ಸುದ್ದಿಗಳು

ಮರದ ಕೆಳಗೆ ಊಟ ಮಾಡಿದ ಪವನ್ ಕಲ್ಯಾಣ್ ವಿಡಿಯೋ ವೈರಲ್

ಹೈದ್ರಾಬಾದ್, ಮಾ.25:

ಸದ್ಯ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಈಗಾಗಲೇ ಅಭ್ಯರ್ಥಿಗಳು ಕೂಡ ಪ್ರಚಾರ ಕಾರ್ಯವನ್ನು ಭರದಿಂದ ಮಾಡುತ್ತಿದ್ದಾರೆ. ಇನ್ನೂ ಚುನಾವಣೆ ಗೆಲ್ಲಬೇಕೆಂಬ ದೃಷ್ಟಿಯಿಂದ ಅನೇಕ ಮಂದಿ ಮತದಾರರ ಬಳಿ ಹೋಗಿ ಮತಯಾಚನೆ ಮಾಡಿದ್ದಾರೆ. ಇದೀಗ ನಟ ಪವನ್ ಕಲ್ಯಾಣ್ ಕೂಡ ಮತಯಾಚನೆಯಲ್ಲಿ ತೊಡಗಿದ್ದಾರೆ. ಈ ವೇಳೆ ಮರದ ಕೆಳಗೆ ಕೂತು ಊಟ ಮಾಡಿರುವ ವಿಡಿಯೋವೊಂದು ಸದ್ಯ ವೈರಲ್ ಆಗಿದೆ.

ಎರಡು ಕ್ಷೇತ್ರದಿಂದ ಸ್ಪರ್ಧೆ

ಹೌದು, ಸದ್ಯ ನಟ ಪವನ್ ಕಲ್ಯಾಣ್ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಭೀಮಾವರಂ ಹಾಗೂ ಗಾಜುವಾಕದಿಂದ ಅವರು ಚುನಾವಣಾ ಕಣಕ್ಕಿಳಿದಿದ್ದಾರೆ ಈ ನಟ. ಈಗಾಗಲೇ ನಾಮಪತ್ರ ಕೂಡ ಸಲ್ಲಿಕೆಯಾಗಿದೆ. ಆಂಧ್ರಪ್ರದೇಶದ ಒಟ್ಟಾರೇ 175 ಕ್ಷೇತ್ರಗಳ ಪೈಕಿಯಲ್ಲಿ 21 ಕ್ಷೇತ್ರಗಳಲ್ಲಿ ಬಿಎಸ್ಪಿ ಸ್ಪರ್ಧಿಸುತ್ತಿದ್ದರೆ, ಏಳು ಕ್ಷೇತ್ರಗಳಲ್ಲಿ ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಸ್ಪರ್ಧಿಸುತ್ತಿವೆ. ಉಳಿದ ಕ್ಷೇತ್ರಗಳಲ್ಲಿ ಪವನ್ ಕಲ್ಯಾಣ್ ಸ್ಥಾಪಿಸಿರುವ ಜನಸೇನಾ ಪಕ್ಷ ಸ್ಪರ್ಧಿಸುತ್ತಿದೆ.

ಪವರ್ ಸ್ಟಾರ್ ಸರಳತೆ

ಸದ್ಯ ಈ ನಟ ಚುನಾವಣಾ ಪ್ರಚಾರವನ್ನು ಭರದಿಂದ ಮಾಡ್ತಾ ಇದ್ದಾರೆ. ಈಗಾಗಲೇ ಮತಯಾಚನೆ ಮಾಡುತ್ತಿರುವ ಈ ನಟ ಇತ್ತೀಚೆಗೆ ದಣಿವಾದಾಗ ಮರದ ಕೆಳಗೆ ಕೂತ ಮಣ್ಣಿನ ತಟ್ಟೆಯಲ್ಲಿ ಊಟ ಮಾಡಿದ್ದಾರೆ. ಸದ್ಯ ಈ ವಿಡಿಯೋವೊಂದು ಸಕ್ಕತ್ ವೈರಲ್ ಆಗಿದೆ. ಕೃಷ್ಣಾ ಜಿಲ್ಲೆಯ ಮಚ್ಚಲಿಪಟ್ಟಣ ಬಳೀಯ ಮಂಗಿನ ಪೂಡಿ ಲೈಟ್ ಹೌಸ್ ವ್ಯಾಪ್ತಿಯಲ್ಲಿರುವ ಗಿಡದ ಬಳಿ ಊಟ ಮಾಡಿದ್ದಾರೆ. ಸದ್ಯ ಪವರ್ ಸ್ಟಾರ್ ಅವರ ಈ ಸರಳತೆ ನೋಡಿದ ನೆಟ್ಟಿಗರು ಖುಷಿ ಪಟ್ಟಿದ್ದಾರೆ.

ದಾಳಿಂಬೆಯಲ್ಲಿದೆ ಆರೋಗ್ಯದ ಗುಟ್ಟು

#pawankalyan #tollywood #telugumovies #pawankalyanmovies #pawankalyantwitter #janasenaparty #balkaninews

Tags