ಸುದ್ದಿಗಳು

ರಾಜಸ್ಥಾನದ ಮರಭೂಮಿಯಲ್ಲಿ “ಭರಾಟೆ” ಪೋಟೋ ಶೂಟ್

‘ಭರ್ಜರಿ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಚೇತನ್ ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಕಾಂಭಿನೇಷನ್ನಿನ “ಭರಾಟೆ” ಚಿತ್ರತಂಡವು ಕೆಲವು ದಿನಗಳ ಹಿಂದೆಯಷ್ಟೇ ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಮುಗಿಸಿತ್ತು. ಇದೀಗ ಚಿತ್ರತಂಡವು ರಾಜಸ್ಥಾನದ ಮರಭೂಮಿಯಲ್ಲಿ ಪೊಟೋ ಶೂಟ್ ಮಾಡಲಾಗುತ್ತಿದೆ.

ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಪೋಟೋ ಶೂಟ್ ರಾಜಸ್ಥಾನದ ಜೋದಪುರದಲ್ಲಿ ನಡೆಯುತ್ತಿರುವುದು ವಿಶೇಷವಾಗಿದ್ದು, ಅಲ್ಲಿನ ಮರುಭೂಮಿಯ ಸುಡುಬಿಸಿಲಿನಲ್ಲೂ ನಟನಿಗಾಗಿ ವಿಶೇಷ ಫೋಟೋ ಶೂಟ್ ಮಾಡಲಾಗುತ್ತಿದೆ. ಸೋಮವಾರ ನಾಯಕ ಮುರುಳಿ, ನಿರ್ದೇಶಕರಾದ ಚೇತನ್ ಕುಮಾರ್, ಸೇರಿದಂತೆ ಚಿತ್ರತಂಡವು ಜೋದಪುರಕ್ಕೆ ಪ್ರಯಾಣ ಬೆಳೆಸಿದ್ದು, ಜೊತೆಯಲ್ಲಿ ಪೋಟೋಗ್ರಾಫರ್ ಮತ್ತು ಚಿತ್ರದ ಕ್ಯಾಮರಮ್ಯಾನ್ ಭುವನ್ ಗೌಡರವರೂ ಸಹ ಜೊತೆಗೆ ಹೊರಟಿದ್ದಾರೆ.

ರಾಜಸ್ತಾನದಲ್ಲಿ 20 ದಿನಗಳ ಶೂಟಿಂಗ್ ಗೆ ಚಿತ್ರ ತಂಡ ಯೋಜನೆ ಹಾಕಿಕೊಂಡಿದ್ದು ಇದರ ಪೂರ್ವಭಾವಿಯಾಗಿ ಹಲವು ಅದಾಗಲೇ ರಾಜಸ್ತಾನವನ್ನು ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕ ಶ್ರೀಮುರುಳಿ ಬಹಳ ದಿನಗಳ ನಂತರ ಪಕ್ಕಾ ಪ್ಯಾಮಿಲಿ ಹುಡುಗನಾಗಿ ನಟಿಸುತ್ತಿದ್ದು, ಕಿಸ್ ಚಿತ್ರದ ಮೂಲಕ ಗಮನ ಸೆಳೆದಿರುವ ಶ್ರೀಲೀಲಾ ಭರಾಟೆಯಲ್ಲಿ ಶ್ರೀ ಮುರುಳಿಗೆ ಜೋಡಿಯಾಗಿದ್ದಾರೆ.

ಪೋಟೋ ಶೂಟ್ ಬಳಿಕ ಚಿತ್ರದ ಮುಹೂರ್ತ ನಡೆಯಲಿದ್ದು, ಈಗಾಗಲೇ ಉಗ್ರಂ, ರಥಾವರ, ಮಪ್ತಿ ಚಿತ್ರಗಳ ನಂತರ ಶ್ರೀ ಮುರುಳಿ ನಟಿಸುತ್ತಿರುವ “ಭರಾಟೆ” ಚಿತ್ರವು ನಿರೀಕ್ಷೆ ಮೂಡಿಸಿದೆ.

 

@ sunil javali

Tags

Related Articles

Leave a Reply

Your email address will not be published. Required fields are marked *

Close