ಅಪ್ಪು’, ‘ಅಭಿ’, ‘ಹುಡುಗರು’ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿದವರು.ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ …!

ಕೇವಲ ನಿರ್ಮಾಪಕಿಯಾಗಿ ಮಾತ್ರವಲ್ಲದೇ ಹಂಚಿಕೆದಾರರಾಗಿಯೂ ಪಾರ್ವತಮ್ಮ ಅವರು ಕೆಲಸ ಮಾಡಿದ್ದಾರೆ. ಚಿತ್ರರಂಗಕ್ಕೆ ಇವರು ನೀಡಿರುವ ಸೇವೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ. ಅಂತೆಯೇ ಜೀವಮಾನ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಕೂಡ ಪಾರ್ವತಮ್ಮ ರಾಜ್ ಕುಮಾರ್ ಪಡೆದುಕೊಂಡಿದ್ದಾರೆ.

 

 

Tags