ಸುದ್ದಿಗಳು

ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾದ ರಜಿನಿಕಾಂತ್ ‘ಪೆಟ್ಟಾ’

‘ಪೆಟ್ಟಾ’ ಮೊದಲ ದಿನ ಹೇಗಿತ್ತು..?

ಚೆನೈ, ಜ.11: ರಜನಿಕಾಂತ್  ನಟಿಸಿರುವ, ಭಾರೀ ನಿರೀಕ್ಷೆಯ ಸಿನಿಮಾ ‘ಪೆಟ್ಟಾ’ ಚಿತ್ರ  ರಾಷ್ಟ್ರವ್ಯಾಪಿ ತೆರೆಕಂಡಿದೆ. ಮೊದಲ ದಿನದ ಪ್ರದರ್ಶನದಲ್ಲೇ ಅಭಿಮಾನಿಗಳು ರಜಿನಿಯ ಸ್ಟೈಲ್ ಗೆ ಮಾರು ಹೋಗಿದ್ದಾರೆ.  ‘2.0’ ಚಿತ್ರ ನವೆಂಬರ್ 29ಕ್ಕೆ ತೆರೆಕಂಡು ಭರ್ಜರಿ ಸಕ್ಸಸ್ ಕಂಡಿದ್ದು, ಇದರ ಬೆನ್ನಲ್ಲೇ ‘ಪೆಟ್ಟಾ’  ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

ಅಭಿಮಾನಿಗಳನ್ನು ನಿರಾಸೆ ಮಾಡದ ರಜಿನಿ

ಹೌದು, ಟೀಸರ್ ಹಾಗೂ ಟ್ರೇಲರ್ ನಲ್ಲಿಯೇ ಬಾರೀ ನಿರೀಕ್ಷೆ ಹುಟ್ಟುಹಾಕಿದ್ದ ‘ಪೆಟ್ಟಾ’ ಸಿನಿಮಾ ಅಭಿಮಾನಿಗಳ ನಿರೀಕ್ಷೆ ಹುಸಿ ಮಾಡಲಿಲ್ಲ. ತೆರೆ ಮೇಲೆ ಚಿತ್ರವನ್ನು ಅದ್ದೂರಿಯಾಗಿ ಕಾಣಬಹುದಾಗಿದ್ದು, ವಿಜೃಂಭಣೆಗೆ  ತಕ್ಕ ಹಾಗೆ ‘ಪೆಟ್ಟಾ’ ಅಭಿಮಾನಿಗಳಿಂದ ಉತ್ತಮವಾದ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಕಲೆಕ್ಷನ್ ಕೂಡ ಭರ್ಜರಿಯಾಗಿ ಮಾಡುತ್ತಿದೆ.  ‘ಪೆಟ್ಟಾ’ ಚಿತ್ರದಲ್ಲಿ ಬಹುತಾರಾಗಣವಿದ್ದು, ಪ್ರತಿಯೊಬ್ಬ ಕಲಾವಿದನು ಕೂಡ ತನಗೆ ಕೊಟ್ಟ ಕೆಲಸವನ್ನು ಶ್ರದ್ದೆಯಿಂದ ಮಾಡಿರುವುದು ತೆರೆಯ ಮೇಲೆ ಗೊತ್ತಾಗುತ್ತದೆ.

ಎರಡು ಶೇಡ್‌ ನಲ್ಲಿ ರಜನಿ

‘ಪೆಟ್ಟಾ’ ಚಿತ್ರದಲ್ಲಿ ರಜನಿ ಎರಡು ಶೇಡ್‌ ನಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ. ಒಂದು ಶೇಡ್‌ ನಲ್ಲಿ ರಜನಿಗೆ ಜೊತೆಯಾಗಿ ತ್ರಿಷಾ ಸ್ಕ್ರೀನ್‌ ಶೇರ್ ಮಾಡಿದ್ರೆ, ಮತ್ತೊಂದು ಶೇಡ್‌ ನಲ್ಲಿ ಸಿಮ್ರನ್ ಕಾಣಿಸಿಕೊಂಡಿದ್ದಾರೆ.. ಒಂದು ಕಡೆ ತನ್ನ ಸ್ನೇಹಿತನ ಮಗನನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಫ್ಯಾಮಿಲಿ ಕಳೆದುಕೊಳ್ಳುವ ಪೆಟ್ಟಾ ಮುಂದೆ ಯಾವ ರೀತಿ ಜೀವನದಲ್ಲಿ ಹೋರಾಟ ಮಾಡ್ತಾನೆ ಅನ್ನೋದನ್ನು ನೀವು ಥಿಯೇಟರ್‌ನಲ್ಲಿಯೇ ನೋಡ್ಬೇಕು.

ಕಮಾಲ್ ಮಾಡುತ್ತಿದೆ ‘ಪೆಟ್ಟಾ’

‘ಪೆಟ್ಟಾ’ ಚಿತ್ರಕ್ಕೆ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ ಕಾರ್ತಿಕ್ ಸುಬ್ಬರಾಜ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡ್ತಿದ್ದಾರೆ. ಇನ್ನು ಸಾವಿರಾರು ರಜನಿ ಅಭಿಮಾನಿಗಳಲ್ಲಿ ವಿಶೇಷವಾಗಿ ರಜನಿಯನ್ನೇ ಹೋಲುವ ಶ್ರೀನಿವಾಸ್ ತಮ್ಮ ಕಾರ್‌ ಗೆ ರಜನಿಕಾಂತ್‌ ರ ಸ್ಟಿಕ್ಕರ್ ಮಾಡಿಸಿಕೊಂಡು, ಜೊತೆಗೆ ಪೆಟ್ಟಾ ಸಿನಿಮಾದಲ್ಲಿ ರಜನಿಕಾಂತ್ ಗೆಟಪ್‌ ನಲ್ಲಿ ಆಗಮಿಸಿ ಸಿನಿಮಾವನ್ನು ನೋಡಿದರು. ಒಟ್ಟಿನಲ್ಲಿ ಕ್ಲಾಸ್ ಅಂಡ್ ಮಾಸ್ ಪ್ರೇಕ್ಷಕರಿಗೆ  ಫುಲ್ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಯಾವ ರೀತಿ ಚಿತ್ರ ಮೋಡಿ ಮಾಡಲಿದೆ ಎಂದು ಕಾದುನೋಡಬೇಕು.

#petta #balkaninews #rajinikanthandtrisha #kollywood #kollywood2019

Tags