ಸುದ್ದಿಗಳು

‘ಪೈಲ್ವಾನ್’ ಟೀಸರ್ ಗೆ ಫಿದಾ ಆದ ಕಲಾವಿದರು ಮತ್ತು ನಿರ್ದೇಶಕರು

ಬೆಂಗಳೂರು, ಜ.16:

ನಿನ್ನೆ ನಾಡಿನೆಲ್ಲೇಡೆ ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮ ಮನೆಮಾಡಿತ್ತು, ಆದ್ರೆ ಈ ಸಂಭ್ರಮವನ್ನು ಅಭಿಮಾನಿಗಳಲ್ಲಿ ಮತ್ತಷ್ಟು ಹೆಚ್ಚು ಮಾಡಿದ್ರು, ಕಿಚ್ಚ ಸುದೀಪ್. ಪೈಲ್ವಾನ್ ಚಿತ್ರದ ಟೀಸರ್ ನಿನ್ನೆ ಬಿಡುಗಡೆಯಾಗಿದೆ, ಸಂಜೆ ೪.೩೦ಕ್ಕೆ ಟೀಸರ್ ಬಿಡುಗಡೆಯಾಗ್ತಿದ್ದಂತೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ. ಕಿಚ್ಚ ಸುದೀಪ್ ತಮ್ಮ ಸಿನಿ ಕೆರಿಯರ್‌ ನಲ್ಲಿ ಎಂದೂ ಮಾಡಿರದ ಪಾತ್ರದಲ್ಲಿ ಕುಸ್ತಿಪಟು ಆಗಿ ಈ ಪೈಲ್ವಾನ್ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ, ಈ ಕುಸ್ತಿ ಗೆಟಪ್‌ ನಲ್ಲಿ ಕಿಚ್ಚ ಫುಲ್ ಘರ್ಜಿಸಿದ್ದಾರೆ ಎನ್ನುವುದಕ್ಕೆ ಈ ಟೀಸರ್ ಸಾಕ್ಷಿ.

ಕಿಚ್ಚನ ಬಗ್ಗೆ ಹಾಡಿ ಹೊಗಳಿದ ಅಭಿಮಾನಿಗಳು

ನಿನ್ನೆ ಬಿಡುಗಡೆಯಾದ ಪೈಲ್ವಾನ್ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಸೌಂಡ್ ಮಾಡಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದುಕೊಂಡಿದೆ. ಟೀಸರ್ ನೋಡಿದ ಅಭಿಮಾನಿಗಳು ಕಿಚ್ಚನ ಅವತಾರಕ್ಕೆ ಫಿದಾ ಆಗಿದ್ದಾರೆ. ಇನ್ನು ಅಷ್ಟೆ ಅಲ್ಲ ಸಿನಿಮಾ ಮಂದಿ ಕೂಡ ಈ ಟೀಸರ್ ನೋಡಿ ಫುಲ್ ಫಿದಾ ಆಗಿದ್ದಾರೆ. ಇನ್ನು ಟ್ವಿಟ್ಟರ ಖಾತೆಯಲ್ಲಿ ಕಿಚ್ಚನ ಬಗ್ಗೆ ಹಾಡಿ ಹೊಗಳಿದ್ದಾರೆ.

ಟೀಸರ್ ನೋಡಿದ ಸಿನಿಮಾ ಮಂದಿ ಹೇಳಿದ್ದೇನು?

ಇನ್ನು ಪೈಲ್ವಾನ್ ಟೀಸರ್ ನೋಡಿದ ಸಿನಿಮಾ ಮಂದಿ ಜೈ ಎಂದಿದ್ದಾರೆ. ಈ ಟೀಸರ್ ಕೇವಲ ಸ್ಯಾಂಡಲ್‌ವುಡ್‌ಗೆ ಸೀಮಿತವಾಗದೇ ಪೈಲ್ವಾನ್‌ನ ಟೀಸರ್ ಸೌಂಡ್ ಬಾಲಿವುಡ್‌ವರೆಗೂ ತಲುಪಿದೆ, ಬಾಲಿವುಡ್‌ ನ ಭಾಯಿಜಾನ್ ಸಲ್ಮಾನ್ ಖಾನ್ ಈ ಪೈಲ್ವಾನ್ ಟೀಸರ್ ನೋಡಿ ಭೇಷ್ ಎನ್ನುವ ಮೂಲಕ ಟ್ವೀಟ್ ಮಾಡಿದ್ದಾರೆ. ಇನ್ನೊಂದು ಹಂತಕ್ಕೆ ನೀವು ತಲುಪಿತ್ತೀರಾ ಅಂತಾ ಟ್ವಿಟ್ ಮಾಡಿದ್ದಾರೆ.

ಇನ್ನು, ನಟ ತರುಣ್ ಸುಧೀರ್ ಕೂಡ ಪೈಲ್ವಾನ್ ಗೆ ವಿಶ್ ಮಾಡಿದ್ದಾರೆ. ಏಕಾಗ್ರತೆ ಅನ್ನೋದು ತುಂಬಾ ಮುಖ್ಯವಾಗಿರುತ್ತದೆ. ಅದಕ್ಕೆ ಸಾಕ್ಷಿಯೇ ಈ ಸಿನಿಮಾ ಒಳ್ಳೆಯದಾಗಲೀ ಈ ಸಿನಿಮಾಗೆ ಹಾಗೂ ತಂಡಕ್ಕೆ ಅಂತಾ ಟ್ವಿಟ್ ಮಾಡಿದ್ದಾರೆ.

