ಸುದ್ದಿಗಳು

ಪವನ್ ಕಲ್ಯಾಣ್ ಅಭಿಮಾನಿ ಕೊಲೆ ಪ್ರಕರಣ ಆರೋಪಿಗೆ ಜೀವಾವಧಿ ಶಿಕ್ಷೆ

ಹೈದ್ರಾಬಾದ್, ಜ.05: ನೆಚ್ಚಿನ ನಟ ಅಂದ ಮೇಲೆ ಯಾರೇ ಆಗಲಿ ನೆಚ್ಚಿನ ನಟನ ಬಗ್ಗೆ ಅಭಿಮಾನದಿಂದಲೇ ಮಾತನಾಡುತ್ತಾರೆ. ತಮ್ಮ ನೆಚ್ಚಿನ ನಟನನ್ನು ಹಾಡಿ ಹೊಗಳುವ ಪದ್ದತಿ ಇಂದು ನಿನ್ನೆಯದಲ್ಲ. ಆದರೆ ಕೆಲವೊಮ್ಮೆ ಇಂಥಹ ಪರಿಸ್ಥಿತಿಗಳೇ ಕೊರಳಿಗೆ ಸುತ್ತಿ ಕೊಳ್ಳುವುದು. ಇದೀಗ ಪವನ್ ಕಲ್ಯಾಣ್ ಅವರ ಅಭಿಮಾನಿಗೂ ಇದೇ ಪರಿಸ್ಥಿತಿ ಬಂದು, ಕೊನೆಗೆ ಕೊಲೆಯಾಗಿಯೇ ಹೋಗಿದ್ದಾರೆ.

ನಟನ ಬಗ್ಗೆ ಮಾತನಾಡಿದ್ದಕ್ಕೆ ಜಗಳ

ಹೌದು, ಕೋಲಾರದ ವಿನೋದ್  ಎಂಬಾತ  ಪವನ್ ಕಲ್ಯಾಣ್ ಅವರ ಕಟ್ಟಾ ಅಭಿಮಾನಿ. ಅಷ್ಟೆ ಅಲ್ಲ, ಅವರ ಅಭಿಮಾನಿಗಳ ಸಂಘದಲ್ಲಿ ಇದ್ದಾತ, ಸಕ್ರೀಯರಾಗಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿದಾತ. ಇದರಂತೆ 2016 ಆಗಷ್ಟ್ 21 ರ ಭಾನುವಾರ ವಿನೋದ್ ಕಾರ್ಯಕ್ರಮವೊಂದರಲ್ಲಿ ಕಣ್ಣು ದಾನ ಮಾಡುವುದಾಗಿ ಹೇಳಿದ್ದರು. ಇದೇ ಕಾರ್ಯಕ್ರಮಕ್ಕೆ ಜ್ಯೂನಿಯರ್ ಎನ್‍ಟಿಆರ್ ಅಭಿಮಾನಿಗಳು ಕೂಡ ಆಗಮಿಸಿದ್ದರಂತೆ. ಆದರೆ ಕಾರ್ಯಕ್ರಮದಲ್ಲಿ ವಿನೋದ್ ತಮ್ಮ ನಟನ ಬಗ್ಗೆ ಅಭಿಮಾನದಿಂದ ಮಾತನಾಡಿದ್ದ ವಿಚಾರವಾಗಿ ಎನ್‍ಟಿಆರ್ ಅಭಿಮಾನಿಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ವಿಕೋಪಕ್ಕೆ ತಿರುಗಿ ವಿನೋದ್‍ ಗೆ ಚಾಕು ಇರಿದು ವಿನೋದ್ ಕೊಲೆ ಮಾಡಲಾಗಿತ್ತು.

ಆರೋಪಿಗೆ ಜೀವಾವಧಿ ಶಿಕ್ಷೆ

ಕೋಲಾರ ತಾಲ್ಲೂಕು ನರಸಾಪುರ ಬಳಿ ಕೊಲೆ ನಡೆದಿತ್ತು, ಈ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ನಂತರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತೀರ್ಪು ಬಂದಿದೆ. ಕೋಲಾರ 2ನೇ ಜಿಲ್ಲಾ ಸತ್ರ ನ್ಯಾಯಾಲಯ ಪ್ರಕರಣದ ಎ 1 ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದೆ.

Tags