ಸುದ್ದಿಗಳು

ರಾಷ್ಟ್ರವ್ಯಾಪಿ ಭರ್ಜರಿ ಓಪನಿಂಗ್ ಪಡೆದ ‘ಪೆಟ್ಟಾ’ ಮೊದಲ ದಿನ ಗಳಿಸಿದೆಷ್ಟು..?

ಚೆನೈ, ಜ.12: ಕನ್ನಡದ ‘ಕೆಜಿಎಫ್’ ಚಿತ್ರ ಪಂಚಭಾಷೆಯಲ್ಲಿ ಬಿಡುಗಡೆಯಾಗಿದ್ದು ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ.. ತಮಿಳಿನಲ್ಲಂತೂ ಕೆಜಿಎಫ್ ಹವಾ ಅಷ್ಟಿಷ್ಟಲ್ಲ, ಈಗ ತಮಿಳಿನ ‘ಪೆಟ್ಟಾ’ ಕೂಡ ಅಂಥಹದ್ದೇ ಸದ್ದನ್ನು ಮೊದಲ ದಿನ ಮಾಡಿತ್ತು. ಅಭಿಮಾನಿಗಳಂತೂ ರಜಿನಿಯನ್ನು ವಿಭಿನ್ನವಾಗಿ ನೋಡಿದ ಮೇಲೆ ಇನ್ನು ಖುಷಿಯಾಗಿದ್ದರು. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಈ ಸಿನಿಮಾ ಗಳಿಕೆ ಮೇಲೆ ಇದೀಗ ಚರ್ಚೆ ಆರಂಭವಾಗಿದೆ.

ಪ್ರೇಕ್ಷಕನಿಗೆ ಇನ್ನಷ್ಟು ಹತ್ತಿರವಾದ ರಜಿನಿ

ರಜಿನಿಕಾಂತ್ ಈ ಸಿನಿಮಾದಲ್ಲಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ಶೇಡ್ ನಲ್ಲಿಯೂ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ ಈ ನಟ. ಒಂದೊಂದು ಶೇಡ್ ನಲ್ಲಿಯೂ ಒಂದೊಂದು ಬಗೆಯ ಪಾತ್ರಗಳು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕನಿಗೆ ರಜಿನಿಕಾಂತ್ ಇನ್ನಷ್ಟು ಹತ್ತಿರವಾಗಿದ್ದಾರೆ. ಅಷ್ಟೆ ಅಲ್ಲ ಈ ಸಿನಿಮಾ ಅದೆಷ್ಟೋ ಮಂದಿಯ ಬಾಳಲ್ಲಿ ನಡೆದ, ನಡೆಯುತ್ತಿರುವ ಕಥೆಗೆ ಹತ್ತಿರವಾಗಿದೆ. ಇನ್ನು ಅದೆಷ್ಟೋ ಮಂದಿಗೆ ರಜಿನಿಯ ಪಾತ್ರ ಮಾದರಿಯಾಗಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಮೊದಲ ದಿನವೇ ಯಶಸ್ವಿ ಪ್ರದರ್ಶನ ಕಂಡ  ಈ ಸಿನಿಮಾ ಎಷ್ಟು ಗಳಿಸಿದೆ ಅನ್ನೋದು ಮುಖ್ಯವಾಗಿದೆ.48ಕೋಟಿ ಗಳಿಕೆ

ಇನ್ನು ‘ಪೆಟ್ಟಾ’ ಸಿನಿಮಾ ಇಲ್ಲಿಯವರೆಗೆ ಬಿಡುಗಡೆಯಾದ ಎಲ್ಲಾ ಥಿಯೇಟರ್ ಗಳ ಲೆಕ್ಕಾ ತೆಗೆದುಕೊಂಡರೆ ಸುಮಾರು 48 ಕೋಟಿಯಷ್ಟು ಗಳಿಕೆ ಮಾಡಿದೆ ಅಂತಾ ವಿಮರ್ಷಕರು ತಿಳಿಸಿದ್ದಾರೆ. ಇನ್ನು, ಇಲ್ಲಿಯವರೆಗೇ ಇಷ್ಟು ಗಳಿಕೆ ಮಾಡಿರುವ ಈ ಚಿತ್ರ ಮುಂದಿನ ದಿನಗಳಲ್ಲಿ ಯಾವ ರೀತಿ ಗಳಿಕೆ ಮಾಡುತ್ತೆ ಅನ್ನೋದು ಕುತೂಹಲ. ಇನ್ನು, ‘ಪೆಟ್ಟಾ’ ಚಿತ್ರಕ್ಕೆ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ ಕಾರ್ತಿಕ್ ಸುಬ್ಬರಾಜ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

#kollywood #kollywoodmovies #girishjohar #tamilnadu #viswasam #pettacollection #rajinikanth #balkaninews

Tags