ಸುದ್ದಿಗಳು

ವೈರಲ್ ಆಗ್ತಿದೆ ಪವನ್ ಕಲ್ಯಾಣ್ ಅವರ ಮಗನ ಫೋಟೋ!

ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಮತ್ತು ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರ ಪುತ್ರ ಅಕಿರಾ ನಂದನ್ ಈಗ ಗುರುತೇ ಸಿಗದಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಇತ್ತೀಚೆಗೆ ಅಕಿರಾ ನಂದನ್ ಮತ್ತು ಅವರ ತಾಯಿ ರೇಣು ದೇಸಾಯಿ ನಟ ಆದಿವಿ ಶೇಶ್ ಅವರನ್ನು ಅನೌಪಚಾರಿಕವಾಗಿ ಭೇಟಿಯಾಗಿದ್ದರು.

ಇದೀಗ ಅಕಿರಾ ಮತ್ತು ಅವರ ತಾಯಿ ನಟ ಆದಿವಿ ಶೇಶ್ ಜೊತೆ ತೆಗೆಸಿಕೊಂಡ ಫೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಆದಿವಿ ಶೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ಹ್ಯಾಂಡ್ ಸಮ್ ಜೊತೆ ಒಂದು ದಿನ ಕಳೆದೆ ಎಂದು ಪ್ರಾರಂಭಿಸಿ ಅಕಿರಾ ‘ಎವರು’ ಚಿತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಪವನ್ ಅವರ ಮಗಳ ಆಧ್ಯಾಗೆ ಕ್ಯಾಮೆರಾ ಕಂಡರೆ ನಾಚಿಕೆ ಎಂದು ಆದಿವಿ ಶೇಶ್ ಹೇಳಿದ್ದಾರೆ.

ಅಕಿರಾ ಸಿನಿಮಾದಲ್ಲಿ ನಟಿಸಬೇಕೆಂಬುದು ಪವನ್ ಕಲ್ಯಾಣ್ ಅಭಿಮಾನಿಗಳ ಆಸೆ. ಆದರೆ ಅಕಿರಾ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಕಾಲವಷ್ಟೇ ಎಲ್ಲವನ್ನೂ ಹೇಳಬೇಕಿದೆ.

ಮೆಗಾ ಪ್ರಾಜೆಕ್ಟ್ ಮಿಸ್ ಮಾಡಿಕೊಂಡ್ರು ಆಲಿಯಾ ಭಟ್!

#balkaninews #pawankalyan #photoviral #akira

Tags