ಸುದ್ದಿಗಳು

ಹೆಣ್ಣಿನ ಪಾವಿತ್ರ್ಯದ ಬಗ್ಗೆ ಮಾತನಾಡುವವರಿಗೆ ಖಡಕ್ ಉತ್ತರ ನೀಡಿದ ಪಾರ್ವತಿ

ಶಬರಿಮಲೆಗೆ ಮಹಿಳೆಯರ ನಿರ್ಬಂಧದ ಕುರಿತು ಮಾತನಾಡಿದ ಪಾರ್ವತಿ

ಬೆಂಗಳೂರು, ನ.06: ತಮ್ಮ ವಿರುದ್ಧ ನಡೆದ ಲೈಂಗಿಕ ದೌರ್ಜನ್ಯದ ಕುರಿತಂತೆ ಮಾತನಾಡಿದ್ದ ನಟಿ ಪಾರ್ವತಿ, ಹೆಣ್ಣಿನ ಪಾವಿತ್ರ್ಯದ ಬಗ್ಗೆ ಮಾತನಾಡುವವರಿಗೆ ಖಡಕ್ ಉತ್ತರ ನೀಡಿದ್ದಾರೆ. ತಮ್ಮ ವಿರುದ್ಧ ಆಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುವ ಮಹಿಳೆಯರ ಧನಿ ಅಡಗಿಸುವ ಯತ್ನಗಳು ನಡೆಯುತ್ತಲೇ ಇದೆ. ಕೆಲವರು ಇದೊಂದು ಪ್ರಚಾರದ ಗಿಮಿಕ್ ಎಂದರೆ, ಮತ್ತೆ ಕೆಲವರು ತಾವು ಪತಿವೃತೆಯರು ಎಂದು ನಂಬಿಸಲು ನಟಿಯರು ಮಾಡುತ್ತಿರುವ ಗಿಮಿಕ್ ಎಂಬ ಕೆಳಮಟ್ಟದ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ಕೆಲವು ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದ್ದು, ಇತ್ತೀಚೆಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಶಬರಿಮಲೆ ದೇಗುಲಕ್ಕೆಎಲ್ಲಾ ವಯಸ್ಸಿನ ಮಹಿಳೆಯರು ಕೂಡ ಪ್ರವೇಶಿಸಬಹುದು ಎಂದು ತೀರ್ಪು ನೀಡಿತ್ತು. ಈ ಬಗ್ಗೆ ಪರ ಹಾಗೂ ವಿರೋಧ ವ್ಯಕ್ತವಾಗುತ್ತಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ಪಾರ್ವತಿ, ಮಹಿಳೆಯ ಪಾವಿತ್ರ್ಯತೆ ಆಕೆಯ ಯೋನಿಯಲ್ಲಿಲ್ಲ ಎಂದಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿಗೆ ಪಾರ್ವತಿ ಬೆಂಬಲ

ಮಹಿಳೆ ಮುಟ್ಟಾಗುತ್ತಾಳೆ ಎಂಬ ಕಾರಣಕ್ಕಾಗಿ ಆಕೆಯನ್ನು ದೇವಾಲಯದ ಗರ್ಭಗುಡಿಯಿಂದ ಹೊರಗಿಡುವ ಪದ್ದತಿಗೆ ವಿರೋಧ ವ್ಯಕ್ತಪಡಿಸಿರುವ ನಟಿ ಪಾರ್ವತಿ, ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಬೆಂಬಲ ಸೂಚಿಸಿದ್ದು, ಮಹಿಳೆಯ ಪಾವಿತ್ರತ್ಯತೆ ಆಕೆಯ ಯೋನಿಯಲ್ಲಿಲ್ಲ. ಮಹಿಳೆ ಮುಟ್ಟಾಗುವುದರಿಂದಲೇ ಸೃಷ್ಟಿ ರಹಸ್ಯ ನಡೆದಿದೆ. ಮಕ್ಕಳು ಜನಿಸುತ್ತಾರೆ. ಆದರೆ ಮುಟ್ಟಾಗುವಿಕೆಯನ್ನು ಅಪವಿತ್ರ ಎಂದು ಯಾಕೆ ಪರಿಗಣಿಸಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಹಿಂದಿನಿಂದ ಬಂದ ಈ ನಂಬಿಕೆಯನ್ನು ಈಗಲೂ ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ ಪಾರ್ವತಿ.

Tags

Related Articles