ಸುದ್ದಿಗಳು

ಕನ್ನಡದಲ್ಲಿ ‘ಪೆಟ್ಟಾ’ ಚಿತ್ರಕ್ಕೆ ರಜನಿ ಡಬ್ ಮಾಡುತ್ತಿಲ್ಲವಂತೆ!!

ಚೆನ್ನೈ,ಜ.12: ಸೂಪರ್ ಸ್ಟರ್ ರಜನಿಕಾಂತ್ ನಟಿಸಿರುವ ‘ಪೆಟ್ಟಾ’ ಸಿನಿಮಾ ಆಗಿದೆ.  ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.. ಈ ಚಿತ್ರವನ್ನು ಕರ್ನಾಟಕದಲ್ಲಿ ಜಾಕ್ ಮಂಜು ವಿತರಣೆಯನ್ನು ಮಾಡಿದ್ದಾರೆ. ಈ ಚಿತ್ರ ಕನ್ನಡಕ್ಕೆ ಡಬ್ ಆಗಲಿದೆ, ಸ್ವತಃ ರಜನಿ ತಮ್ಮ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದವು ಆದರೆ, ಇದೀಗ ಕನ್ನಡಿಗರಿಗೆ ನಿರಾಸೆಯಾಗಿದೆ.

Image result for petta movie

ರಜನಿ ಡಬ್ ಮಾಡುತ್ತಿಲ್ಲವಂತೆ

ರಜನಿ ಧ್ವನಿಯನ್ನು ಕನ್ನಡಕ್ಕೆ ತರಲು ವಿತರಕ ಜಾಕ್ ಮಂಜು ಹರಸಾಸ ನಡೆಸಿದ್ದರು… ಆದರೆ, ಇದೀಗ ರಜನಿ ಡಬ್ ಮಾಡುತ್ತಿಲ್ಲವಂತೆ. ಈ ಮಾತನ್ನು ಸ್ವತಃ ಜಾಕ್ ಮಂಜು ಅವರೇ ಖಚಿತ ಪಡಿಸಿದ್ದಾರಂತೆ.

ಚಿತ್ರವನ್ನು ಪುನಃ ಡಬ್ ಮಾಡಬೇಕಾಗುತ್ತದೆ

ಕನ್ನಡದಲ್ಲಿ ಚಿತ್ರದ ಡಬ್ಬಿಂಗ್ ಮುಗಿದಿದ್ದು, ಇದೀಗ ಕೇವಲ ರಜನಿ ಪಾತ್ರಕ್ಕೆ ಮಾತ್ರ ಡಬ್ ಮಾಡೋದು ಬಾಕಿ ಇತ್ತು..,  ಆದರೆ ಸದ್ಯಕ್ಕೆ ರಜನಿ ಧ್ವನಿ ನೀಡುತ್ತಿಲ್ಲವಾದುದರಿಂದ ಇಡೀ ಚಿತ್ರವನ್ನು ಪುನಃ ಡಬ್ ಮಾಡಬೇಕಾಗುತ್ತದೆ. ಇದೇ ಕಾರಣಕ್ಕೆ ಚಿತ್ರತಂಡ ಹಿಂದೇಟು ಹಾಕುತ್ತಿದೆಯಂತೆ.

#rajanikath #sandalwood #petta

Tags