ಸುದ್ದಿಗಳು

ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಎಂದ ಪವರ್ ಸ್ಟಾರ್!!

ನನ್ನ ಉಳಿದ ಜೀವನ ಜನರ ಸೇವೆಗೆ ಮುಡಿಪು

ಹೈದರಾಬಾದ್,ನ.21: ಟಾಲಿವುಡ್ ನ ಪ್ರಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಂದರೆ ಸಾಕು, ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕ್ರೇಝ್.. ಪವನ್ ಕಲ್ಯಾಣ್ ಸಿನಿಮಾಗಳೇ ಹಾಗೆ, ಸಿಕ್ಕಾಪಟ್ಟೆ ಯಶಸ್ಸು ಗಳಿಸುತ್ತವೆ.. ಇದೀಗ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ..ಹೌದು, ಪವನ್  ಕಲ್ಯಾಣ್ ತಮ್ಮ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದಾರೆ.

ಊಹಾಪೋಹಗಳಿಗೆ ಫುಲ್ ಸ್ಟಾಪ್

ಪವನ್ ಕಲ್ಯಾಣ್ ಅವರು ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಿದಾಡಿದ್ದು, ಇದೀಗ ಮುಂದಿನ ಚಿತ್ರಕ್ಕೆ ಸಹಿ ಮಾಡಿಲ್ಲ ಅಂತ ಹೇಳುವ ಮೂಲಕ ಊಹಾಪೋಹಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.

ನನಗೆ ಸಿನಿಮಾದಲ್ಲಿ ನಟಿಸಲು ಸಮಯವಿಲ್ಲ..

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಒಂದು ಪತ್ರವನ್ನು ಪೋಸ್ಟ್ ಮಾಡಿರುವ ನಟ, ನಾನು ಶೀಘ್ರದಲ್ಲೇ ಚಿತ್ರಕ್ಕೆ ಮಾಡಿರುವುದಾಗಿ ಸುದ್ದಿ ಹರಿದಾಡುತ್ತಿದೆ. ಆದರೆ ಇದು ನಿಜವಲ್ಲ. ಯಾಕೆಂದರೆ ನನಗೆ ಸಿನಿಮಾದಲ್ಲಿ ನಟಿಸಲು ಸಮಯವಿಲ್ಲ. ಬದಲಾಗಿಸಂಪೂರ್ಣವಾಗಿ ರಾಜಕೀಯದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತಿದ್ದೇನೆ. ನನ್ನ ಉಳಿದ ಜೀವನ ಜನರ ಸೇವೆಗೆ ಮುಡಿಪು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

Image result for pawan kalyan

ಮುಂದಿನ ವರ್ಷ ಲೋಕಸಭಾ ಚುನಾವಣೆ

2014ರಲ್ಲಿ ಪವನ್​ ಕಲ್ಯಾಣ್​​ ಜನಸೇನಾ ಪಕ್ಷವನ್ನು ಸ್ಥಾಪಿಸಿದ್ದಾರೆ. ಇನ್ನು ಡಿಸೆಂಬರ್​ 7ರಂದು ನಡೆಯಲಿರುವ ತೆಲಂಗಾಣ ಚುನಾವಣೆಗೆ ಜನಸೇನಾ ಪಕ್ಷ ಸ್ಪರ್ಧಿಸುವುದಿಲ್ಲ, ಮುಂದಿನ ವರ್ಷ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ಪವನ್ ಕಲ್ಯಾಣ್ ಸ್ಪಷ್ಟಪಡಿಸಿದ್ದಾರೆ.

Tags

Related Articles