ಇನ್ನು ಬಹು ಭಾಷಾ ನಟ ಸೋನು ಸೂದ್ ಕೂಡ ಟೀಸರ್ ನೋಡಿ ಟ್ವಿಟ್ ಮಾಡಿದ್ದಾರೆ. ಅದ್ಬುತವಾದಂತಹ ಟೀಸರ್ ನೀಡಿದ್ದೀರಾ. ನಿಮಗೆ ಒಳ್ಳೆಯದಾಗಲಿ ಸಹೋದರ ಅಂತಾ ಟ್ವಿಟ್ ಮಾಡುವ ಮೂಲಕ ಕಿಚ್ಚನಿಗೆ ಸಾಥ್ ನೀಡಿದ್ದಾರೆ.

ಇನ್ನು ನಟ ಸಿದ್ದಾರ್ಥ ಕೂಡ ಕಿಚ್ಚನ ಪೈಲ್ವಾನ್ ಟಿಸರ್ ನೋಡಿ ಫಿದಾ ಆಗಿದ್ದಾರೆ. ಸರ್ ವಾಟ್ ಎ ಪವರ್, ನಿಜಕ್ಕೂ ಈ ಟೀಸರ್ ತುಂಬಾ ಚೆನ್ನಾಗಿದೆ. ಇದೊಂದು ಮಾದರಿಯಾಗಿದೆ. ಉಸಿರು ಬಿಗಿ ಹಿಡಿದು ನೋಡುವ ಟೀಸರ್ ಇದಾಗಿದೆ ಅಂತಾ ಟ್ವಿಟ್ ಮಾಡಿದ್ದಾರೆ.

ಇನ್ನು ತಮಿಳು ಆಕ್ಟರ್ ಧನುಷ್ ಕಿಚ್ಚನ ಟೀಸರ್‌ ಗೆ ಫಿದಾ ಆಗಿದ್ದಾರೆ. ನನ್ನ ಪ್ರೀತಿಯ ಸ್ನೇಹಿತ ಸುದೀಪ್, ನಿಜಕ್ಕೂ ಇಂಥಹ ಟೀಸರ್ ಅದ್ಬುತವಾಗಿದೆ. ತುಂಬಾ ಇಂಟರೆಸ್ಟಿಂಗ್ ಇದೆ. ಅಷ್ಟೆ ಅಲ್ಲ ಹಾರ್ಡ್ ವರ್ಕ್ ಎಷ್ಟಿದೆ ಎಂಬುದು ಟೀಸರ್ ನೋಡಿದ್ರೆ ಗೊತ್ತಾಗುತ್ತದೆ ಎಂದು ಟ್ವಿಟ್ ಮಾಡಿದ್ದಾರೆ.

ಇನ್ನು ನಿರ್ದೇಶಕ ನಟ ರಿಷಬ್ ಶೆಟ್ಟಿ ಕೂಡ ಟ್ವಿಟ್ ಮಾಡಿದ್ದು, ಹೊಸ ಲುಕ್‌ ನಲ್ಲಿ ಅಕಾಡಕ್ಕಿಳಿದು ಮಸ್ತ್ ಆಗಿ ತೊಡೆ ತಟ್ಟಿದ್ದಾರೆ. ಸುದೀಪ್ ಸರ್ ಅಭಿಮಾನಿಗಳಾದ ನಮಗೆ ಸಂಕ್ರಾಂತಿಗೆ ಇದಕ್ಕಿಂತ ಎಕೈಸ್ಟಿಂಗ್ ಉಡುಗೊರೆ ಮತ್ತೊಂದಿಲ್ಲ ಎಂದಿದ್ದಾರೆ. ಇನ್ನು ಇಷ್ಟೆ ಅಲ್ಲ ಟೀಸರ್ ನೋಡಿದ ಎಲ್ಲರೂ ಕೂಡ ಕಿಚ್ಚ ಹಾಗೂ ಟೀಸರ್ ಬಗ್ಗೆ ತಮ್ಮದೇ ಆದ ಭಾವನೆಗಳನ್ನು ಟ್ವಿಟ್ಟರ್ ಮೂಲಕ ಹೊರ ಹಾಕಿದ್ದಾರೆ.

ನಿರೀಕ್ಷೆ ಹೆಚ್ಚಿಸಿದ ಟೀಸರ್

ಹೆಬ್ಬುಲಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಕೃಷ್ಣ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದು, ಟೀಸರ್ ಮೂಲಕವೇ ಭರವಸೆ ಮೂಡಿಸಿದ್ದಾರೆ. ಸ್ವಪ್ನ ಕೃಷ್ಣ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಪೈಲ್ವಾನ್‌ನ ಚಿತ್ರೀಕರಣ ಕೂಡಾ ಭರ್ಜರಿಯಾಗಿ ಸಾಗುತ್ತಿದ್ದು ಸದ್ಯ ಚಿತ್ರದ ಟೀಸರ್ ಮೂಲಕ ಅಭಿಮಾನಿಗಳಲ್ಲಿ ಹೊಸ ಕುತೂಹಲ ನಿರೀಕ್ಷೆ ಹೆಚ್ಚಿಸಿದೆ.

#sandalwood #kannadamovies #phailwan #kannadamovieteaser #salmankhanandsudeep #swapnakrishna #krishanhebbuli #balkaninews

Tags