ಸುದ್ದಿಗಳು

ನಟ ಪವನ್ ಸಿಂಗ್ ಮೇಲೆ ಕಲ್ಲು ತೂರಾಟ..!

ಅಪರಿಚಿತ ವ್ಯಕ್ತಿಗಳು ನನ್ನ ಕಾರಿನ ಮೇಲೆ ಕಲ್ಲು ತೂರಾಟ

ಮುಂಬೈ,ನ.12: ಬೋಜ್‌ಪುರಿ ಖ್ಯಾತ ಸಂಗೀತಗಾರ ಹಾಗೂ ನಟ ಪವನ್ ಸಿಂಗ್ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ. ರಾತ್ರಿ ವೇಳೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕೆಲ ಅಪರಿಚಿತರು ಕಲ್ಲು ಮತ್ತು ಇಟ್ಟಿಗೆ ತೂರಾಟ ನಡೆಸಿದ್ದಾರೆ. ಅದೃಷ್ಟವಶಾತ್ ಯಾರೂ ಗಾಯಗೊಂಡಿಲ್ಲ.

ನಾವು ಎಲ್ಲರಿಗೂ ಬೇಕು

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ಸಿಂಗ್, ಅಪರಿಚಿತ ವ್ಯಕ್ತಿಗಳು ನನ್ನ ಕಾರಿನ ಮೇಲೆ ಕಲ್ಲು ಹಾಗೂ ಇಟ್ಟಿಗೆಗಳಿಂದ ದಾಳಿ ಮಾಡಿದರು. ಭದ್ರತ ಸಿಬ್ಬಂದಿ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟೆಗೆ ಬಂತು. ನಾವು ಕಲಾವಿದರು. ನಮಗೆ ಭಾಷಾ ಗಡಿ ಇರುವುದಿಲ್ಲ. ನಮಗೆ ಎಲ್ಲರೂ ಬೇಕು, ನಾವು ಎಲ್ಲರಿಗೂ ಬೇಕು ಅಂತಾ ಹೇಳಿದ್ದಾರೆ.

Image result for pawansingh singer

`ಬಾಸ್ ಚಿತ್ರದಲ್ಲಿ ಬ್ಯುಸಿ

ಈ ದಾಳಿಯಿಂದ ನನಗೆ ಶಾಕ್ ಆಗಿದೆ. ನಾವು ಯಾರ ಶತ್ರುವೂ ಅಲ್ಲ. ಅಭಿಮಾನಿಗಳ ಪ್ರೀತಿ ಹಾಗೂ ಆರ್ಶೀವಾದ ನಮಗೆ ವರವಿದ್ದಂತೆ. ಕೆಲವರು ನಮ್ಮನ್ನು ದ್ವೇಷಿಸುತ್ತಾರೆ ಆದರೂ ನಾವು ಅವರುಗಳನ್ನು ರಂಜಿಸುತ್ತೇವೆ ಎಂದು ತಿಳಿಸಿದ್ದಾರೆ. ಇನ್ನು ಪವನ್ ಸಿಂಗ್ ಅವರು `ಬಾಸ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ದಾಳಿ ಕುರಿತು ಪವನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ.

 

Tags

Related Articles