ಸುದ್ದಿಗಳು

ಕಾರು ಬದಲಿಸಿದಂತೆ ಪತ್ನಿಯರನ್ನು ಬದಲಿಸುತ್ತಾರೆ ಪವನ್ ಕಲ್ಯಾಣ್…!

ಹೈದ್ರಾಬಾದ್, ಜ.09: ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಬಗ್ಗೆ ನಂದಮೂರಿ ಬಾಲಕೃಷ್ಣ ಏನೇ ಕಮೆಂಟ್ ಮಾಡಿದರೂ, ಥಟ್ಟನೆ ರಿಯಾಕ್ಟ್ ಮಾಡೋದು ಮೆಘಾ ಬ್ರದರ್ ನಾಗಬಾಬು ಅವರ ಅಭ್ಯಾಸ. ಅದು ಎಲ್ಲೇ ಇರಲಿ ಏನೇ ಮಾಡುತಿರಲಿ ಅವರು ಪವನ್ ಹಾಗೂ ಚಿರಂಜೀವಿಗೆ ಯಾರಾದರೂ ಕಮೆಂಟ್ ಮಾಡಿದರೆ ಸಹಿಸೋದಿಲ್ಲ.

ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚಿಕ್ಕ ಶೀತಲ ಸಮರವೊಂದು ಆರಂಭವಾಗಿದೆ. ಇದಕ್ಕೆ ಕಾರಣವಾಗಿರುವುದು ವೈಎಸ್ ಜಗನ್, ಪವನ್ ಕಲ್ಯಾಣ್ ಅವರ ವೈಯಕ್ತಿಕ ಬದುಕಿನ ಬಗ್ಗೆ ಮಾಡಿರುವ ಕಮೆಂಟ್. ಈ ಕಮೆಂಟ್ ಗೆ ನಾಗಬಾಬು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆರಂಭವಾಗಿದೆ.ಜಗನ್ ಏನಂದ್ರು ಗೊತ್ತೆ…?

ಬಾಲಯ್ಯ ಅವರ ಮೇಲೆ ಪದೇ ಪದೇ  ಬಹಿರಂಗವಾಗಿಯೇ ಮಾತನಾಡುವ ನಾಗಬಾಬು, ಬಾಲಯ್ಯ ಅವರು ಚಿರಂಜೀವಿ ಅಥವಾ ಪವನ್ ಕಲ್ಯಾಣ್ ಗೆ ಮಾಡುವ ಕಮೆಂಟ್ ಗಳನ್ನು ಸಹಿಸುವುದಿಲ್ಲ. ಅದರಲ್ಲೂ ಎನ್ ಟಿಆರ್ ಬಯೋಪಿಕ್ ಆರಂಭವಾದಾಗಿನಿಂದ ನಾಗಬಾಬು ಬಾಲಯ್ಯ ಮೇಲೆ ಎರಗಾಡುತ್ತಲೇ ಇದ್ದಾರೆ. ಆದರೆ ಇದೀಗ ಪವನ್ ಕಲ್ಯಾಣ್ ಬಗ್ಗೆ ಮಾತನಾಡಿರುವುದು ವೈಎಸ್ ಜಗನ್ ಆಗಿರುವುದರಿಂದ, ಬಾಲಯ್ಯ ಕಮೆಂಟ್ ಯಾವ ರೀತಿ ಇರುತ್ತೆ. ತಮ್ಮ ಸಹೋದರರನ್ನು ಯಾವ ರೀತಿ ನಾಗಬಾಬು ಸಮರ್ಥಿಸಿಕೊಳ್ಳುತ್ತಾರೆ ಎಂಬುದು ಸದ್ಯದ ಕುತೂಹಲ.

ಇತ್ತೀಚೆಗೆ ವೈ ಎಸ್ ಜಗನ್, ಪವನ್ ಕಲ್ಯಾಣ್ ಅವರ ವೈಯಕ್ತಿಕ ಬದುಕಿನ ಕುರಿತಂತೆ ಕೀಳಾಗಿ ಮಾತನಾಡುತ್ತಾ, ಪವನ್ ತಮ್ಮ ಪತ್ನಿಯರನ್ನು ಕಾರು ಬದಲಿಸಿದಂತೆ ಬದಲಾಯಿಸುತ್ತಾರೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಲಯ್ಯ ಅಭಿಮಾನಿಗಳು, ಇದೀಗ ಮೆಘಾ ಬ್ರದರ್ ಇದಕ್ಕೆ ಪ್ರತಿಕ್ರಿಯೆ ಕೊಟ್ಟ ತಮ್ಮ ಸಹೋದರರನ್ನು ಕಾಪಾಡಿಕೊಳ್ಳಲಿ ಎಂದು ಟೀಕೆ ಮಾಡಿದ್ದು ಇದೆ.

Tags