ಸುದ್ದಿಗಳು

‘ಪೆಟ್ಟಾ’ ಚಿತ್ರ ನೋಡಿ ಥಿಯೇಟರ್ ನಲ್ಲಿಯೇ ವಿವಾಹವಾದ ಜೋಡಿ

ಚೆನೈ, ಜ.11: ರಜಿನಿಯ ಸಿನಿಮಾಗಳೇ ಹಾಗೇ ಬಿಡುಗಡೆಗೂ ಮುನ್ನವೇ ಬಿಡುಗಡೆ ನಂತರವೂ ಸುದ್ದಿಯಾಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ ಸಿನಿಮಾ ನೋಡಿ ಅದೆಷ್ಟೋ ಮಂದಿ ರಜಿನಿ ಅಭಿಮಾನಿಗಳು ಪ್ರೇರೇಪಿತರಾಗಿದ್ದೂ ಉಂಟು. ಇದೀಗ ‘ಪೆಟ್ಟಾ’ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಕಥೆಯನ್ನು ನೋಡಿದ ಜೋಡಿಯೊಂದು ಮದುವೆಯಾಗಿದೆ.

ಸಮಾಜದ ಆಗುಹೋಗುಗಳೇ ‘ಪೆಟ್ಟಾ’

ರಜಿನಿಯ ಸಿನಿಮಾಗಳು ಏನಾದ್ರೂ ವಿಶೇಷತೆ ಇದ್ದೇ ಇರುತ್ತದೆ. ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಯಾವ ರೀತಿ ಬೇಕೋ ಅದೇ ರೀತಿಯಾಗಿ ಸಿನಿಮಾ ತಯಾರು ಮಾಡಲಾಗಿದೆ. ಇನ್ನು ಪ್ರೇಕ್ಷಕನಿಗೆ ಮುಟ್ಟುವ ರೀತಿಯಲ್ಲಿ ‘ಪೆಟ್ಟಾ’ ಸಿನಿಮಾ ಕೂಡ ಇದೆ. ಇನ್ನು ಈ ಸಿನಿಮಾ ಕಥೆ ಕೂಡ ವಿಭಿನ್ನವಾಗಿದೆ. ಅಷ್ಟೆ ಅಲ್ಲ ಸಮಾಜದಲ್ಲಿ ನಡೆಯುವ ಘಟನೆಗಳು, ಸಮಾಜದ ಹಾಗೂ ಹೋಗು ಸೇರಿದಂತೆ, ಜಾತಿ ಜಾತಿಗಳ ನಡುವೆ ನಡೆಯುವ ರೀತಿಯನ್ನು ತೋರಿಸಲಾಗಿದೆ.ಥಿಯೇಟರ್‌ ನೇ ಮಂಟಪ ಮಾಡಿದ ಜೋಡಿ

ಇದೀಗ ಈ ಸಿನಿಮಾ ನೋಡಿದ ರಜಿನಿಯ ಅಭಿಮಾನಿಗಳು ಥಿಯೇಟರ್ ನನ್ನೇ ಮದುವೆ ಮಂಟಪ ಮಾಡಿಕೊಂಡಿದ್ದಾರೆ. ಚೆನ್ನೈನ ರಾಯಪೇಟೆಯಲ್ಲಿರೋ ವುಡ್‌ಲ್ಯಾಂಡ್ಸ್ ಎಂಬ ಥಿಯೇಟರ್‌ ನಲ್ಲಿ ರಜಿನಿ ಅಭಿಮಾನಿಗಳಾದ ಅನ್‌ಬರಸುರ್ ಹಾಗೂ ಕಾಮಾಕ್ಷಿ ಎಂಬ ಪ್ರೇಮಿಗಳು ಚಿತ್ರಮಂದಿರದಲ್ಲಿಯೇ ಮದುವೆಯಾಗಿದ್ದಾರೆ. ಇದೀಗ ಈ ಜೋಡಿ ಮದುವೆಯಾಗಿರೋದು ಎಲ್ಲರೂ ಹುಬ್ಬೇರಿಸುವಂತಿದೆ.

ಕಾರ್ತಿಕ್ ಸುಬ್ಬರಾಜ್ ನಿರ್ದೇಶನ

‘ಪೆಟ್ಟಾ’ ಚಿತ್ರಕ್ಕೆ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ ಕಾರ್ತಿಕ್ ಸುಬ್ಬರಾಜ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡ್ತಿದ್ದಾರೆ, ಹೇಳಿ ಕೇಳಿ ರಜನಿಕಾಂತ್ ಅಪ್ಪಟ ಅಭಿಮಾನಿಯಾಗಿರೋ ನಿರ್ದೇಶಕ ಕಾರ್ತಿಕ್, ರಜನಿಕಾಂತ್‌ ರನ್ನು ಯಾವ ರೀತಿ ತೆರೆಯ ಮೇಲೆ ತೋರಿಸಬೇಕು, ಅಭಿಮಾನಿಗಳು ರಜನಿಯನ್ನು ಹೇಗೆ ನೋಡೋಕೆ ಇಷ್ಟಪಡ್ತಾರೆ ಅನ್ನುವ ಅಂಶಗಳನ್ನು ತಲೆಯಲ್ಲಿಟ್ಟುಕೊಂಡು ಚಿತ್ರವನ್ನು ತಯಾರು ಮಾಡಿದ್ದಾರೆ ಅನ್ನುವುದಕ್ಕೆ ಈ ಪೆಟ್ಟಾ ಚಿತ್ರವೇ ಸಾಕ್ಷಿ.

#yash #yashmovies #sandalwood #karthiksubbaraj #pettatamilmovie #balkaninews

Tags