ಸುದ್ದಿಗಳು

ಪವನ್ ಒಡೆಯರ್ ಮದುವೆಯಲ್ಲಿ ಪುನೀತ್ ಮನವಿ…

ಬಾಗಲಕೋಟೆ,ಆ.21: ಬಾಗಲಕೋಟೆಯ ನಗರದ’ ಗೌರಿಶಂಕರ ಕಲ್ಯಾಣ ಮಂಟಪ’ ದಲ್ಲಿ ‘ಗೂಗ್ಲಿ’ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಬಾಗಲಕೋಟೆ ಮೂಲದ ನಟಿ ಅಪೇಕ್ಷಾ ಪುರೋಹಿತಾಳನ್ನು ಕೈ ಹಿಡಿದಿದ್ದಾರೆ. ಎರಡೂ ಕುಟುಂಬಸ್ಥರ ಆಪ್ತ ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಿತು. ಮದುವೆಯಲ್ಲಿ ನಟ ಪುನೀತ್ ರಾಜ್‍ ಕುಮಾರ್ ಭಾಗವಹಿಸಿ ನವ ದಂಪತಿಗೆ ಶುಭಕೋರಿದ್ದಾರೆ.

ಪುನೀತ್ ಮನವಿ…

ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಪುನೀತ್ ರಾಜ್‍ಕುಮಾರ್, ಪವನ್ ಅವರ ಮದುವೆ ಮೂಲಕ ಬಾಗಲಕೋಟೆಗೆ ಬರುವ ಅವಕಾಶ ಲಭಿಸಿದೆ. ಇಬ್ಬರ ಜೀವನ ಸುಖಮಯವಾಗಿರಲಿ ಎಂದು ಹರಿಸಿದರು.

ಇದೇ ವೇಳೆ ಕೊಡಗಿನಲ್ಲಿ ಸಂಭವಿಸಿರುವ ಪ್ರವಾಹದ ಪರಿಸ್ಥಿತಿ ಬಗ್ಗೆ ಮಾತನಾಡಿ, ಕೊಡಗಿನ ಜನತೆಗೆ ನನ್ನ ಕೈಲಾದಷ್ಟು ನಾನು ಸಹಾಯ ಮಾಡಿದ್ದೇನೆ. ಎಲ್ಲರೂ ಅವರ ಶಕ್ತಿಯಾನುಸಾರ ಸಹಾಯ ಮಾಡಬೇಕು. ಸಂತ್ರಸ್ತ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಅಂದಹಾಗೇ ಕಳೆದ ಡಿಸೆಂಬರ್ ತಿಂಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ರವರ ನಿಶ್ಚಿತಾರ್ಥ ಸಮಾರಂಭ ಬಾಗಲಕೋಟೆಯ ಹರಿಪ್ರಿಯಾ ಹೋಟೆಲ್‍ನಲ್ಲಿ ನೆರವೇರಿತ್ತು. ಇಬ್ಬರ ಕುಟುಂಬದ ಆಪ್ತರ ಮಧ್ಯೆ ಸರಳವಾಗಿ ನಿಶ್ಚಿತಾರ್ಥ ನಡೆದಿದ್ದು, ಪರಸ್ಪರ ಇಬ್ಬರು ಉಂಗುರವನ್ನು ಬದಲಾಯಿಸಿಕೊಂಡಿದ್ದರು.

Tags